ಹಸುಗಳ ಮೇಲೆ ದಾಳಿ ನಡೆಸಿ ಬಲಿಪಡೆದಿರುವ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಸಚಿವರು ಹಾಗೂ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಹುಲಿಯ ಗುರುತಿಸುವಿಕೆ ಪತ್ತೆಯಾದ ತಕ್ಷಣವೇ ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲಾಗುವುದು. ಇದಕ್ಕೆ ಅಗತ್ಯ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹಾಗೂ ಹುಲಿ ಗುರುತಿಸುವಿಕೆಗೆ ಹೆಚ್ಚುವರಿ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಕ್ಯಾಮೆರಾ, ಡ್ರೋನ್ ಕ್ಯಾಮರಾ ಇತ್ಯಾದಿಗಳನ್ನು ಅಳವಡಿಸಿ ಹುಲಿ ಗುರುತಿಸುವಿಕೆ ಮಾಡುವಂತೆ ಉನ್ನತ ಅರಣ್ಯಾಧಿಕಾರಿಗಳಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಸೂಚಿಸಿದರು.

ಮಡಿಕೇರಿ : ಹಸುಗಳ ಮೇಲೆ ದಾಳಿ ನಡೆಸಿ ಬಲಿಪಡೆದಿರುವ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಸಚಿವರು ಹಾಗೂ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಹುಲಿಯ ಗುರುತಿಸುವಿಕೆ ಪತ್ತೆಯಾದ ತಕ್ಷಣವೇ ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲಾಗುವುದು. ಇದಕ್ಕೆ ಅಗತ್ಯ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹಾಗೂ ಹುಲಿ ಗುರುತಿಸುವಿಕೆಗೆ ಹೆಚ್ಚುವರಿ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಕ್ಯಾಮೆರಾ, ಡ್ರೋನ್ ಕ್ಯಾಮರಾ ಇತ್ಯಾದಿಗಳನ್ನು ಅಳವಡಿಸಿ ಹುಲಿ ಗುರುತಿಸುವಿಕೆ ಮಾಡುವಂತೆ ಉನ್ನತ ಅರಣ್ಯಾಧಿಕಾರಿಗಳಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಸೂಚಿಸಿದರು. ಬುಧವಾರ ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಕಳೆದುಕೊಂಡ ಸಂತ್ರಸ್ತ ರೈತರನ್ನು ಖುದ್ದು ಗ್ರಾಮಕ್ಕೆ ಭೇಟಿ ನೀಡಿ ಅವರೊಂದಿಗೆ ಶಾಸಕರು ಅರಣ್ಯ ಅಧಿಕಾರಿಗಳೊಂದಿಗೆ ಕೇಳಿ ಈ ಸೂಚನೆ ನೀಡಿದರು.