2028ರೊಳಗೆ ಕ್ಷೇತ್ರದ ಎಲ್ಲ ರಸ್ತೆಗಳ ಅಭಿವೃದ್ಧಿ

KannadaprabhaNewsNetwork |  
Published : Jan 16, 2026, 03:15 AM IST
ಇಂಡಿ | Kannada Prabha

ಸಾರಾಂಶ

ಕಾಂಗ್ರೆಸ್ ಪಕ್ಷಕ್ಕಾಗಿ ಇಡೀ ಜೀವನ ಸವೆಸಿದಕ್ಕಾಗಿ ಹಿರಿಯ ಜೀವಿ ಭೀಮಣ್ಣ ಕವಲಗಿಗೆ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದಕ್ಕೆ ಲಿಂಬೆ ಬೆಳೆಗಾರರ ಪರವಾಗಿ ಅಭಿನಂದಿಸುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಕಾಂಗ್ರೆಸ್ ಪಕ್ಷಕ್ಕಾಗಿ ಇಡೀ ಜೀವನ ಸವೆಸಿದಕ್ಕಾಗಿ ಹಿರಿಯ ಜೀವಿ ಭೀಮಣ್ಣ ಕವಲಗಿಗೆ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದಕ್ಕೆ ಲಿಂಬೆ ಬೆಳೆಗಾರರ ಪರವಾಗಿ ಅಭಿನಂದಿಸುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಅಗರಖೇಡ ಗ್ರಾಮದಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿಗೆ ಗ್ರಾಮಸ್ಥರು ಹಮ್ಮಿಕೊಂಡ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಡನೂರ ಹಾಗೂ ಅಗರಖೇಡ ಗ್ರಾಮದ ಮಧ್ಯ ಅವಿನಾಭಾವ ಸಂಬಂಧ ಇದೆ. 40 ವರ್ಷಗಳ ವರೆಗೆ ನಮ್ಮ ಕುಟುಂಬಕ್ಕೆ ರಾಜಕೀಯವಾಗಿ ಬೆಳೆಸುವುದರಲ್ಲಿ ಅಗರಖೇಡ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಹೀಗಾಗಿ ಅಗರಖೇಡ ಮೇಲೆ ಸ್ವಲ್ಪ ಕಾಳಜಿ ಹೆಚ್ಚಿದೆ ಎಂದರು.

2028ರೊಳಗಾಗಿ ಕ್ಷೇತ್ರದ ಎಲ್ಲ ರಸ್ತೆಗಳು ಅಭಿವೃದ್ಧಿ ಪಡಿಸಲಾಗುತ್ತದೆ. ಒಂದು ವೇಳೆ ಆಗದಿದ್ದರೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನು ಮಾಡಿದ ಅಭಿವೃದ್ಧಿ ಕೆಲಸಗಳು ಕ್ಷೇತ್ರದ ಜನತೆಗೆ ತೀರ್ಮಾನಿಸಲು ಬಿಡುತ್ತೇನೆ. ನಾನು ಚುನಾವಣೆಯಿಂದ ಹಿಂದೆ ಸರಿದ ದಿನ ಭೀಮಾನದಿ ಮರಳು ಮಾಫಿಯಾ ಆರಂಭವಾಗುತ್ತದೆ. ಕ್ಷೇತ್ರದಲ್ಲಿ ಅಶಾಂತತೆ ಉಂಟಾಗುತ್ತದೆ ಎಂದರು. ಆಡಳಿತದಲ್ಲಿ ಆಗಲಿ, ವೈಯಕ್ತಿಕವಾಗಲಿ ನನ್ನಿಂದ ಗುಂಡಾಗಿರಿ, ಅನ್ಯಾಯ ಆಗಿದೆ ಎಂದು ಜನರು ಹೇಳಿದರೆ ಸಭಾಪತಿ ಯುಟಿ ಖಾದರಗೆ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಮೂಲಕ ಸಾವಳಸಂಗ ಗುಡ್ಡದ ಮೇಲೆ ನೀರು ಹರಿಸಿ ಮುಂದಿನ ಚುನಾವಣೆಗೆ ಆಶೀರ್ವಾದಕ್ಕಾಗಿ ಜನರ ಬಳಿ ಹೋಗುತ್ತೇನೆ. ಬಡವರ ಮಕ್ಕಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಿಟಿಟಿಸಿ ಕಾಲೇಜು, ಕಾರ್ಮಿಕ ಮಕ್ಕಳ ವಸತಿ ಶಾಲೆ, ಸರ್ಕಾರಿ ಪಿಯು, ಪ್ರಥಮ ದರ್ಜೆ ಕಾಲೇಜುಗಳನ್ನು ಮಂಜೂರು ತಂದಿದ್ದೇನೆ. ವಿಜಯಪುರ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಪರಿಹಾರ ಇಂಡಿ ತಾಲೂಕಿಗೆ ಬಂದಿದೆ ಎಂದರು.

