ಧಾರವಾಡ:
ಜಿಪಿಎಸ್ ಸಾಧನ ಮತ್ತು ಪ್ಯಾನಿಕ್ ಬಟನ್ ಅಳವಡಿಕೆಯ ಆದೇಶ ನುಂಗಲಾರದ ತುಪ್ಪವಾಗಿದೆ. ಅವೈಜ್ಞಾನಿಕ ಈ ಸಾಧನಗಳನ್ನು ಅಳವಡಿಸಲು ₹ 6 ಸಾವಿರ ವೆಚ್ಚವಾಗಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಆದರೆ, ಸಾರಿಗೆ ಇಲಾಖೆ ತಮಗೆ ಬೇಕಾದ 12 ಕಂಪನಿಗಳಿಗೆ ಈ ಯಂತ್ರ ನೀಡಲು ಟೆಂಡರ್ ನೀಡಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಸರ್ಕಾರ ಶೇ. 3ರಷ್ಟು ತೆರಿಗೆ ಹೆಚ್ಚಳ ಮಾಡಿದ್ದು, ಡೀಸೆಲ್ ದರ ಕೂಡ ಹೆಚ್ಚಿಸಲಾಗಿದೆ. ಇದರಿಂದ ಮ್ಯಾಕ್ಸಿ ಕ್ಯಾಬ್ ಹಾಗೂ ಮೋಟರ್ ಕ್ಯಾಬ್ ಅವಲಂಬಿಸಿದವರಿಗೆ ಜೀವನ ನಡೆಸುವುದು ದುಸ್ತರವಾಗಿದೆ. ಕೂಡಲೇ ಆದೇಶ ಹಿಂದಕ್ಕೆ ಪಡೆಯಬೇಕೆಂದು ಜಿಲ್ಲಾಧಿಕಾರಿ ಮೂಲಕ ಸಾರಿಗೆ ಸಚಿವ ರಾಮಲಿಂಗಾರಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಮಹೇಶ ಪಾಟೀಲ, ಜಗದೀಶ ಮೊರಬ, ಬಸವರಾಜ ಅಕ್ಕಿಮರಡಿ, ರಾಜು ಅಗಸಿನಮನಿ, ಸುರೇಶ ಬಡಗಿ, ಸತೀಶ ಪಾಟೀಲ, ಯಲ್ಲಪ್ಪ ಒಡೆಯರ, ದೇವರಾಜ ಪಾಟೀಲ ಇದ್ದರು.