ಕನ್ನಡಪ್ರಭ ವಾರ್ತೆ ತಾಂಬಾ: ಸಹಕಾರ ಕ್ಷೇತ್ರದ ಅಭಿವೃದ್ಧಿಯಲ್ಲಿ ದೇಶದ ಅಭಿವೃದ್ಧಿ ಅಡಗಿದೆ ಎಂದು ಎಂದು ಪಿಕೆಪಿಎಸ್ ಅಧ್ಯಕ್ಷ ದಯಾನಂದ ನಿಂಬಾಳ ಹೇಳಿದರು. ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳು ಬೆಳೆಯಬೇಕಾದರೆ ರೈತರ ಸಹಕಾರ ಅವಶ್ಯ. ರೈತರ ಹಾಗೂ ಮಧ್ಯಮ ವರ್ಗದ ಜನರ ಆರ್ಧಿಕ ಪ್ರಗತಿಗೆ ಪಿಕೆಪಿಎಸ್ ಸಂಘಗಳು ಸಾಕಷ್ಟು ನೆರವು ನೀಡುತ್ತಿದ್ದು, ರೈತರು ಸಂಘದಿಂದ ಪಡೆದ ಸಾಲದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಶಾಲಾ ಮಕ್ಕಳು ಸ್ವಾಗತಿಸಿದರು, ಶಿಕ್ಷಕ ಎಸ್.ಎನ್.ಅಳ್ಳಗಿ ನಿರೂಪಿಸಿದರು, ಆರ್.ಎ.ಹೊರ್ತಿ ವಂದಿಸಿದರು.
ಪೋಟೊ ಪೈಲ್: ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಧ್ವಿತಿಯ ವರ್ಷದಲ್ಲಿ ಪ್ರಥಮ ಹಾಗೂ ಧ್ವಿತಿಯ ಸ್ಥಾನ ಪಡೆದ ಸದಸ್ಯರ ಮಕ್ಕಳಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತ್ತು.