ಈ ಸಂದರ್ಭ ಮಾತನಾಡಿದ ಅವರು ಬೆಳ್ಳೂರು ಮತ್ತು ಸಮೀಪದ ಗ್ರಾಮಗಳಲ್ಲಿ ಹುಲಿ ಹಾವಳಿಯಿಂದ ಕೆಲವು ಹಸು ದನಗಳಿಗೆ ಹಾನಿಯಾಗಿರುವುದು ಗ್ರಾಮಸ್ಥರಿಗೆ ಆತಂಕ ಉಂಟು ಮಾಡಿದೆ. ಈ ಒಂದು ವಾತಾವರಣದಲ್ಲಿ ಇಲಾಖಾಧಿಕಾರಿಗಳು ಹುಲಿ ಸೆರೆಗೆ ಏನು ಕ್ರಮ ಕೈಗೊಂಡಿದ್ದಾರೆ. ಎಲ್ಲ ಅಧಿಕಾರಿಗಳನ್ನು ಇಲ್ಲಿಗೆ ಕರೆತಂದು ಏನೇನು ಕ್ರಮವನ್ನು ಜರುಗಿಸಿದ್ದೀರಿ ಎಲ್ಲ ಮಾಹಿತಿಯನ್ನು ಪಡೆದು ಹೆಚ್ಚುವರಿಯಾಗಿ ಕ್ಯಾಮರಗಳನ್ನು ಬಳಸಲು ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಕ್ಯಾಮೆರಾ, ರಾತ್ರಿ ಚಿತ್ರ ಸೆರೆ ಹಿಡಿಯುವ ಆಧುನಿಕ ತಂತ್ರಜ್ಞಾನದ ಕ್ಯಾಮರಾ ಹಾಗೂ ಸ್ಥಳೀಯರಿಗೆ ಮಾಹಿತಿ, ಅನುಭವ ಹೆಚ್ಚಿರುತ್ತದೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮಾಹಿತಿಯನ್ನು ಸಹ ಪಡೆದುಕೊಂಡು ಗ್ರೌಂಡ್ ಕ್ಯಾಮರಗಳನ್ನು ಅಳವಡಿಸಿ, ನೈಟ್ ವಿಷನ್ ಇರುವ ಕ್ಯಾಮರಾ ಅಳವಡಿಸಿ ಹುಲಿಯನ್ನು ಗುರುತಿಸಿ ಅದನ್ನು ಸೆರೆ ಹಿಡಿಯುವಂತ ಕೆಲಸ ಆಗಬೇಕೆಂದು ಸೂಚಿಸಿದರು.ಆಕ್ರೋಶ ಸಹಜ: ಸ್ಥಳೀಯರಲ್ಲಿ ಆಕ್ರೋಶ ಸಹಜ ವಿರುತ್ತದೆ. ತುಂಬಾ ಪ್ರೀತಿಯಿಂದ ಹಸುವನ್ನು ಸಾಕಿ ದಿನನಿತ್ಯ ಬದುಕಿಗೆ ಅನುಕೂಲವಾಗುವಂತೆ ಹಾಲು ಕೊಡುವ ಹಸುವನ್ನು ಕಳೆದು ಕೊಂಡು ನೋವು ವ್ಯಕ್ತಪಡಿಸಿದ್ದಾರೆ. ಈ ಹಸು 16 ಲೀಟರ್ ಹಾಲು ದಿನನಿತ್ಯ ಕರೆಯಲಾಗುತ್ತಿತ್ತು. ಸ್ಥಳೀಯವಾಗಿ ಎಲ್ಲರಿಗೂ ಹಾಲು ವಿತರಿಸುತ್ತಿದ್ದರು. ಇಷ್ಟೊಂದು ಹಾಲು ಕೊಡುವ ಹಸುವಿನಿಂದ ಆರ್ಥಿಕವಾಗಿ ನಷ್ಟವಾಗಿರುತ್ತದೆ. ಈ ಬಗ್ಗೆ ಸಂತ್ರಸ್ತ ಬೆಳೆಗಾರ ಹಾಗೂ ಸ್ಥಳೀಯರು ಸಹ ಮನವರಿಕೆ ಮಾಡಿದ್ದಾರೆ. ಆದ್ದರಿಂದ ಈ ಬಗ್ಗೆ ಈ ಹಸುವಿಗೆ ಹೆಚ್ಚುವರಿ ಪರಿಹಾರವನ್ನು ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ಹುಲಿಯ ಹಸುಗಳ ಮೇಲೆ ದಾಳಿ ನಡೆಸುತ್ತಿರುವುದು ಹಾಗೂ ಇದರಿಂದ ಚಳಿಯ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ ಕಾರ್ಮಿಕರು ಸಹ ತೋಟದಲ್ಲಿ ಕೆಲಸ ಮಾಡಲು ಸಮಸ್ಯೆಯಾಗಿದೆ. ಆದ್ದರಿಂದ ನಾನು ಅರಣ್ಯ ಸಚಿವರ ಜೊತೆ ಹಾಗೂ ಪಿ ಸಿ ಸಿ ಎಫ್ ಅವರ ಜೊತೆ ಚರ್ಚೆ ಮಾಡಿ ಹುಲಿಯನ್ನು ಸೆರೆ ಹಿಡಿಯಲು ಕ್ರಮ ಜರುಗಿಸಲು ಕೆಲಸ ಮಾಡುತ್ತೇನೆ ಎಂದು ಪೊನ್ನಣ್ಣ ಹೇಳಿದರು.ಐದು ವರ್ಷಗಳ ಹಿಂದೆ ಹುಲಿ ದಾಳಿಗೆ ಈ ಭಾಗದಲ್ಲಿ ಹಲವಾರು ಹಸುಗಳು ಬಲಿಯಾಗಿದ್ದು ಪರಿಹಾರ ತುಂಬಾ ಕಡಿಮೆ ನೀಡಿದ್ದಾರೆ ಎಂದು ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಈಗ ‘ಹುಲಿ ಬೇಟೆ ಆಡಲು’ ಬಂದಿರುವವರು ಆಗ ಎಲ್ಲಿದ್ದರೂ ಎಂದು ಶಾಸಕರು ಪ್ರಶ್ನಿಸಿದರು.

