₹100 ಕೋಟಿಯಲ್ಲಿ 75 ಜಂಕ್ಷನ್‌ ಅಭಿವೃದ್ಧಿ

KannadaprabhaNewsNetwork |  
Published : Feb 27, 2024, 01:32 AM IST
ಸಿಗ್ನಲ್‌ | Kannada Prabha

ಸಾರಾಂಶ

ಬೆಂಗಳೂರಿನ 75 ಜಂಕ್ಷನ್‌ಗಳನ್ನು ಅಭಿವೃದ್ಧಿ ಪಡಿಸಲು ಬಿಬಿಎಂಪಿ ಚಾಲನೆ ನೀಡಿದೆ. ಇದು ವರ್ಷಗಳ ಹಳೆಯ ಯೋಜನೆಯಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಕಳೆದ ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸ್ಮರಣಾರ್ಥ ಘೋಷಿಸಲಾಗಿದ್ದ ‘ಸುರಕ್ಷಾ 75’ ಹೆಸರಿನಲ್ಲಿ 75 ಜಂಕ್ಷನ್‌ಗಳ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನಗೊಳಿಸಲು ಬಿಬಿಎಂಪಿ ವಿವರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುತ್ತಿದೆ.ಬಿಬಿಎಂಪಿ ವ್ಯಾಪ್ತಿಯ ಪ್ರಮುಖ 75 ಜಂಕ್ಷನ್‌ಗಳನ್ನು ಅಭಿವೃದ್ಧಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡು ಜತೆಗೆ, ಜಂಕ್ಷನ್‌ಗಳನ್ನು ಸುಂದರವಾಗಿಸಲು 2023-24ನೇ ಸಾಲಿನ ಬಜೆಟ್‌ನಲ್ಲಿ ಸುರಕ್ಷಾ 75 ಯೋಜನೆ ಘೋಷಿಸಲಾಗಿತ್ತು. ಅಲ್ಲದೆ, ಯೋಜನೆ ಕುರಿತ ಬೆಳವಣಿಗೆಯನ್ನು ಸಾರ್ವಜನಿಕರಿಗೆ ತಿಳಿಸಲು ಸುರಕ್ಷಾ 75 ಹೆಸರಿನ ವೆಬ್‌ಸೈಟನ್ನು ಆರಂಭಿಸಲಾಗಿತ್ತು. ಆದರೆ, ಯೋಜನೆ ಜಾರಿಗೆ ಮಾತ್ರ ಬಿಬಿಎಂಪಿ ಮನಸ್ಸು ಮಾಡಿರಲಿಲ್ಲ. ಇದೀಗ ವರ್ಷದ ಹಿಂದೆ ಘೋಷಿಸಲಾಗಿದ್ದ ಯೋಜನೆ ಅನುಷ್ಠಾನಕ್ಕೆ ಡಿಪಿಆರ್‌ ಸಿದ್ಧಪಡಿಸಲು, ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.ಈ ಯೋಜನೆ ಅಡಿಯಲ್ಲಿ ಪ್ರಮುಖವಾಗಿ ಜಂಕ್ಷನ್‌ಗಳನ್ನು ಸೇರುವ ರಸ್ತೆ, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಸಿಗ್ನಲ್‌ಗಳನ್ನು ಮೇಲ್ದರ್ಜೆಗೇರಿಸುವುದು, ಬಸ್‌ ನಿಲುಗಡೆ, ಬಸ್‌ ಬೇ, ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ಇನ್ನಿತರ ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕಾಗಿ ಡಿಪಿಆರ್‌ನಲ್ಲಿ ಜಂಕ್ಷನ್‌ ಸೇರುವ ರಸ್ತೆಗಳ ವಿವರ, ಪಾದಚಾರಿ ಮಾರ್ಗಗಳ ಪರಿಸ್ಥಿತಿ, ವಾಹನಗಳ ಸಂಚಾರದ ಸಂಖ್ಯೆ ಸೇರಿದಂತೆ ಇನ್ನಿತರ ಮಾಹಿತಿ ಆರಿಸಿ ಜಂಕ್ಷನ್ ಅಭಿವೃದ್ಧಿ ಕುರಿತು ವಿವರವನ್ನು ನೀಡಬೇಕು ಎಂದು ಟೆಂಡರ್‌ ಪಡೆಯುವ ಸಂಸ್ಥೆಗೆ ಬಿಬಿಎಂಪಿ ಸೂಚಿಸಲಾಗಿದೆ. ಈ ಯೋಜನೆಗೆ ಬಿಬಿಎಂಪಿ ₹100 ಕೋಟಿಗೂ ಹೆಚ್ಚಿನ ಹಣ ವ್ಯಯಿಸಲು ನಿರ್ಧರಿಸಿದೆ.----ಯಾವ ವಲಯದಲ್ಲಿ ಎಷ್ಟು ಜಂಕ್ಷನ್‌ಗಳ ಅಭಿವೃದ್ಧಿವಲಯಜಂಕ್ಷನ್‌ಗಳ ಸಂಖ್ಯೆಪೂರ್ವ13ದಕ್ಷಿಣ12ಪಶ್ಚಿಮ11ಮಹದೇವಪುರ12ಯಲಹಂಕ8ರಾಜರಾಜೇಶ್ವರಿನಗರ7ಬೊಮ್ಮನಹಳ್ಳಿ8ದಾಸರಹಳ್ಳಿ4ಒಟ್ಟು75

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆ ಬಗೆಹರಿದ್ರೆ 6 ತಿಂಗಳಲ್ಲಿ 1 ಲಕ್ಷ ನೇಮಕಾತಿ : ಸಾರಿಗೆ ಸಚಿವ
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