ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ: ಸಿ.ಎಲ್.ಸೋಮಶೇಖರ್

KannadaprabhaNewsNetwork |  
Published : Jul 25, 2024, 01:23 AM IST
51 | Kannada Prabha

ಸಾರಾಂಶ

ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಉಪ್ಪಾರ ಸಮಾಜ ಹಿಂದುಳಿದಿದೆ. ರಾಜಕೀಯವಾಗಿ ಸ್ಥಾನಮಾನ ದೊರೆಯದಿದ್ದರೆ ಸಮಾಜದ ಅಭಿವೃದ್ಧಿ ಕಷ್ಟ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಈ ಮೂಲಕ ತಾವು ಮತ್ತಷ್ಟು ಒಗ್ಗಟ್ಟು ಪ್ರದರ್ಶಿಸಬೇಕು. ಅದಕ್ಕಾಗಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ಏನನ್ನಾದರೂ ಸಾಧಿಸಬಹುದು.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ಯಾವುದೇ ಸಮಾಜ ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ಬರಬೇಕಾದರೆ ಆ ಸಮಾಜ ಮೊದಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ ಅಧ್ಯಕ್ಷ ಸಿ.ಎಲ್. ಸೋಮಶೇಖರ್ ಹೇಳಿದರು.

ಪಟ್ಟಣದ ಒಳಕೋಟೆ ಕರಿಬಸಪ್ಪ ಬಡಾವಣೆಯ ಉಪ್ಪಾರ ಶ್ರೀರಾಮ ಭವನದಲ್ಲಿ ಹಮ್ಮಿಕೊಂಡಿದ್ದ ಉಪ್ಪಾರ ನೌಕರರ ಹಾಗೂ ವೃತ್ತಿಪರ ಸಂಘದ ನೂತನ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಉಪ್ಪಾರ ಸಮಾಜ ಹಿಂದುಳಿದಿದೆ. ರಾಜಕೀಯವಾಗಿ ಸ್ಥಾನಮಾನ ದೊರೆಯದಿದ್ದರೆ ಸಮಾಜದ ಅಭಿವೃದ್ಧಿ ಕಷ್ಟ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಈ ಮೂಲಕ ತಾವು ಮತ್ತಷ್ಟು ಒಗ್ಗಟ್ಟು ಪ್ರದರ್ಶಿಸಬೇಕು. ಅದಕ್ಕಾಗಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ಏನನ್ನಾದರೂ ಸಾಧಿಸಬಹುದು. ಈ ಸಮಾಜದಲ್ಲಿ ಮೌಢ್ಯತೆ, ಕಂದಾಚಾರ ತುಂಬಿ ತುಳುಕುತ್ತಿದೆ. ಇದನ್ನು ತೊಲಗಿಸಬೇಕು. ಈ ನಿಟ್ಟಿನಲ್ಲಿ ಸಮಾಜದ ಮುಖಂಡರು ಹಾಗೂ ಯುವಕರು ಚಿಂತಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷ ಎಚ್.ಎನ್. ಕಾಮರಾಜ್ ಮಾತನಾಡಿ, ಸಮಾಜದ ಅಭಿವೃದ್ಧಿ ಸಂಘಟನೆಗಳು ಯಾವ ರೀತಿಯಲ್ಲಿ ಪಾಲ್ಗೊಳ್ಳುತ್ತವೆ ಎಂಬುದರ ಮೇಲೆ ನಿಂತಿರುತ್ತದೆ. ಕೆಲವು ವರ್ಷಗಳಿಂದ ತಾಲ್ಲೂಕಿನಲ್ಲಿ ಉಪ್ಪಾರ ಸಮಾಜದ ಸಂಘಟನೆ ನಿಷ್ಕ್ರಿಯವಾಗಿವೆ ಹಾಗಾಗಿ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತಿಲ್ಲ ಆದ್ದರಿಂದ ಹಿರಿಯರಾದವರು ತಾಲೂಕಿನಲ್ಲಿ ಸಮಾಜವನ್ನು ಮುನ್ನಡೆಸುವ ಉತ್ಸಾಹಿ ಯುವಕರ ಕೈಗೆ ಜವಾಬ್ದಾರಿ ನೀಡಿ ಮಾರ್ಗದರ್ಶನ ಮಾಡುವ ಅಗತ್ಯವಿದೆ ಎಂದರು.

