ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ವಿಪಕ್ಷಗಳ ಟೀಕೆಗೆ ಉತ್ತರ: ಶಾಸಕ ಗಣೇಶ್‌ ಪ್ರಸಾದ್

KannadaprabhaNewsNetwork |  
Published : Apr 22, 2026, 02:00 AM IST
ಧಾರವಾಡ ಆಕಾಶವಾಣಿ ಕಚೇರಿ | Kannada Prabha

ಸಾರಾಂಶ

ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಬೊಬ್ಬೆ ಹೊಡೆಯುತ್ತಿರುವ ವಿಪಕ್ಷಗಳಿಗೆ ಮುಖ್ಯಮಂತ್ರಿಗಳು ಕ್ಷೇತ್ರದಲ್ಲಿ ಚಾಲನೆ ಕೊಟ್ಟ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಈ ಸಮಾರಂಭದಲ್ಲಿ ಸೇರಿರುವ ಜನಸ್ತೋಮವೇ ಉತ್ತರ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ವಿಪಕ್ಷಗಳಿಗೆ ತಿರುಗೇಟು ನೀಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಬೊಬ್ಬೆ ಹೊಡೆಯುತ್ತಿರುವ ವಿಪಕ್ಷಗಳಿಗೆ ಮುಖ್ಯಮಂತ್ರಿಗಳು ಕ್ಷೇತ್ರದಲ್ಲಿ ಚಾಲನೆ ಕೊಟ್ಟ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಈ ಸಮಾರಂಭದಲ್ಲಿ ಸೇರಿರುವ ಜನಸ್ತೋಮವೇ ಉತ್ತರ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ವಿಪಕ್ಷಗಳಿಗೆ ತಿರುಗೇಟು ನೀಡಿದರು.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ೧೦೦ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಿಎಂ, ಡಿಸಿಎಂ ಆಶೀರ್ವಾದದ ಫಲವಾಗಿ ೧೧೦ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ₹೪೭೫ ಕೋಟಿ ಅನುದಾನ ನೀಡಿದ್ದಾರೆ. ನಾನು ಪ್ರಥಮ ಬಾರಿಗೆ ಶಾಸಕನಾದರೂ ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಶಂಕುಸ್ಥಾಪನೆಗೂ ಆಗಮಿಸಿದ್ದಾರೆ, ಕ್ಷೇತ್ರದ ಜನರ ಪರವಾಗಿ ಸಿಎಂ, ಡಿಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

೧೧೦ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾದರೆ ಗುಂಡ್ಲುಪೇಟೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಇರುವುದಿಲ್ಲ, ನನ್ನ ಶಾಸಕತ್ವ ಅವಧಿಯೊಳಗೆ ಶೇ.೮೦ ಅಥವಾ ೯೦ರಷ್ಟು ಕೆಲಸ ಪೂರ್ಣಗೊಳಿಸಿ ಚಾಲನೆ ನೀಡುವ ಉದ್ದೇಶವಿದೆ ಎಂದು ಭರವಸೆ ನೀಡಿದರು.

ನಾನು ಶಾಸಕನಾದ ಬಳಿಕ ಬೇಗೂರು ಹತ್ತಿ ಮಾರುಕಟ್ಟೆ ನಿರ್ಮಾಣವಾಗಿದೆ. ಗುಂಡ್ಲುಪೇಟೆ ಎಪಿಎಂಸಿಯಲ್ಲಿ ಕೋಲ್ಡ್‌ ಸ್ಟೋರೇಜ್‌ ಕಾಮಗಾರಿ ಪ್ರಗತಿಯಲ್ಲಿದೆ. ಎಪಿಎಂಸಿಯಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ. ನಾಲ್ಕು ಪಶು ಆಸ್ಪತ್ರೆ ತಾಲೂಕಿನಲ್ಲಿ ನಿರ್ಮಾಣಗೊಂಡಿವೆ. ತೆರಕಣಾಂಬಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲಾಗಿದೆ. ತಾಲೂಕಿನ ಬೊಮ್ಮನಹಳ್ಳಿ ಬಳಿ ಡಾ.ಬಿ.ಆರ್.ಅಂಬೇಡ್ಕರ್‌ ವಸತಿ ನಿಲಯ ಉದ್ಘಾಟನೆಯಾಗಿದೆ. ಬೇಗೂರು ಬಳಿ ಗರಗನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾಮಗಾರಿ ಪ್ರಗತಿಯಲ್ಲಿದೆ, ಅಲ್ಲದೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣಕ್ಕೆ ಸುತ್ತುಗೋಡೆ ಹಾಕಿಸಿದ್ದೇನೆ ಎಂದು ತಿಳಿಸಿದರು.

