ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಳೆದ 27 ವರ್ಷದಿಂದ ವಾಣಿಯಾರ್ ಶ್ರೀಬನ್ನಾರಿ ಮಾರಮ್ಮ ನವರ ಭಕ್ತ ಮಂಡಳಿಯಿಂದ ಶ್ರೀ ಬನ್ನಾರಿ ಮಾರಮ್ಮನ ಕರಗ ಮಹೋತ್ಸವ ನಡೆಸಲಾಗುತ್ತಿದೆ. ವಿವಿಧೆಡೆಯ ಭಕ್ತರು ದೇವಿಯಲ್ಲಿ ಹರಿಕೆ ಮಾಡಿಕೊಂಡು ಬೇವಿನ ಸೊಪ್ಪು ಹಿಡಿದು ಬಾಯಿ ಬೀಗ ಚುಚ್ಚಿಸಿ ಹರಿಕೆ ತೀರಿಸಲು ಬಣ್ಣಾರಿ ಮಾರಿಯಮ್ಮನ ಕರಗ ಮಹೋತ್ಸವದ ಅಂಗವಾಗಿ 18 ಅಡಿ ಉದ್ದದ ಸರಳಿನ ಬಾಯಿಬೀಗ ಹಾಕಿಸಿಕೊಂಡಿದ್ದರು.
ಸೋಮವಾರ ರಾತ್ರಿ ಬಲಮುರಿ ಕಾವೇರಿ ನದಿಯಲ್ಲಿ ದೇವರ ಮಡಿ ಮಾಡಿ ಕರಗ ಮಹೋತ್ಸವ ಮೆರವಣಿಗೆ ನಡೆಸಲಾಯಿತು. ಮಂಗಳವಾರ ಬೆಳಗ್ಗೆ ಗ್ರಾಮದ ಮುಂಭಾಗದ ಆಂಜನೇಯ ಹಾಗೂ ಮಾರಮ್ಮನ ದೇವಾಲಯದಲ್ಲಿ ವಿವಿಧ ಪೂಜೆ ಸಲ್ಲಿಸಿ, ಹರಿಕೆ ಹೊತ್ತ ಭಕ್ತರಿಗೆ ಬಾಯಿ ಬೀಗ ಹಾಕಿಸಿಕೊಂಡರು.ರಣ ಬಿಸಿಲಿನ್ನು ಲೆಕ್ಕಿಸದ ಭಕ್ತರು 18 ಅಡಿ ಉದ್ದದ ದೊಡ್ಡ ಸರಳಿನ ಬಾಯಿ ಬೀಗ ಹಾಕಿಸಿಕೊಂಡು ಸರತಿ ಸಾಲಿನಲ್ಲಿ ದೇವಿ ಬಣ್ಣಾರಿ ಮಾರಿಯಮ್ಮನ ದೇಗುಲದ ವರೆಗೂ ಟಮಟೆ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದರು.ಶ್ರೀಶಂಕರಾಚಾರ್ಯರ ಜಯಂತಿ ಆಚರಣೆ
ನಂತರ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ವೇದ ಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ ಮಾತನಾಡಿ, ಹಿಂದು ಧರ್ಮದ ಅದ್ವೈತ ಸಿದ್ಧಾಂತವನ್ನು ಪ್ರಪಂಚದಲ್ಲಿ ಶಂಕರಾಚಾರ್ಯರು ಪ್ರತಿಪಾದಿಸಿ ಅದರ ಮೌಲ್ಯಗಳನ್ನು ಜಗತ್ತಿಗೆ ಕಾಣುವಂತೆ ಎತ್ತಿ ಹಿಡಿದ ಮಹನೀಯರ ತತ್ವ ಆದರ್ಶಗಳನ್ನು ನಾವು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.ಈ ವೇಳೆ ಶ್ರೀರಂಗಪಟ್ಟಣ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಿ.ಎಚ್ ಕೃಷ್ಣ, ನಿರ್ದೇಶಕರಾದ ನರಸಿಂಹ ಮೂರ್ತಿ, ಗಂಗಾಧರ್ ಶರ್ಮ, ರಮೇಶ್ ಶರ್ಮ ಸೇರಿದಂತೆ ತಾಲೂಕು ಕಚೇರಿಯ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಕನ್ನಡ ಪರ ಸಂಘಟನೆಗಳ ಮುಖಂಡರು ಹಾಜರಿದ್ದರು.