ಬೆಂಗಳೂರಿನ ಸಪ್ತಗಿರಿ, ಶರತ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟನೆ
ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಜೊತೆಗೆ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆದು ಆರೋಗ್ಯವಂತ ಜೀವನ ನಡೆಸುವಂತೆ ಮಾಡುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ ಎಂದು ವಿಕಸನ ಸಂಸ್ಥೆ ಸಂಯೋಜಕಿ ವಿಭಾ ವರ್ಗೀಸ್
ಕಡೂರು ತಾಲೂಕಿನ ಯಗಟೀಪುರ ಗ್ರಾಮದಲ್ಲಿ ಶ್ರೀ ಪ್ರಸನ್ನ ಮಲ್ಲಿಕಾರ್ಜುನ ದೇವಾಲಯದ ಅಭಿವೃದ್ಧಿ ಸಮಿತಿ, ತರೀಕೆರೆ ವಿಕಸನ ಸಂಸ್ಥೆ, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ, ಶರತ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ಎಷ್ಟೋ ಬಡ ಕುಟುಂಬಗಳಲ್ಲಿರುವವರು ಹಣಕಾಸಿನ ಸಮಸ್ಯೆಯಿಂದ ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಲು ಹಿಂಜರಿಯುತ್ತಾರೆ. ಆದ ಕಾರಣ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯವರು ಇಂತಹ ಶಿಬಿರಗಳಲ್ಲಿ ಕಂಡು ಬರುವ ಬಡ ಕುಟುಂಬದವರಿಗೆ ಅಗತ್ಯ ವಿರುವ ಸೂಕ್ತ ಚಿಕಿತ್ಸೆಯನ್ನು ಉಚಿತವಾಗಿ ಮಾಡಿಕೊಡುತ್ತಾರೆ. ಇದರ ಸದುಪಯೋಗವನ್ನು ಗ್ರಾಮೀಣ ಜನರು ಮಾಡಿ ಕೊಳ್ಳಬೇಕು ಎಂದು ಕೋರಿದರು.
ಶಿಬಿರದಲ್ಲಿ ದೇವಾಲಯ ಸಮಿತಿ ಸದಸ್ಯರಾದ ಜಿ.ಟಿ.ರಾಜಶೇಖರ್, ಪಿ.ಎಂ ಶಿವಕುಮಾರ್, ಮಾರ್ಗದ ಮಧು ಕುಮಾರ್, ದೇವಾಲಯದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ ವಿ. ಜಯಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಚ್. ಈಶ್ವರಪ್ಪ ಮತ್ತು ವೈದ್ಯರಾದ ಡಾ. ಕೌಶಿಕ್, ಡಾ.ಶಿವರಂಜಿನಿ, ಡಾ.ದೀಪಿಕಾ ಮತ್ತು ಸಪ್ತಗಿರಿ ಆಸ್ಪತ್ರೆ ತಜ್ಞರಿಂದ ತಪಾಸಣೆ ನಡೆಯಿತು. ಶಿಬಿರದಲ್ಲಿ ಸುಮಾರು 300ಕ್ಕೂ ಹೆಚ್ಚಿನ ಜನರು ತಪಾಸಣೆಗೆ ಒಳಗಾದರು. ಯಗಟಿ ವೈದ್ಯಾಧಿಕಾರಿ ಡಾ.ಅಕ್ಷತಾ, ಆರೋಗ್ಯ ಇಲಾಖೆಯ ಶಿವಕುಮಾರ್,ಲತಾಮಣಿ ಮತ್ತು ಆಶಾ ಕಾರ್ಯಕರ್ತರು, ವಿಕಸನ ಸಂಸ್ಥೆಯ ಸಿಬ್ಬಂದಿ ಎಂ ಎಚ್. ಲಕ್ಷ್ಮಣ್, ಎಲ್. ಮುಕುಂದ್, ವಸಂತ ಕುಮಾರಿ ಮತ್ತು ಗ್ರಾಮಸ್ಥರಿದ್ದರು.24ಕೆಕೆಡಿಯು2.
ಕಡೂರು ತಾಲೂಕಿನ ಯಗಟೀಪುರ ಗ್ರಾಮದಲ್ಲಿ ಶ್ರೀ ಪ್ರಸನ್ನ ಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಬಿರ ನಡೆಯಿತು.