ರಾಜಕೀಯ ಮಾಡುವ ವಿಚಾರ ಅಲ್ಲಹಸುಗಳ ಮೇಲೆ ಹುಲಿ ದಾಳಿ, ಹೊಸದಾಗಿ ಆಗಿರುವ ವಿಚಾರ ಅಲ್ಲ. ರಾಜಕೀಯ ಮಾಡುವ ವಿಚಾರ ಅಲ್ಲ. ಹುಲಿ ಆನೆಗಳಿಂದ ತೊಂದರೆ ಆಗಬೇಕೆಂದು ಯಾರೂ ಸಹ ಬಯಸುವುದಿಲ್ಲ. ಅನಿರೀಕ್ಷಿತವಾಗಿ ಗಡಿಭಾಗದಲ್ಲಿರುವುದರಿಂದ ಪದೇ ಪದೇ ಅರಣ್ಯ ಇಲಾಖೆಗೆ ಹೇಳುತ್ತಿದ್ದೇನೆ. ಸ್ಥಳೀಯರಿಗೆ ಅನುಭವ ಇರುತ್ತದೆ ಅವರ ವಿಶ್ವಾಸವನ್ನು ಗಳಿಸಿ ಕೆಲಸ ಮಾಡಲು ಸೂಚನೆ ನೀಡಿದ್ದೇನೆ ಕೊಡಗಿನಲ್ಲಿ ವಾತಾವರಣ ಹೇಗೆ ಆಗಿದೆ ಅಂದರೆ ಅನೇಕರು ಮುಂಬರುವ ಚುನಾವಣೆ ಪಂಚಾಯಿತಿ ಚುನಾವಣೆ, ವಿಧಾನಸಭಾ ಚುನಾವಣೆಗಳಿಗೆ ಆಕಾಂಕ್ಷಿಗಳು ಹುಟ್ಟಿದ್ದಾರೆ. ಆಕಾಂಕ್ಷಿಗಳು ಇರಬಾರದೆಂದು ಹೇಳುತ್ತಿಲ್ಲ. ಅವರವರ ಪಕ್ಷದ ತೀರ್ಮಾನದಂತೆ ಆಗುತ್ತದೆ ಪ್ರತಿಯೊಂದು ಸಂದರ್ಭವನ್ನು ಬಳಸಿಕೊಂಡು ಈ ರಾಜಕೀಯ ಮಾಡುವ ವಾತಾವರಣ ಒಳ್ಳೆಯದಲ್ಲ ಇದು ಆರೋಗ್ಯಕರ ಅಲ್ಲ. ಗ್ರಾಮದ ರೈತ ಮಹಿಳೆಯೊಬ್ಬರು 5 ವರ್ಷದ ಹಿಂದಿನ ಸಮಸ್ಯೆ ಹೇಳುತ್ತಿದ್ದಾರೆ. ಈ ಹುಲಿ ಬೇಟೆಗಾರರು ಆಗ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದ ಶಾಸಕರು ರಾಜಕಾರಣ ಮಾಡುವುದು ಒಂದು ಭಾಗವಿರಲಿ, ರಾಜಕೀಯವಾಗಿ ಬೆಳೆಯಬೇಕು ಯಾರು ಶಾಸಕರು ಆಗಬೇಕು ಅದನ್ನು ಚುನಾವಣೆಯಲ್ಲಿ ಜನ ತೀರ್ಮಾನಿಸುತ್ತಾರೆ. ಯಾರು ಆಕಾಂಕ್ಷಿಯಾದರು ಅದಕ್ಕೆ ಸ್ವಾಗತ ಎಂದು ಹೇಳಿದರು.ತದನಂತರ ತಮ್ಮ ನಿವಾಸದಲ್ಲಿ ಅರಣ್ಯ ಅಧಿಕಾರಿಗಳ ಸಭೆ ನಡೆಸಿ ಹುಲಿ ಸೆರೆಗೆ ಕೈಗೊಳ್ಳಬೇಕಾದ ಕಾರ್ಯಾಚರಣೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಅಗತ್ಯ ಸೂಚನೆ ನೀಡಿದರು.ಈ ಸಂದರ್ಭ ಡಿಸಿಎಫ್ ವಿನಿತ ಚೌಹಾನ್ ಅವರು ಮಾತನಾಡಿ, ಹುಲಿಯನ್ನು ಗುರುತಿಸುವಿಕೆಗೆ ಶಾಸಕರ ಸೂಚನೆಯಂತೆ ಎಲ್ಲ ರೀತಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುವುದು. ಆರ್ ಆರ್ ಎಫ್ ಹಾಗೂ ನಾಗರಹೊಳೆ ಅಭಯ ಅರಣ್ಯದಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ಕರೆಸಿಕೊಂಡು