ಸಾಲ ಮರುಪಾವತಿಯಿಂದ ಸಹಕಾರ ಸಂಘ ಅಭಿವೃದ್ಧಿ ಸಾಧ್ಯ

KannadaprabhaNewsNetwork |  
Published : Feb 27, 2024, 01:33 AM IST
ಪೋಟೊ: 26 ಎಚ್‌ಎಚ್‌ಆರ್ ಪಿ 05ಅರಹತೋಳಲು ಸಹಕಾರ ಸಂಘಕ್ಕೆ ನೂತನವಾಗಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ್ ಹಾಗೂ ಪಾಲಕ್ಷಪ್ಪನವರಿಗೆ ಮಾಜಿ ಶಾಸಕ ಅಶೋಕ್ ನಾಯ್ಕ್ ಅಭಿನಂದಿಸಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಎಲ್ ಷಡಾಕ್ಷರಿ, ರಾಜೇಶ್ ಪಾಟೀಲ್, ಶ್ರೀನಿವಾಸ್ ಇತರರಿದ್ದಾರೆ. | Kannada Prabha

ಸಾರಾಂಶ

ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದಾಗ ಸಹಕಾರ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ. ಸಂಘಕ್ಕೆ ಹೆಚ್ಚಿನ ಸದಸ್ಯರನ್ನು ನೋಂದಾಯಿಸಿಕೊಂಡು ಸಂಘದ ಕ್ಷೇತ್ರವನ್ನು ವಿಸ್ತಾರ ಮಾಡಿಕೊಳ್ಳಬೇಕು. ಗ್ರಾಮದ ಪ್ರತಿಯೊಬ್ಬರು ಷೇರು ಹಾಕಿ ಖಾತೆ ತೆರೆದು, ನಿಯಮಿತವಾಗಿ ವ್ಯವಹರಿಸಬೇಕು ಎಂದು ಮಾಜಿ ಶಾಸಕ ಅಶೋಕ್‌ ನಾಯ್ಕ್‌ ಹೊಳೆಹೊನ್ನೂರಿನಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದಾಗ ಸಹಕಾರ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಶಾಸಕ ಅಶೋಕ್‌ ನಾಯ್ಕ್ ಹೇಳಿದರು.

ಇಲ್ಲಿಗೆ ಸಮೀಪದ ಅರಹತೊಳಲಿನಲ್ಲಿ ಸೋಮವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸಂಘಕ್ಕೆ ಹೆಚ್ಚಿನ ಸದಸ್ಯರನ್ನು ನೋಂದಾಯಿಸಿಕೊಂಡು ಸಂಘದ ಕ್ಷೇತ್ರವನ್ನು ವಿಸ್ತಾರ ಮಾಡಿಕೊಳ್ಳಬೇಕು. ಗ್ರಾಮದ ಪ್ರತಿಯೊಬ್ಬರು ಷೇರು ಹಾಕಿ ಖಾತೆ ತೆರೆದು, ನಿಯಮಿತವಾಗಿ ವ್ಯವಹರಿಸಬೇಕು. ರೈತರು ಸಂಘದಲ್ಲಿ ದೊರೆಯುವ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡರೆ ರೈತರು ಆರ್ಥಿಕವಾಗಿ ಸದೃಢವಾಗಬಹು. ಜೊತೆಗೆ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಷಡಾಕ್ಷರಿ ಮಾತನಾಡಿ, ರೈತಾಪಿಗಳಿಗೆ ಸಹಕಾರಿ ಕ್ಷೇತ್ರದಲ್ಲಿ ವೈವಿಧ್ಯಮಯ ಹಣಕಾಸಿನ ನೆರವುಗಳು ಲಭಿಸುತ್ತಿವೆ. ಪ್ರತಿಯೊಬ್ಬರು ಸಹಕಾರಿ ಬ್ಯಾಂಕ್‌ಗಳಲ್ಲಿ ವ್ಯವಹಾರ ಮಾಡಬೇಕು. ಕೃಷಿಕರಿಗೆ ಸಿಗುವ ಕಡಿಮೆ ಬಡ್ಡಿದರದ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರ ಸುಸ್ತಿ ಕೃಷಿ ಸಾಲಗಳಿಗೆ ಬಡ್ಡಿ ಮನ್ನಾ ರಿಯಾಯಿತಿ ನೀಡಿದೆ. ನಿಗದಿತ ಸಮಯದಲ್ಲಿ ಸುಸ್ತಿದಾರರು ಅಸಲು ಮೊತ್ತವನ್ನು ಪಾವತಿಸಿ ಋಣ ಮುಕ್ತರಾಗಬಹುದು ಎಂದರು.

