ಗ್ರಾಹಕರು, ರೈತರ ಸಹಕಾರದಿಂದ ಬ್ಯಾಂಕಿನ ಅಭಿವೃದ್ಧಿ: ಎಸ್.ಮುಕುಂದ

KannadaprabhaNewsNetwork |  
Published : May 18, 2026, 01:45 AM IST
17ಕೆಎಂಎನ್ ಡಿ17 | Kannada Prabha

ಸಾರಾಂಶ

ರೈತರಿಗೆ ವ್ಯವಸಾಯ ಮಾಡಲು, ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಅಥವಾ ಮನೆ ನಿರ್ಮಿಸಲು ಬೇಕಾದ ಸಾಲ ಸೌಲಭ್ಯಗಳನ್ನು ಬ್ಯಾಂಕ್‌ನ ನಿಯಮಾವಳಿ ಪ್ರಕಾರ ನೀಡಲಾಗುತ್ತಿದೆ. ಬ್ಯಾಂಕ್‌ನಿಂದ ಸಾಲ ಆರ್ಥಿಕ ಮುಗ್ಗಟ್ಟುಗಳನ್ನು ನಿವಾರಿಸಿಕೊಂಡು ಸಕಾಲಕ್ಕೆ ಸಾಲ ಮರುಪಾವತಿಸಿದರೆ ಬ್ಯಾಂಕ್ ಅಭಿವೃದ್ಧಿ ಹೊಂದುತ್ತವೆ.

ಕನ್ನಡಪ್ರಭ ವಾರ್ತೆ ಹಲಗೂರು

ರೈತರು, ಗ್ರಾಹಕರ ಸಹಕಾರದಿಂದ ಬ್ಯಾಂಕ್‌ಗಳ ಅಭಿವೃದ್ಧಿಯಾಗುತ್ತವೆ. ಇದನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಆರ್ಥಿಕ ಸಮಸ್ಯೆ ನಿವಾರಿಸಿಕೊಳ್ಳಬೇಕು ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಎಜಿಎಂ ಅಧಿಕಾರಿ ಎಸ್.ಮುಕುಂದ ತಿಳಿಸಿದರು.

ಚೌಕಿ ಮಠದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸ್ಥಳಾಂತರಗೊಳಿಸಿ ಉದ್ಘಾಟಿಸಿದ ನಂತರ ಮಾತನಾಡಿ, ಬ್ಯಾಂಕ್‌ನಲ್ಲಿ ರೈತರಿಗೆ ಬ್ಯಾಂಕಿನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ನೀವು ಬ್ಯಾಂಕ್‌ನಲ್ಲಿ ಹಣ ಠೇವಣಿ ಇಡುವುದರ ಮುಖಾಂತರ ಸಹಕಾರ ನೀಡಿದರೆ ಬ್ಯಾಂಕ್ ಅಭಿವೃದ್ಧಿ ಹೊಂದಲು ಸಹಕಾರಿ ಎಂದರು.

ರೈತರಿಗೆ ವ್ಯವಸಾಯ ಮಾಡಲು, ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಅಥವಾ ಮನೆ ನಿರ್ಮಿಸಲು ಬೇಕಾದ ಸಾಲ

ಸೌಲಭ್ಯಗಳನ್ನು ಬ್ಯಾಂಕ್‌ನ ನಿಯಮಾವಳಿ ಪ್ರಕಾರ ನೀಡಲಾಗುತ್ತಿದೆ. ಬ್ಯಾಂಕ್‌ನಿಂದ ಸಾಲ ಆರ್ಥಿಕ ಮುಗ್ಗಟ್ಟುಗಳನ್ನು ನಿವಾರಿಸಿಕೊಂಡು ಸಕಾಲಕ್ಕೆ ಸಾಲ ಮರುಪಾವತಿಸಿದರೆ ಬ್ಯಾಂಕ್ ಅಭಿವೃದ್ಧಿ ಹೊಂದುತ್ತವೆ ಎಂದರು.

ರೈತರಾಗಲಿ, ಗ್ರಾಹಕರಾಗಲಿ ಸಾಲ ಪಡೆದು ಮರು ಪಾವತಿ ಮಾಡಿದರೆ ನಿಮಗೆ ಮತ್ತೆ ಸಾಲ ಸೌಲಭ್ಯಗಳು ದೊರಕುತ್ತದೆ. ರೈತರು ಅವಶ್ಯಕತೆ ಇದ್ದಲ್ಲಿ ಮಾತ್ರ ಬ್ಯಾಂಕ್‌ನಿಂದ ಸಾಲ ಪಡೆದುಕೊಳ್ಳಬೇಕು ಎಂದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಂಡ್ಯ ಶಾಖೆ ಮುಖ್ಯ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ಮಹಾರಾಷ್ಟ್ರದಲ್ಲಿ 3 ರು. ಬಡ್ಡಿ ಆಸೆಗಾಗಿ ಖಾಸಗಿ ಕಂಪನಿಗಳಿಗೆ ಹಣವನ್ನು ತೊಡಗಿಸಿ 4,600 ಕೋಟಿ ರು. ಕಳೆದುಕೊಂಡಿದ್ದಾರೆ. ಬೇರೆ ಕಂಪನಿಗಳಲ್ಲಿ ಹೆಚ್ಚು ಬಡ್ಡಿ ನೀಡಲಾಗುತ್ತದೆ ಎಂಬ ಆಸೆಗಳಿಗೆ ಒಳಗಾಗಬೇಡಿ ಎಂದರು.

