ಕಿಕ್ಕೇರಿ:
ಜಯಂತಿ ಅಂಗವಾಗಿ ಗ್ರಾಮಸ್ಥರು ಬಸವೇಶ್ವರ ದೇಗುಲಕ್ಕೆ ಆಗಮಿಸಿದ್ದರು. ರೈತರು ತಮ್ಮ ರಾಸುಗಳನ್ನು ಅಲಂಕರಿಸಿ ಕರೆ ತಂದು ತಿಲಕ, ಹೂವಿನ ಅಲಂಕಾರ ಮಾಡಿ ಆರತಿ ಬೆಳಗಿದರು. ಗೋವುಗಳಿಗೆ ದೇವರ ಪ್ರಸಾದವಾಗಿ ಹಣ್ಣು, ರಸಾಯನ ತಿನಿಸಲಾಯಿತು. ಅರ್ಚಕರುತೀರ್ಥ ಪ್ರೋಕ್ಷಣೆ ಮಾಡಿ ಗೋವುಗಳ ಮೆರವಣಿಗೆಗೆ ಚಾಲನೆ ನೀಡಿದರು.
ಸಾಮೂಹಿಕವಾಗಿ ಬಸವೇಶ್ವರ ಭಾವಚಿತ್ರವನ್ನು ಪೂಜಿಸಿದರು. ತಮಟೆ, ನಾದಸ್ವರದೊಂದಿಗೆ ಗ್ರಾಮದ ರೈತಾಪಿ ಜನತೆ ತಮ್ಮ ಗೋವುಗಳನ್ನು ಊರಿನಲ್ಲೆಲ್ಲ ಮೆರವಣಿಗೆ ಸಾಗಿದರು. ಅಂತಿಮವಾಗಿ ಸೋಮೇಶ್ವರ ದೇವಾಲಯದ ಬಾಲಾಲಯ ಬಳಿ ಮೆರವಣಿಗೆ ಸಾಗಿತು. ಸೋಮೇಶ್ವರದೇಗುಲದ ಎದುರು ಗೋವು ಹಾಗೂ ದೇವರಿಗೆ ಪೂಜೆ ಸಲ್ಲಿಸಲಾಯಿತು.ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ರೈತಾಪಿ ಜನತೆ, ವೀರಶೈವ ಸಮುದಾಯದವರು ಬಸವಣ್ಣನ ಕುರಿತು ವಚನ ವಾಚಿಸಿದರು. ಬಸವೇಶ್ವರ ಆದರ್ಶ ತತ್ವ ಕುರಿತು ವಿವಿಧ ಮುಖಂಡರು ಮಾತನಾಡಿದರು.ಶನೇಶ್ವರಸ್ವಾಮಿಗೆ ಭಕ್ತರಿಂದ ಕವಚಧಾರಣೆ
ದೇವಸ್ಥಾನದ ಖಜಾಂಜಿ ಜಯರಾಮ ಮಾತನಾಡಿ, ದೇವರಾಜು ದಂಪತಿ ಶನೇಶ್ವರ ಸ್ವಾಮಿಗೆ ಕವಚ ಮಾಡಿಸಿಕೊಟ್ಟಿದ್ದಾರೆ. ದೇವರು ಅವರಿಗೆ ಆರೋಗ್ಯ ಐಶ್ವರ್ಯ ನೀಡಲಿ ಎಂದು ಪ್ರಾರ್ಥಿಸುತ್ತೇವೆ. ವಿಶೇಷ ದಿನಗಳಲ್ಲಿ ಈ ಕವಚವನ್ನು ಧರಿಸಿ ಪೂಜೆ ಪುನಸ್ಕಾರವನ್ನು ನಡೆಸುವುದಾಗಿ ತಿಳಿಸಿದರು.