ಬಿಜೆಪಿಯಿಂದ ದೇಶದ ಅಭಿವೃದ್ಧಿ ಸಾಧ್ಯ: ಗಡ್ಡದ

KannadaprabhaNewsNetwork |  
Published : Apr 28, 2024, 01:25 AM IST
ಮುಂಡರಗಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ವಿವಿಧ ವಾರ್ಡಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. | Kannada Prabha

ಸಾರಾಂಶ

ಬಿಜೆಪಿ ಸರ್ಕಾರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ

ಮುಂಡರಗಿ: ಕಳೆದ 10 ವರ್ಷಗಳಲ್ಲಿ ರಸ್ತೆ, ರೈಲ್ವೆ ನಿಲ್ದಾಣ ಅಭಿವೃದ್ಧಿ, ವಿಮಾನ ನಿಲ್ದಾಣ, ದೇವಸ್ಥಾನ ನಿರ್ಮಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು, ಬಿಜೆಪಿ ಸರ್ಕಾರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಬಿಜೆಪಿ ಮುಖಂಡ ಎಸ್.ಎಸ್.ಗಡ್ಡದ ಹೇಳಿದರು.

ಅವರು ಶನಿವಾರ ಬೆಳಗ್ಗೆ ಪಟ್ಟಣದ ವಾರ್ಡ ನಂ. 13,14, 15 ಹಾಗೂ 16 ರಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮನೆ ಮನೆಗೆ ತೆರಳಿ ಮತ ಯಾಚಿಸಿ ಮಾತನಾಡಿದರು.

ನರೇಂದ್ರ ಮೋದಿ ಸರ್ಕಾರದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ₹11.3 ಕೋಟಿ ರೈತರಿಗೆ ಆರ್ಥಿಕ ನೆರವು, ರೈತರು ಬೆಳೆದ ಬೆಳೆ ಸಕಾಲದಲ್ಲಿ ಮಾರುಕಟ್ಟೆಗೆ ಸಾಕಾಣಿಕೆ ಮಾಡಲು 167 ಮಾರ್ಗಗಳಲ್ಲಿ ಕಿಸಾನ್ ರೈಲು ಚಾಲನೆ, ಕೃಷಿಯಲ್ಲಿ ನೀರಿನ ವೈಜ್ಞಾನಿಕ ಬಳಕೆಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ₹ 93.068 ಕೋಟಿ ಹಂಚಿಕೆ ಮಾಡಲಾಗಿದೆ. ಹೀಗಾಗಿ ರೈತ ಪರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮ ಅಧಿಕಾರಕ್ಕೆ ಬರಲು ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಕಮಲದ ಗುರುತಿಗೆ ಮತನೀಡಿ ಆರಿಸಿ ತರಬೇಕು ಎಂದರು.

ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರಾ ಕಲ್ಲುಕುಟಗರ್ ಮಾತನಾಡಿದರು. ಈ ಸಂದರ್ಭದಲ್ಲಿ ಆನಂದಗೌಡ ಪಾಟೀಲ, ಎಸ್.ವಿ. ಪಾಟೀಲ, ವೀರಣ್ಣ ತುಪ್ಪದ, ಪ್ರಶಾಂತ ಗುಡದಪ್ಪನವರ, ಆರ್.ಎಂ ತಪ್ಪಡಿ, ಗುರುರಾಜ ಜೋಶಿ, ನಾಗೇಶ ಹುಬ್ಬಳ್ಳಿ, ಜ್ಯೋತಿ ಹಾನಗಲ್, ದೇವು ಹಡಪದ, ಸಿದ್ದು ದೇಸಾಯಿ, ಸುರೇಶ ಭಾವಿಹಳ್ಳಿ, ಅಶೋಕ ಅಂಗಡಿ, ಶಂಕರಗೌಡ ಪಾಟೀಲ, ಬಿ.ಕೆ. ಪಾಟೀಲ, ವೀರೇಂದ್ರ, ರವೀಗೌಡ, ಮಂಜುನಾಥ ದೊಡ್ಡಮನಿ, ಧ್ರುವಕುಮಾರ ಹೂಗಾರ, ಸುರೇಶ ಬಂಡಿವಡ್ಡರ, ಯಲ್ಲಪ್ಪ ಗಣಾಚಾರಿ, ಮಂಜು ಮುಧೋಳ, ಮಂಜು ಭಜಂತ್ರಿ, ಅರುಣಾ ಪಾಟೀಲ, ಮಂಜುಳಾ ಹಮ್ಮಿಗಿಮಠ, ರಾಧಾ ಬಾರಕೇರ, ರೇಖಾ ಬಾರಕೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV

Recommended Stories

ಸಂಜೆ ಕೋರ್ಟ್‌ಗೆ ವಕೀಲರ ಸಂಘಗಳ ವಿರೋಧ
ಕಾರ್ಯಕ್ರಮಕ್ಕೆ ಸಾರಿಗೆ ಬಸ್ಸಲ್ಲಿ ಬಂದ ಹೈಕೋರ್ಟ್‌ ನ್ಯಾಯಾಧೀಶರು!