ಈಗಾಗಲೇ ಎಷ್ಟೋ ಜನ ಹಣವನ್ನು ತೊಡಗಿಸಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ನೀವು ಬ್ಯಾಂಕ್‌ನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡುವ ಮೂಲಕ ನಿಮ್ಮ ಹಣ ಭದ್ರತೆ ಮಾಡಿಕೊಳ್ಳಬೇಕು. ಈಗ ಹಣ ತೊಡಗಿಸಿದರೆ ನಿಮಗೆ 60 ವರ್ಷ ತುಂಬಿದ ಮೇಲೆ ದುಡಿಯುಲು ಆಗದಿದ್ದಾರೆ ನೆರವಾಗುತ್ತದೆ ಎಂದರು.

ಸರ್ಕಾರಿ ಕೆಲಸದಲ್ಲಿರುವವರಿಗೆ ಪಿಂಚಣಿ ಬರುತ್ತದೆ. ಆದರೆ, ರೈತರಿಗೆ ದುಡಿದೇ ತಿನ್ನಬೇಕು. ಬ್ಯಾಂಕ್‌ನಲ್ಲಿ ಪಿಂಚಣಿ ಯೋಜನೆ ಇದೆ. ಅದನ್ನು ಸದ್ಬಳಕೆ ಮಾಡಿಕೊಂಡು ನಿಮ್ಮ ಮುಂದಿನ ಜೀವನಕ್ಕೆ ಈಗಿನಿಂದಲೇ ಬ್ಯಾಂಕ್‌ನಲ್ಲಿ ಹಣ ತೊಡಗಿಸಿ ಎಂದರು.

ಮಂಡ್ಯ ಶಾಖೆ ವ್ಯವಸ್ಥಾಪಕರಾದ ಶ್ರೀನಿವಾಸ್ ಮಾತನಾಡಿ, ಬ್ಯಾಂಕ್‌ನಿಂದ ರೈತರಿಗೆ, ಬಡ ಜನತೆಗೆ ಹಾಗೂ ಹೆಣ್ಣು ಮಕ್ಕಳಿಗೆ ಇತ್ತೀಚಿನ ದಿನಗಳಲ್ಲಿ ಸಾಲ ಸೌಲಭ್ಯ ದೊರಕುತ್ತಿಲ್ಲ. ಏಕೆಂದರೆ ಅವರು ಸಕಾಲಕ್ಕೆ ಮರುಪಾವತಿ ಮಾಡದೆ ಸರ್ಕಾರ ನಾವು ಮಾಡಿದ ಸಾಲಮನ್ನಾ ಮಾಡುತ್ತದೆ ಎಂಬ ದೃಷ್ಟಿಯಿಂದ ಹಣವನ್ನು ಬ್ಯಾಂಕಿಗೆ ಕಟ್ಟುತ್ತಿಲ್ಲ. ಯಾರೇ ಆದರೂ ಸಾಲ ಮರು ಪಾವತಿ ಮಾಡದಿದ್ದರೆ ಸಿಬಿಲ್ ಅಂಕಿ ಅಂಶವನ್ನು ಪತ್ತೆ ಮಾಡಿ ಅವರಿಗೆ ಮುಂದೆ ಯಾವುದೇ ಬ್ಯಾಂಕ್‌ನಿಂದ ಸಾಲವನ್ನು ಪಡೆಯಲು ಅವಕಾಶ ಇರದಂತೆ ಮಾಡಲಾಗುತ್ತದೆ ಎಚ್ಚರಿಕೆ ನೀಡಿದರು.

ಹಲಗೂರು ಶಾಖೆ ವ್ಯವಸ್ಥಾಪಕ ಜಗದೀಶ್ ಬಾಬು ಮಾತನಾಡಿ, ನಮ್ಮ ಬ್ಯಾಂಕ್‌ಗೆ ಬರುವ ಗ್ರಾಹಕರ ಜೊತೆ ಸ್ನೇಹ ಬಾಂಧವ್ಯದಿಂದ ವರ್ತಿಸುವ ಜೊತೆಗೆ ಯಾರಿಗೂ ತೊಂದರೆ ಆಗದಂತೆ ಸಿಬ್ಬಂದಿಯವರು ಕರ್ತವ್ಯ ನಿರ್ವಹಿಸುತ್ತೇವೆ. ಬ್ಯಾಂಕ್‌ನ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.

ಈ ವೇಳೆ ಹಿಂದೆ ಕರ್ತವ್ಯ ನಿರ್ವಹಿಸಲು ಬ್ಯಾಂಕ್‌ಗೆ ಬಾಡಿಗೆ ನೀಡಿದ ಮಾಲೀಕರಾದ ಎಸ್.ರಜಿನಿ ರಾಜೇಂದ್ರ, ನೂತನವಾಗಿ ಬ್ಯಾಂಕ್ ಕರ್ತವ್ಯ ನಿರ್ವಹಿಸಲು ಬಾಡಿಗೆಗೆ ಬಿಲ್ಡಿಂಗ್ ನೀಡಿದ ಮಾಲೀಕರಾದ ಹೊನ್ನೇಗೌಡರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಸಿಬ್ಬಂದಿ ರಘುನಂದನ, ನವೀನ್ ಕುಮಾರ್, ನಾಗವೇಣಿ, ಮರಿಸ್ವಾಮಿ ,ಮೋಹನ್ ಕುಮಾರ್, ಗ್ರಾಹಕರಾದ ಎನ್.ಕೆ. ಕುಮಾರ್, ರಮೇಶ್, ಲಕ್ಷ್ಮಿ, ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖಾಸಗಿ ಶಾಲೆ ಆರಂಭ, ಮಾರಾಟ ಈಗ ಸರಳ
ಮೋದಿ ಸರ್ಕಾರದಿಂದ ದಾಖಲೆ ನಿರುದ್ಯೋಗ: ಮಂಜುನಾಥ್‌