ಗ್ರಾಮಸ್ಥರ ಸನ್ಮಾನ ಸ್ವೀಕರಿಸಿ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ ಮಾತನಾಡಿದರು. ಅಭಿನವ ಪ್ರಭುಲಿಂಗ ಮಹಾಸ್ವಾಮೀಜಿ ಅಗರಖೇಡ ಸಾನ್ನಿಧ್ಯ ವಹಿಸಿದ್ದರು.

ನ್ಯಾಯವಾದಿ ಛಾಯಾಗೋಳ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಇಲಿಯಾಸ ಬೊರಾಮಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ಜೀತಪ್ಪ ಕಲ್ಯಾಣಿ, ಅಣ್ಣಾರಾಯ ಬಿದರಕೋಟಿ, ಧನರಾಜ ಮುಜಗೊಂಡ, ಹುಸೇನಿ ಪೈಲ್ವಾನ್, ಸದಾಶಿವ ಪ್ಯಾಟಿ, ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಬಡಿಗೇರ, ಇಮ್ಮಣ್ಣ ಕೊರಬು, ವಿಠಲಗೌಡ ಈ ಪಾಟೀಲ, ರುದ್ರಗೌಡ ಅಲಗೊಂಡ, ಜಂಗಲಗಿ ಸಾಹುಕಾರ, ಮಹೇಶ ಭಿಸೆ ವೇದಿಕೆ ಮೇಲಿದ್ದರು.

ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ಸಾವಳಗಿ, ಚಂದುಸಾಹುಕಾರ ಮರಗೂರ, ವಿಠಲಗೌಡ ಪಾಟೀಲ, ಸುರೇಶ ಹತ್ತರಕಿ, ಸೊಮಣ್ಣ ರೂಗಿ, ಮಲ್ಲು ಮಡ್ಡಿಮನಿ, ಎನ್.ಎಸ್.ಕೊಳೆಕರ, ಸತ್ಯಪ್ಪ ತಳವಾರ, ಮಲ್ಲುಗೌಡ ಪಾಟೀಲ, ಮಹಾದೇವ ರಾಠೋಡ, ಸಿದ್ದಪ್ಪ ಕೊರೆ, ವಿಠ್ಠಲ ತೇಲಿ, ಸುಭಾಷ ಪುತ್ರಪ್ಪ ಅಂದೇವಾಡಿ, ಶಾಮಣ್ಣ ಮೊರೆ, ವಿಜಯಕುಮಾರ ಕವಲಗಿ, ಮಹಾದೇವ ಶಿರಗೂರ, ಮಹಾದೇವ ಹತ್ತರಕಿ, ಸದಾಶಿವ ಶಿರೂರ, ಅರ್ಜುನ ಮೊರೆ, ಗಣಪತಿ ಹಾವಳಗಿ ಇತರರಿದ್ದರು.

ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಅಗರಖೇಡ ಗ್ರಾಮದ ಹಿರಿಯ ವ್ಯಕ್ತಿ ಆಗಿದ್ದಾರೆ ಎಂಬ ಅಭಿಮಾನದಿಂದ ಗ್ರಾಮಸ್ಥರು ಪಕ್ಷಬೇಧ ಮರೆತು ಸನ್ಮಾನ, ಸತ್ಕಾರ ಮಾಡಿದಕ್ಕೆ ಅಗರಖೇಡ ಗ್ರಾಮಸ್ಥರಿಗೆ ಅಭಿನಂದಿಸುವೆ. ಭೀಮಣ್ಣ ಕವಲಗಿ ಅವರ ಅಧ್ಯಕ್ಷತೆಯಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಎತ್ತರಕ್ಕೆ ಬೆಳೆಯಲಿ.

ಯಶವಂತರಾಯಗೌಡ ಪಾಟೀಲ, ಶಾಸಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಕೀಯ ಪಥ ಬದಲಾಗಲು ನಮ್ಮಲ್ಲಿದೆ ಹೈಕಮಾಂಡ್‌: ಸಚಿವ ತಿಮ್ಮಾಪೂರ
ದುಡಿದ ಹಣದಲ್ಲಿ ಒಂದು ಭಾಗ ಸಮಾಜ ಸೇವೆಗೆ