ಗಂಗಾವತಿ: ನಾಯಕ ಸಮಾಜದ ಅಭಿವೃದ್ಧಿ ಮೀಸಲಾತಿ ಒಂದರಿಂದ ಮಾತ್ರ ಸಾಧ್ಯವಿಲ್ಲ. ಡಾ.ಅಂಬೇಡ್ಕರ್ ಶೋಷಿತ ವರ್ಗಕ್ಕೆ ನೀಡಿದ ಶಿಕ್ಷಣ, ಸಂಘಟನೆ, ಹೋರಾಟದಂಥ ಮೂರು ಮಂತ್ರಗಳು ಪಾಲಿಸಿದಾಗ ಮಾತ್ರ ಸಾಧ್ಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಸಂವಿಧಾನ ನಮ್ಮ ಬದುಕಿಗೆ ಉಸಿರಾಟವಿದ್ದಂತೆ, ಅದನ್ನು ಉಳಿಸಿಕೊಂಡರೆ ಮಾತ್ರ ನಮಗೆ ಬದುಕು. ಇಲ್ಲವಾದರೆ ಬ ದುಕು ಬಹಳ ಕಠಿಣ. ಈ ಹಿಂದೆ ಸರ್ಕಾರಿ ಹುದ್ದೆಗಳಲ್ಲಿ 5ಲಕ್ಷ ನಾಯಕ ಸಮಾಜದವರು ಕೆಲಸ ಮಾಡುತ್ತಿದ್ದರು. ಈಗ ಮೀಸಲಾತಿ, ಒಳ ಮೀಸಲಾತಿಗಳಿಂದ ಗೊಂದಲದಿಂದ 3 ಲಕ್ಷಕ್ಕೆ ಇಳಿದಿದೆ. ಈ ಬಗ್ಗೆ ಸಮಾಜದವರು ವಿಚಾರ ಮಾಡ ಬೇಕು ಎಂದರು.
ನಾಯಕ ಸಮಾಜದ ಕಳೆದ 30 ವರ್ಷಗಳಿಂದ ವಿವಿಧ ಸಮಸ್ಯೆಗಳಿಗಾಗಿ ಹೋರಾಟ ನಡೆಸುತ್ತಾ ಬರುತ್ತಿದೆ. ಎಲ್ಲವನ್ನು ಸರ್ಕಾರಗಳೇ ಈಡೇರಿಸಬೇಕು ಎಂದರೆ ಆಗಲ್ಲ. ಯಾವ ರಾಜಕಾರಣಿಗೂ ಅಧಿಕಾರ ಶಾಶ್ವತವಲ್ಲ. ಇರುವ ಸಮಯದಲ್ಲಿ ಎಲ್ಲ ಸಮುದಾಯಗಳಿಗೆ, ಜನರಿಗೆ ಉತ್ತಮ ಕೆಲಸಗಳನ್ನು ಮಾಡಿಕೊಡಬೇಕು ಎಂದರು.ಎಸ್ಟಿ,ಎಸ್ಸಿ ಮೀಸಲಾತಿ ಹೆಚ್ಚಳ ಮಾಡಿದ್ದನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರ್ಪಡಿಸಲು ರಾಜ್ಯ ಸರ್ಕಾರ ಮನವಿ ಮಾಡಿದರೂ ಕೇಂದ್ರ ಸರ್ಕಾರ ಒಪ್ಪಿ ಸೇರಿಸಲು ಗಟ್ಟಿ ಮನಸ್ಸು ಮಾಡಬೇಕು. ಜನಪ್ರತಿನಿಧಿಗಳು ಯಾವುದೇ ಕಾರ್ಯ ಕ್ರಮಕ್ಕೆ ಹೋಗಲಿ ಅಲ್ಲಿನ ಜನರ ಸಮಸ್ಯೆ, ಹುದ್ದೆ, ಶೈಕ್ಷಣಿಕ ಸಮಸ್ಯೆ ಆಲಿಸಿ, ಪರಿಹರಿಸಿದಾಗ ಕಾರ್ಯಕ್ರಮಕ್ಕೊಂದು ಅರ್ಥ ಸಿಗುತ್ತದೆ ಎಂದರು.ಸಾಂಕೇತಿಕವಾಗಿ ತಾವರಗೇರಾದಲ್ಲಿ ಒಂದು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಆರಂಭಿಸಿದ್ದು, ಕೆಎಎಸ್, ಐಎಎ ಸ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುತ್ತಿದೆ. ಎಲ್ಲರೂ ಇದರ ಉಪಯೋಗ ಪಡೆಯಬೇಕು. ವಾಲ್ಮೀಕಿ ರಚಿಸಿದ ಗ್ರಂಥ ಈಗ ಹಲವು ರೀತಿಯಲ್ಲಿ ಬದಲಾಗಿದ್ದು, ರಾಮಾಯಣ ಗ್ರಂಥ ಯಾವುದು ಅಸಲು ಎಂಬುದು ಪತ್ತೆ ಹಚ್ಚಬೇಕು ಎಂದರು.
ಸಂಗಣ್ಣ ಕರಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕಂಪ್ಲಿ ಶಾಸಕ ಜಿ.ಎನ್. ಗಣೇಶ ಮಾತನಾಡಿದರು.
ಮಾಜಿ ಶಾಸಕ ಜಿ.ವೀರಪ್ಪ, ಅಮರೇಗೌಡ ಭಯ್ಯಾಪುರ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಜೆಡಿಎಸ್ ಮುಖಂಡ ರಾಜುನಾಯಕ, ಜೋಗದ ನಾರಾಯ ಣಪ್ಪ ನಾಯಕ, ಹನುಮೇಶ ನಾಯಕ, ಆನೆಗುಂದಿ ಗ್ರಾಪಂ ಅಧ್ಯಕ್ಷೆ ಮಹಾದೇವಿ, ಸದಸ್ಯ ತಿಮ್ಮಪ್ಪ ಬಾಳೆಕಾಯಿ, ಜಿಪಂ ಮಾಜಿ ಸದಸ್ಯ ಸಿದ್ದರಾಮಸ್ವಾಮಿ, ಹನುಮಂತಪ್ಪ ನಾ ಯಕ, ವೀರಭದ್ರಪ್ಪ ನಾಯಕ ಇದ್ದರು.