ಕನ್ನಡಪ್ರಭ ವಾರ್ತೆ ಮೂಡಲಗಿ
ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಜಿಲ್ಲಾ ಖನಿಜ ನಿಧಿ ಅನುದಾನದಡಿ ಮಂಜೂರಾದ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು. ಹದಗೆಟ್ಟ ರಸ್ತೆಗಳಿಂದಾಗಿ ರೈತರು ತಮ್ಮ ಹೊಲಗಳಿಗೆ ಟ್ರ್ಯಾಕ್ಟರ್, ಟ್ರೇಲರ್ ಹಾಗೂ ಇತರ ಯಂತ್ರೋಪಕರಣಗಳನ್ನು ಸಾಗಿಸಲು ಬಹಳಷ್ಟು ಕಷ್ಟ ಪಡುತ್ತಿದ್ದರು. ರೈತರ ಕೃಷಿ ಉಪಕರಣಗಳ ಸುಗಮ ಸಂಚಾರಕ್ಕೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಈ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪಟ್ಟಣದ ಸಾರ್ವಜನಿಕರು ಇಂತಹ ಅಭಿವೃದ್ಧಿ ಕೆಲಸಗಳಿಗೆ ಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಸವರಾಜ ಕಡಾಡಿ, ಪ್ರಭು ಕಡಾಡಿ, ಶ್ರೀಶೈಲ ಕಡಾಡಿ, ಈಶ್ವರ ಬೆಳಕೂಡ, ಪರಪ್ಪ ಕಡಾಡಿ, ಪ್ರಕಾಶ ಕುರಬೇಟ, ಕಿರಣ ಕಡಾಡಿ, ಹಣಮಂತ ಜೋಳನ್ನವರ, ಶ್ರೀಶೈಲ ತುಪ್ಪದ, ಕಲ್ಲಪ್ಪ ಕಡಾಡಿ, ಶಿವಪ್ಪ ಪಾಟೀಲ, ರಾಮಪ್ಪ ಉಳ್ಳಾಗಡ್ಡಿ, ಕಾಡೇಶ ಗೋರೋಶಿ, ಪರಪ್ಪ ಮಳವಾಡ, ಗುರುನಾಥ ವ್ಯಾಪಾರಿ, ಶೀತಲ ಅಥಣಿ, ದಶಗೀರ ಕಮತನೂರ, ಸಿದ್ದಪ್ಪ ಹೆಬ್ಬಾಳ, ಶಿವಾನಂದ ಹೆಬ್ಬಾಳ, ಸದಾಶಿವ ಕಂಬಾರ, ಮಹಾಂತೇಶ ಪಾಗಾದ, ಶಿವಪ್ಪ ಗೋಸಬಾಳ, ಬಸಪ್ಪ ಬಳಿಗಾರ ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.