ಕಳೆದ ಬಜೆಟ್‌ ನಲ್ಲಿ ಗುಂಡ್ಲುಪೇಟೆ ಯುಜಿಡಿ ಹಾಗೂ ಸಂಚಾರ ಠಾಣೆ ಹಾಗೂ ನ್ಯಾಷನಲ್ ಹೈವೇ ಗುಂಡ್ಲುಪೇಟೆಯಲ್ಲಿ ಹಾದು ಹೋಗಿರುವ ಕಾರಣ ಟ್ರಾಮ್ ಸೆಂಟರ್‌ ಮಂಜೂರಾಗಿದೆ. ಕನಕ ಭವನಕ್ಕೂ ಅನುದಾನ ಬೇಕು ಎಂದು ಸಿಎಂಗೆ ಮನವಿ ಮಾಡಿದ್ದೇನೆ ಎಂದರು.

೨೦೧೩ರಲ್ಲಿ ನನ್ನ ತಂದೆ ದಿ. ಎಚ್.ಎಸ್.ಮಹದೇವಪ್ರಸಾದ್‌ ಸಚಿವರಾಗಿದ್ದ ಕಾಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕ್ಷೇತ್ರದ ಹರವೇ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದರು. ಕೆರೆಗಳಿಗೆ ನೀರು ತುಂಬಿದ ಬಳಿಕ ಅಂತರ್ಜಲ ಏರಿಕೆ ಕಂಡಿತು ಎಂದರು.

ನಾನು ಸುಳ್ಳು ಹೇಳಿ ರಾಜಕಾರಣ ಮಾಡಲ್ಲ:

ನಾನು ಸುಳ್ಳು ಹೇಳಿ ರಾಜಕಾರಣ ಮಾಡಲ್ಲ, ದಿವಂಗತ ಎಚ್.ಎಸ್.ಮಹದೇವ ಪ್ರಸಾದ್‌ ಅವರ ಅಭಿವೃದ್ಧಿ ಕನಸು ನನಸು ಮಾಡುವುದು ನನ್ನ ಗುರಿ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ನಾನು ವಿಪಕ್ಷಗಳ ಟೀಕೆಗೆ ತಲೆ ಕೆಡಸಿಕೊಳ್ಳದೇ ಕ್ಷೇತ್ರದ ಜನತೆಗೆ ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇನೆ, ಮಹದೇವ ಪ್ರಸಾದ್‌ ಅವರ ಹಾದಿಯಲ್ಲಿಯೇ ಸಾಗುತ್ತೇನೆ ಎಂದರು.

ನಾನು ಶಾಸಕನಾದ ಬಳಿಕ ಕ್ಷೇತ್ರದಲ್ಲಿ ₹೮೦೦ ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಸಿಕ್ಕಿದೆ. ವಿಪಕ್ಷಗಳು ಅಪಪ್ರಚಾರದಲ್ಲಿ ತೊಡಗಿದ್ದು, ವಿಪಕ್ಷಗಳು ಕೇಳಿದರೆ ದಾಖಲೆ ಕೊಡಲು ರೆಡಿ ಇದ್ದೇನೆ ಎಂದು ಟಾಂಗ್‌ ನೀಡಿದರು.

ಸ್ಮರಣೆ ಅಗತ್ಯ:

ಕ್ಷೇತ್ರದಲ್ಲಿ ದಿ. ಕೆ.ಎಸ್.ನಾಗರತ್ನಮ್ಮ, ಎಚ್.ಕೆ.ಶಿವರುದ್ರಪ್ಪ, ಅಬ್ದುಲ್‌ ನಜೀರ್‌ ಸಾಬ್‌ ಹಾಗೂ ನನ್ನ ತಂದೆ ಮಹದೇವ ಪ್ರಸಾದ್‌ ಅವರ ಕೊಡುಗೆ ಅಪಾರವಾಗಿದ್ದು, ನಾಲ್ವರ ಸ್ಮರಣೆ ಅಗತ್ಯ ಎಂದರು.

ಡಿಕೆ... ಡಿಕೆ... ಕೂಗು, ಕೇಳಿ ಸಿಟ್ಟಾದ ಸಿಎಂ!

