ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ - 2ರಲ್ಲಿ ಮಣ್ಣು ರಹಿತ ವರ್ಟಿಕಲ್‌ ಗಾರ್ಡನ್‌ ಅಭಿವೃದ್ಧಿ

KannadaprabhaNewsNetwork |  
Published : Nov 09, 2024, 01:14 AM ISTUpdated : Nov 09, 2024, 08:16 AM IST
Airport 3 | Kannada Prabha

ಸಾರಾಂಶ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪರಿಸರಸ್ನೇಹಿ ಟರ್ಮಿನಲ್‌-2ರಲ್ಲಿ ಪರಿಸರಕ್ಕೆ ಪೂರಕವಾದ ಮತ್ತೊಂದು ಉಪಕ್ರಮ ಅನುಷ್ಠಾನಗೊಳಿಸಲಾಗಿದೆ. ಟೈಗರ್‌ ವಿಂಗ್ಸ್‌ ಹೆಸರಿನ ವರ್ಟಿಕಲ್‌ ಗಾರ್ಡನ್‌ ಅನಾವರಣಗೊಳಿಸಲಾಗಿದೆ.

 ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪರಿಸರಸ್ನೇಹಿ ಟರ್ಮಿನಲ್‌-2ರಲ್ಲಿ ಪರಿಸರಕ್ಕೆ ಪೂರಕವಾದ ಮತ್ತೊಂದು ಉಪಕ್ರಮ ಅನುಷ್ಠಾನಗೊಳಿಸಲಾಗಿದೆ. ಟೈಗರ್‌ ವಿಂಗ್ಸ್‌ ಹೆಸರಿನ ವರ್ಟಿಕಲ್‌ ಗಾರ್ಡನ್‌ ಅನಾವರಣಗೊಳಿಸಲಾಗಿದೆ.

ಫ್ರಾನ್ಸ್‌ನ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಕೇಂದ್ರದ ವಿಶ್ವ ಮಟ್ಟದ ಸಸ್ಯ ಶಾಸ್ತ್ರಜ್ಞ ಪ್ಯಾಟ್ರಿಕ್‌ ಬ್ಲಾಂಕ್‌ ಅವರ ಸಹಯೋಗದಲ್ಲಿ ವರ್ಟಿಕಲ್‌ ಗಾರ್ಡನ್‌ ಅಭಿವೃದ್ಧಿಪಡಿಸಲಾಗಿದೆ. ಈ ವರ್ಟಿಕಲ್‌ ಗಾರ್ಡನ್‌ 30 ಅಡಿ ಎತ್ತರ ಹಾಗೂ 160 ಅಡಿ ಅಗಲದ 2 ಗೋಡೆಗಳ ಮೇಲೆ ಸಸಿಗಳನ್ನು ಬೆಳೆಸಲಾಗಿದೆ. ಟೈಗರ್‌ ವಿಂಗ್ಸ್‌ ವರ್ಟಿಕಲ್‌ ಗಾರ್ಡನ್‌ನಲ್ಲಿ 153 ಜಾತಿಗಳ 15 ಸಾವಿರಕ್ಕೂ ಹೆಚ್ಚಿನ ಸಸಿಗಳನ್ನಿಡಲಾಗಿದೆ. ಪ್ಯಾಟ್ರಿಕ್ ಬ್ಲಾಂಕ್‌ ಅವರು ಪಶ್ಚಿಮಘಟ್ಟಗಳ ಕಾಡುಗಳಿಗೆ ತೆರಳಿ, ಅಪರೂಪದ ಆಯ್ದ ಸಸ್ಯಗಳನ್ನು ಸಂಗ್ರಹಿಸಿ ವರ್ಟಿಗಲ್‌ ಗಾರ್ಡನ್‌ನಲ್ಲಿ ಬೆಳೆಸಿದ್ದಾರೆ.

ವರ್ಟಿಕಲ್‌ ಗಾರ್ಡನ್‌ ಮಣ್ಣು ರಹಿತವಾಗಿ ಜರ್ಮನಿ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ. ಅಲ್ಲದೆ, ರಾಷ್ಟ್ರೀಯ ಪ್ರಾಣಿ ಹುಲಿಯ ಶಕ್ತಿ ಮತ್ತು ಗಾಂಭೀರ್ಯತೆಯನ್ನು ಪ್ರತಿಬಿಂಬಿಸುವಂತೆ ಗೋಡೆ ಉದ್ಯಾನ ಅಭಿವೃದ್ಧಿಪಡಿಸಲಾಗಿದೆ.

ವರ್ಟಿಕಲ್ ಗಾರ್ಡನ್‌ ಕುರಿತಂತೆ ಪ್ರತಿಕ್ರಿಯಿಸಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆ (ಬಿಐಎಎಲ್‌)ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮಾರಾರ್‌, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2ರ ಮೂಲ ತತ್ವವನ್ನು ಪ್ರತಿಬಿಂಬಿಸುವಂತೆ ವರ್ಟಿಕಲ್‌ ಗಾರ್ಡನ್‌ ಅಭಿವೃದ್ದಿಪಡಿಸಲಾಗಿದೆ. ಈ ವಿಧಾನದಿಂದ ಸಸ್ಯಗಳನ್ನು ಮಣ್ಣು ರಹಿತವಾಗಿ, ಸಾಮಾನ್ಯ ರೀತಿಯಲ್ಲಿಯೇ ಬೆಳೆಸಲಾಗುತ್ತದೆ. ಅಲ್ಲದೆ, ಟರ್ಮಿನಲ್‌-2ರ ನೈಜ ಸೌಂದರ್ಯ ಮತ್ತಷ್ಟು ಹೆಚ್ಚಿಸಲು ವರ್ಟಿಕಲ್‌ ಗಾರ್ಡನ್‌ ಸಹಕಾರಿಯಾಗಲಿದೆ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!