ಸಂಘದ ನೂತನ ಅಧ್ಯಕ್ಷ ಎ.ಆರ್. ಬಸವರಾಜಪ್ಪ ಮಾತನಾಡಿ, ನಮ್ಮದು ಸಂಘ ಸಹಕಾರಿ ಕ್ಷೇತ್ರದಲ್ಲಿ ಇನ್ನೂ ಮೊದಲನೇ ಹೆಜ್ಜೆಯನ್ನು ಇಡುತ್ತಿದೆ. ಇಲ್ಲಿಯವರೆಗೂ ಸಂಘದ ಅಧಿಕಾರ ವಹಿಸಿಕೊಂಡ ಪ್ರತಿಯೊಬ್ಬರೂ ಸಂಘದ ಏಳಿಗೆಗೆ ಒಂದಿಲ್ಲೊಂದು ರೀತಿ ಪ್ರಯತ್ನ ಪಟ್ಟಿದ್ದಾರೆ. ಅವರು ಮತ್ತು ಸದಸ್ಯರ ಸಹಭಾಗಿತ್ವದ ಫಲವಾಗಿ ನಮ್ಮ ಸಂಘ ಲಾಭ ಗಳಿಗೆಯ ಕಡೆಗೆ ದಾಪುಗಾಲಿಡುತ್ತಿದೆ. ಮುಂದಿನ ದಿನಗಳಲ್ಲಿ ಸಂಘದ ಎಲ್ಲ ನಿರ್ದೇಶಕರ ಮತ್ತು ಗ್ರಾಮದ ಹಿರಿಯರ ಸಹಕಾರದಿಂದ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.

ಮುಖಂಡರಾದ ರಾಜೇಶ್ ಪಾಟೀಲ್. ಸುಬ್ರಮಣ್ಣಿ, ಮೂಡಬಾಗಿಲು ಚಂದ್ರಶೇಖರ್, ಎ.ಎಂ. ಮಲ್ಲಿಕಾರ್ಜುನ್, ಮಹೇಶ್ವಪ್ಪ, ಸಿ.ಪಿ.ಚಂದ್ರಶೇಖರ್, ಎಲ್.ಎಸ್. ರವಿಕುಮಾರ್, ಶೇಖರಪ್ಪ, ಜಯದೇವಪ್ಪ, ಯತೀಶ್ವರಾಚಾರ್, ರೇಖಾ, ಸಿದ್ದಪ್ಪ, ಎಸ್.ಶ್ರೀನಿವಾಸ್, ಶ್ರೀಧರ್, ಎನ್.ಟಿ. ಸಂಗನಾಥ್, ಎ.ಬಿ.ಮಲ್ಲೇಶಪ್ಪ, ಎ.ಎಂ. ಹಾಲೇಶಪ್ಪ, ಶಿವಕುಮಾರ್‌ ಪಟೇಲ್, ಕೆ.ಆರ್ ಸತೀಶ್, ಕೆ.ರಂಗನಾಥ್ ಇತರರಿದ್ದರು.

- - - ಬಾಕ್ಸ್‌ ಬಸವರಾಜಪ್ಪ ಅಧ್ಯಕ್ಷ, ಪಾಲಾಕ್ಷಪ್ಪ ಉಪಾಧ್ಯಕ್ಷ ಮಾಜಿ ಅಧ್ಯಕ್ಷ ಸಿ.ಪಿ. ಚಂದ್ರಶೇಖರ್ ಹಾಗೂ ಮಾಜಿ ಉಪಾಧ್ಯಕ್ಷ ಯತೀಶ್ವರಾಚಾರ್ ರಾಜಿನಾಮೆಯಿಂದ ತೆರವಾಗಿದ್ದ ಅರಹತೊಳಲು ಸಹಕಾರ ಸಂಘ ಸ್ಥಾನಗಳಿಗೆ ನೂತನ ಅಧ್ಯಕ್ಷರಾಗಿ ಎ.ಆರ್. ಬಸವರಾಜಪ್ಪ, ಉಪಾಧ್ಯಕ್ಷರಾಗಿ ಡಿ.ಎಚ್. ಪಾಲಾಕ್ಷಪ್ಪ ಅವಿರೋಧ ಆಯ್ಕೆಯಾದರು. ಸಹಕಾರ ಇಲಾಖೆಯ ಜಲಜಾಕ್ಷಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

- - - -26ಎಚ್‌ಎಚ್‌ಆರ್‌ಪಿ05:

ಅರಹತೋಳಲು ಸಹಕಾರ ಸಂಘಕ್ಕೆ ನೂತನವಾಗಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ್ ಹಾಗೂ ಪಾಲಕ್ಷಪ್ಪ ಅವರಿಗೆ ಮಾಜಿ ಶಾಸಕ ಅಶೋಕ್ ನಾಯ್ಕ್ ಅಭಿನಂದಿಸಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್. ಷಡಾಕ್ಷರಿ, ರಾಜೇಶ್ ಪಾಟೀಲ್, ಶ್ರೀನಿವಾಸ್ ಇತರರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೆರಿಯಶಾಂತಿ, ಅಡ್ಡಹೊಳೆಯಲ್ಲಿ ಆನೆ ದಾಟು ಕಾಮಗಾರಿ ಪೂರ್ಣ
ಶಿರೋಮಣಿ ಪ್ರಶಸ್ತಿಯಿಂದ ಸಿದ್ದಕಟ್ಟೆ ಸಹಕಾರ ಸಂಘದ ಹೆಸರು ರಾಜ್ಯಾದ್ಯಂತ ಪಸರಿಸಿದೆ: ಸಂದೇಶ್ ಶೆಟ್ಟಿ