ಸಮಾರಂಭದ ವೇದಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜೊತೆ ಜೊತೆಯಾಗಿಯೇ ಆಗಮಿಸಿದರು. ಉಪ ಮುಖ್ಯಮಂತ್ರಿ ವೇದಿಕೆ ಮುಂದೆ ಬಂದು ಸಭಿಕರತ್ತ ಕೈ ಬೀಸುತ್ತಿದ್ದಾಗ ಸಭೆಯ ಮುಂಭಾಗದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು/ ಡಿ.ಕೆ.ಶಿವಕುಮಾರ್‌ ಅಭಿಮಾನಿಗಳು ಡಿಕೆ... ಡಿಕೆ... ಎಂದು ಕೂಗುತ್ತಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಟ್ಟಾದರು, ಅಲ್ಲದೆ ಡಿಕೆ...ಡಿಕೆ... ಎಂದು ಕೂಗುತ್ತಿದ್ದವರತ್ತ ನೋಡಿದ ಬಳಿಕ ಆಯ್ತು ಎಂದು ಕೈ ಸನ್ನೆ ಕೂಡ ಮಾಡಿದರು.

ಚಾಮರಸಿ ಸ್ವಾಗತ:

ಗುಂಡ್ಲುಪೇಟೆ ಪಟ್ಟಣದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಆಗಮಿಸಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದಿಂದ ಚಾಮರಸಿ ಸ್ವಾಗತ ದೊರೆಯಿತು.ಗಣೇಶ್‌ ಪ್ರಸಾದ್‌ ಬೇರೆ ರಾಜಕಾರಣಿಗಳಂತೆ ಭರವಸೆ ಕೊಡಲ್ಲ: ಸುನಿಲ್‌ ಬೋಸ್‌

ಕನ್ನಡಪ್ರಭ ವಾರ್ತೆ,ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಬೇರೆ ರಾಜಕಾರಣಿಗಳಂತೆ ಸುಳ್ಳು ಭರವಸೆ ಕೊಡಲ್ಲ ಎಂದು ಸಂಸದ ಸುನೀಲ್‌ ಬೋಸ್‌ ಹೇಳಿದರು.

ಸಮಾರಂಭದಲ್ಲಿ ಮಾತನಾಡಿ, ಶಾಸಕ ಗಣೇಶ್‌ ಪ್ರಸಾದ್‌ರ ಬಗ್ಗೆ ವಿಪಕ್ಷಗಳು ಬಹಳ ಮಾತು ಆಡಿದ್ದಾರೆ. ಮೂರು ವರ್ಷದಲ್ಲಿ ₹1 ಸಾವಿರ ಕೋಟಿ ಅನುದಾನ ತಂದಿದ್ದಾರೆ ಎಂದು ಕೊಂಡಾಡಿದರು.

ಮಾಜಿ ಸಚಿವ ದಿವಂಗತ ಎಚ್.ಎಸ್.ಮಹದೇವ ಪ್ರಸಾದ್‌ ರ ದೂರದೃಷ್ಟಿಯ ಫಲವಾಗಿ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಕ್ಷೇತ್ರ ಅಭಿವೃದ್ಧಿಯಾಗಿವೆ. ಸಿಎಂ ಕೂಡ ಜಿಲ್ಲೆ ಹಾಗೂ ಗುಂಡ್ಲುಪೇಟೆಗೆ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದರು.ಗಣೇಶ್‌ ಪ್ರಸಾದ್ ಉತ್ತಮ ಶಾಸಕ: ಸಚಿವ ಸತೀಶ್‌ ಜಾರಕಿಹೊಳಿ ಬಣ್ಣನೆ

ಗುಂಡ್ಲುಪೇಟೆ: ತಾಲೂಕಿಗೆ ೧೧೦ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಳಿಸುವಲ್ಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಯಶಸ್ಸು ಕಂಡಿದ್ದಾರೆ. ಹಾಗಾಗಿ ಅವರು ಆದರ್ಶ, ಉತ್ತಮ ಶಾಸಕ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಸಮಾರಂಭದಲ್ಲಿ ಮಾತನಾಡಿ, ಶಾಸಕ ಗಣೇಶ್‌ ಪ್ರಸಾದ್‌ ಮುತುವರ್ಜಿ ವಹಿಸಿ ಸಿಎಂ ಮೇಲೆ ಒತ್ತಡ ತಂದು ₹೫೩೫ ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ಕೊಡಿಸಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವದ ಮೊದಲ ಸಂವಿಧಾನ ಶಿಲ್ಪಿ ಬಸವಣ್ಣ: ರಂಗನಾಥ್
ಮುಂಗಾರು ಹಂಗಾಮಿಗೆ ಸಿದ್ಧತೆ ಮಾಡಿಕೊಳ್ಳಿ