₹200 ಕೋಟಿ ವೆಚ್ಚದಲ್ಲಿ ಕೆ.ಸಿ.ಜನರಲ್‌ ಆಸ್ಪತ್ರೆ ಅಭಿವೃದ್ಧಿ: ದಿನೇಶ್‌

KannadaprabhaNewsNetwork |  
Published : Jun 30, 2024, 02:02 AM ISTUpdated : Jun 30, 2024, 11:18 AM IST
K c general | Kannada Prabha

ಸಾರಾಂಶ

ನಗರದ ಕೆ.ಸಿ.ಜನರಲ್‌ ಆಸ್ಪತ್ರೆಯನ್ನು ಅಭಿವೃದ್ಧಿ ಮಾಡಲು ಸಿದ್ಧತೆ ನಡೆಸಿರುವ ಸರ್ಕಾರ ಇದಕ್ಕಾಗಿ 200 ಕೋಟಿ ವೆಚ್ಚ ಮಾಡಲಿದೆ. ಸಚಿವ ದಿನೇಶ್‌ ಗುಂಡೂರಾವ್ ಈ ಮಾಹಿತಿ ನೀಡಿದ್ದಾರೆ.

  ಬೆಂಗಳೂರು : ನಗರದ ಕೆ.ಸಿ.ಜನರಲ್‌ ಆಸ್ಪತ್ರೆಯನ್ನು ಇನ್ನಷ್ಟು ಜನಪರವಾಗಿಸಲು ₹66.78 ಕೋಟಿ ವೆಚ್ಚದಲ್ಲಿ 200 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ಸುಮಾರು ₹200 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಶನಿವಾರ ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಅವರು, ನಿರ್ಮಾಣವಾಗುತ್ತಿರುವ ಟ್ರಾಮಾ ಕೇರ್ ಸೆಂಟರ್‌ ಕಾಮಗಾರಿ ಪರಿಶೀಲಿಸಿದರು. ₹35 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 50 ಬೆಡ್ ಸಾಮರ್ಥ್ಯದ ಟ್ರಾಮಾ ಸೆಂಟರ್ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು. ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕವನ್ನ ನೂತನ ಟ್ರಾಮಾ ಸೆಂಟರ್ ಸ್ಥಳಾಂತರ ಮಾಡುವ ಬಗ್ಗೆಯೂ ಅವರು ಸಮಾಲೋಚಿಸಿದರು.

ಕೆ.ಸಿ. ಜನರಲ್ ಆಸ್ಪತ್ರೆಯ ಆವರಣದಲ್ಲಿ ಹೊಸದಾಗಿ ₹66.78 ಕೋಟಿ ವೆಚ್ಚದಲ್ಲಿ 200 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ ಪ್ರಾರಂಭಿಸುವ ನಿಟ್ಟಿನಲ್ಲಿ ಭೂಮಿಪೂಜೆ ಸಿದ್ಧತೆ ನಡೆಸಬೇಕು. ₹9.98 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯ ಹಳೆ ಕಟ್ಟಡಗಳ ದುರಸ್ತಿ, ಆರ್‌ಸಿಸಿ ಸಜ್ಜಾಗಳನ್ನು ಮರು ನಿರ್ಮಾಣ, ಶೌಚಾಲಯಗಳ ನೀರು ಸರಬರಾಜು ಮತ್ತು ನೈರ್ಮಲೀಕರಣ ವ್ಯವಸ್ಥೆ ಸೇರಿ ವಿವಿಧ ದುರಸ್ತಿ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಸಚಿವರು ತಿಳಿಸಿದರು.

ಆಸ್ಪತ್ರೆಗೆ ಬರುವ ರೋಗಿಗಳು ಔಷಧಿಗಾಗಿ ಬೇರೆಡೆ ಹೋಗುವ ಸ್ಥಿತಿ ಬರಬಾರದು. ಸರ್ಕಾರಿ ಔಷಧಿ ಅಂಗಡಿಯನ್ನೇ ಮಧ್ಯರಾತ್ರಿವರೆಗೂ ತೆರೆಯಲು ಅಗತ್ಯ ಸಿಬ್ಬಂದಿ ನಿಯೋಜಿಸಲು ಸೂಚಿಸಿದರು. ಜತೆಗೆ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಘಟಕವನ್ನೂ ರಾತ್ರಿ 10 ಗಂಟೆವರೆಗೆ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಮೊತ್ತ (ಕೋಟಿ)ಕಾಮಗಾರಿ

₹66.78200 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ

₹35ಟ್ರಾಮಾಕೇರ್ ಸೆಂಟರ್ ಕಾಮಗಾರಿ ಮಾರ್ಚ್ ಒಳಗೆ ಪೂರ್ಣ

₹38.28ಬೋಧಕ ವಿಭಾಗ ಕಟ್ಟಡ ನಿರ್ಮಾಣ

₹4.28ಶವಾಗಾರ ಕೊಠಡಿ

₹4.80ವೆಚ್ಚದ ಅಗ್ನಿ ಶಾಮಕ ವ್ಯವಸ್ಥೆ

₹2ಲಾಂಡ್ರಿ

₹38 ಲಕ್ಷಜೈವಿಕ ವೈದ್ಯಕೀಯ ತ್ಯಾಜ್ಯ ಘಟಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಬಸವ ಜಯಂತಿ ಆಚರಣೆ!