ಸಂಘದ ಉಪಾಧ್ಯಕ್ಷ ಬಿ.ವಿ.ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಉಪ್ಪಾರ ಸಮುದಾಯ ಹೆತೆಚ್ಚಾಗಿದ್ದರೂ ಸಂಘಟನೆಯ ಕೊರತೆಯಿಂದ ಮುಂದೆ ಬರಲು ಸಾಧ್ಯವಾಗುತ್ತಿಲ್ಲ, ನಮ್ಮ ಒಡಕನ್ನು ಬಂಡವಾಳ ಮಾಡಿಕೊಂಡಿರುವ ರಾಜಕಾರಣಿಗಳು ಚುನಾವಣಾ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಳನ್ನು ಮರೆತು ಕೇವಲ ಮೂಗಿಗೆ ತುಪ್ಪ ಸುರಿಸುವ ಕೆಲಸ ಮಾಡುತ್ತಿವೆ, ಈ ಹಿಂದೆ ಉಪ್ಪಾರ ಸಮಾಜದ ಶೈಕ್ಷಣಿಕ ಅಭಿವೃದ್ಧಿಗಾಗಿ ಪಟ್ಟಣದಲ್ಲಿ ಜಾಗವನ್ನು ಗುರುತಿಸಿ ಮುಖ್ಯಮಂತ್ರಿಗಳ ಅಂಕಿತವಾಗಿ ಬಂದಿದ್ದರೂ ಅಧಿಕಾರಿಗಳು ಅದನ್ನು ಕಸದ ಬುಟ್ಟಿಗೆ ಹಾಕಿದ್ದಾರೆ, ಆದ್ದರಿಂದ ಸಮಾಜದ ಬಂಧುಗಳು ಹೋರಾಟದ ಮೂಲಕ ಆ ಜಾಗವನ್ನು ಪಡೆಯುವ ಕೆಲಸ ಮಾಡಬೇಕು ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು.

ಸಂಘದ ಗೌರವಾಧ್ಯಕ್ಷ ಪಿ.ಎಲ್. ರಾಮಣ್ಣ, ಉಪಾಧ್ಯಕ್ಷ ಎಚ್.ಟಿ. ಗಣೇಶ್, ಪ್ರಧಾನ ಕಾರ್ಯದರ್ಶಿ ಪಿ.ಎನ್. ದೇವೇಗೌಡ, ಖಜಾಂಚಿ ಎನ್. ರವೀಂದ್ರ, ಸಹ ಕಾರ್ಯದರ್ಶಿ ಕೆ.ವಿ. ಸುಮಂತ್, ಗೌರವ ಸಲಹೆಗಾರರಾದ ಲಕ್ಕಣ್ಣ, ಬೆಟ್ಟದಪುರ ಯೋಗೇಶ್, ಬಸವರಾಜು, ಸಂಘಟನಾ ಕಾರ್ಯದರ್ಶಿಗಳಾದ ಶಿವು, ಸಿ.ಸಿ.ಜಗದೀಶ್, ಸಿ.ಆರ್.ಮಂಜುರಾಜ್, ಕಂದೇಗಾಲ ಲೋಕೇಶ್, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ವನಜಾಕ್ಷಿ, ಜ್ಯೋತಿ, ಕಾರ್ಯಕಾರಿ ಮಂಡಳಿ ಸದಸ್ಯರಾದ ಪಿ.ಕೆ. ಸುರೇಶ್, ಚಂದ್ರಶೇಖರ್, ಕಿರನಲ್ಲಿ ಸೋಮಶೇಖರ್, ಪಿ.ಆರ್. ಪೃಥ್ವಿರಾಜ್, ಎನ್. ಹರೀಶ್, ಪಿ.ಎನ್. ಮಣಿಕುಮಾರ್, ರಾಘವೇಂದ್ರ, ಪಿ.ಎಸ್. ಗಣೇಶ್, ಮುತ್ತುರಾಜ್, ಹೊಟೇಲ್ ಆನಂದ್, ಯಜಮಾನರಾದ ರವಿ, ಶಿವಣ್ಣ, ರಾಜಣ್ಣ, ಚಂದ್ರ, ಮುಖಂಡರಾದ ಲಕ್ಷ್ಮಿನಾರಾಯಣ, ಪಿ.ಜೆ. ರವಿ, ಜಯಶಂಕರ್, ಕಾಮರಾಜ್, ಮಾಗಳಿ ಕುಮಾರ್ ಇದ್ದರು.

PREV

Recommended Stories

ನವದೆಹಲಿಯಲ್ಲಿ ರಾಣಿ ಚೆನ್ನಭೈರಾದೇವಿ ಸ್ಮಾರಕ ಅಂಚೆ ಚೀಟಿ ರಾಷ್ಟ್ರಪತಿ ಬಿಡುಗಡೆ
ಬಿ.ಸಿ.ರೋಡ್‌: ಬ್ಲಾಕ್ ಕಾಂಗ್ರೆಸ್‌ನಿಂದ ನುಡಿನಮನ ಕಾರ್ಯಕ್ರಮ