ಹುಲಿ ಗುರುತಿಸುವಿಕೆಗೆ ಎಲ್ಲ ಪ್ರಯತ್ನ ನಡೆಸಲಾಗುವುದು. ಹುಲಿ ಗುರ್ತಿಸುವಿಕೆ ಆದ ತಕ್ಷಣ ಹುಲಿ ಸೆರೆಗೆ ಅರಣ್ಯ ಸಚಿವರು ಹಾಗೂ ಪಿಸಿಸಿಎಫ್ ಅವರೊಂದಿಗೆ ಸಮಾಲೋಚನೆ ನಡೆಸಿ ತಕ್ಷಣವೇ ಅನುಮತಿ ಒದಗಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ ಎಂದು ಹೇಳಿದರು.ಹಸುವನ್ನು ಕಳೆದುಕೊಂಡ ಸಂತ್ರಸ್ತ ರೈತ ಕುಟುಂಬ ಬಾಚೀರ ವಾಸುದೇವಯ್ಯ ಹಾಗೂ ಬಿಂದು ದೇವಯ್ಯ ಅವರು ಮಾತನಾಡಿ ಶಾಸಕರು ಸ್ಥಳಕ್ಕೆ ಆಗಮಿಸಿ ನಮ್ಮ ಸಮಸ್ಯೆಯನ್ನು ಕೇಳಿದ್ದು, ವಿಶೇಷ ಪ್ರಕರಣವೆಂದು ಪರಿಗಣಿಸಿ 70 ಸಾವಿರ ವರೆಗೆ ಪರಿಹಾರವನ್ನು ಒದಗಿಸಲು ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ. ಇದರಿಂದ ನಮಗೆ ಸಮಾಧಾನವಾಗಿದೆ ಎಂದು ಹೇಳಿದರು.

ಈ ಸಂದರ್ಭ ಮಡಿಕೇರಿ ವನ್ಯಜೀವಿ ಡಿ ಸಿಎಫ್ ತಸಿನ ಬಾನು, ತಿತಿಮತಿ ಎಸಿಎಫ್ ಮಂಜುನಾಥ್, ಎ ಸಿ ಎಫ್ ಆನನ್ಯ ಕುಮಾರ್, ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶದ ಎ ಸಿ ಎಫ್. ಎ. ಎ. ಗೋಪಾಲ್, ಆರ್. ಎಫ್. ಒ ಗಳಾದ ಪೊನ್ನಂಪೇಟೆಯ ರಾಕೇಶ್, ವಿರಾಜಪೇಟೆಯ ಶಿವರಾಂ, ಆನೆಚೌಕೂರು ವಿನ ಗಂಗಾಧರ್, ತಿತಿಮತಿಯ ಮಮ್ತಾಜ್ ಆಯೇಷಾ ಹಾಜರಿದ್ದರು.ಇದಲ್ಲದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ತಾಲೂಕು ಬಗರ್ ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಲಾಲ ಅಪ್ಪಣ್ಣ, ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಕೊಡಗು ವನ್ಯಜೀವಿ ಸಂಘದ ಅಧ್ಯಕ್ಷ ಬೋಸ್ ಮಾದಪ್ಪ, ಪೊನ್ನಂಪೇಟೆ ವಲಯ ಅಧ್ಯಕ್ಷ ಮೀದೇರಿರ ನವೀನ್, ವಿವಿಧ ವಲಯ ವಲಯ ಅಧ್ಯಕ್ಷರಾದ ಚಂಗುಲಂಡ ಸೂರಜ್, ಪ್ರಭು ಸುಬ್ಬಯ್ಯ, ಪೋರಂಗಡ ಪವನ್, ಡಿಸಿಸಿ ಸದಸ್ಯ ಮುಕ್ಕಾಟಿರ ಸಂದೀಪ್ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.