ಲಕ್ಷ್ಮೇಶ್ವರ: ಸಮೀಪದ ಹೂವಿನ ಶಿಗ್ಲಿ ಗ್ರಾಮದ ವಿರಕ್ತಮಠದ 47ನೇ ಜಾತ್ರಾ ಮಹೋತ್ಸದ ಅಂಗವಾಗಿ ಶನಿವಾರ ಭಕ್ತರ ಮನೆಯಿಂದ ರೊಟ್ಟಿಗಳನ್ನು ಬಂಡಿಯಲ್ಲಿ ತರುತ್ತಿರುವ ದೃಶ್ಯ ವೈಭವ ಶನಿವಾರ ಕಂಡು ಬಂದಿತು.
ರೊಟ್ಟಿ ತರುತ್ತಿರುವ ಭಕ್ತರೊಂದಿಗೆ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು, ಕುಂದಗೋಳದ ಕಲ್ಯಾಣಪುರದ ಬಸವಣ್ಣಜ್ಜರವರು, ಬಟಗುರ್ಕಿಯ ಗದಗಯ್ಯ ದೇವರ ಸಾನ್ನಿಧ್ಯದಲ್ಲಿ ಗ್ರಾಮದಲ್ಲಿ ಮಹಿಳೆಯರು ಮತ್ತು ಚಕ್ಕಡಿಗಳಲ್ಲಿ ಭಕ್ತರು ಶ್ರೀಮಠದ ಜಾತ್ರೆಗಾಗಿಯೇ ಮಾಡಿ ಇಟ್ಟ ರೊಟ್ಟಿಗಳನ್ನು ಬುಟ್ಟಿಗಳಲ್ಲಿ ತುಂಬಿ ಬಿಳಿಯ ಬಟ್ಟೆ ಹೊದಕೆ ಹಾಕಿ ಶ್ರೀಗಳ ಆರ್ಶೀವಾದದೊಂದಿಗೆ ರೊಟ್ಟಿಗಳನ್ನು ಚಕ್ಕಡಿಗಳಲ್ಲಿ ಹಾಕಿದರು.
ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಬೀದಿ ಬೀದಿಗಳಲ್ಲಿ ರೊಟ್ಟಿ ತುಂಬಿದ ಬುಟ್ಟಿಗಳನ್ನು ತಲೆ ಮೇಲೆ ಹೊತ್ತು ತರುತ್ತಿರುವ ನೂರಾರು ಮಹಿಳೆಯರು ಕಂಡುಬಂದರು. ಆನಂತರ ಶ್ರೀಮಠದಲ್ಲಿ ರೊಟ್ಟಿ ತಂದು ಸಂಗ್ರಹಿಸಿದರು. ಈ ವೇಳೆ ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.ರೊಟ್ಟಿ ಜಾತ್ರೆಯಲ್ಲಿ ಅಂದಾನಯ್ಯ ಹೀರೇಮಠ, ನಿಂಗಪ್ಪ ಹೊಸೂರು, ಆರ್.ಎಸ್. ಪಾಟೀಲ, ಮಹಾದೇವಪ್ಪ ಬಿಷ್ಟನ್ನವರ, ನಿಂಗಪ್ಪ ಕಳ್ಳಿಮನಿ, ಪಿ.ಎಚ್. ಪಾಟೀಲ, ಶಿವಲಿಂಗಯ್ಯ ಹಿರೇಮಠ, ಮಹಾಲಿಂಗಪ್ಪ ಅಡರಕಟ್ಟಿ, ವಿರೂಪಾಕ್ಷಪ್ಪ ಚೂರಿ, ಯೋಗಪ್ಪ ಕುಂದರಗಿ, ನಿಂಗಪ್ಪ ರಾಯಣ್ಣವರ, ಮಲ್ಲಪ್ಪ ಯಳವಂಕಿ, ದೇವಪ್ಪ ಪಾಲ್ಗೊಂಡಿದ್ದರು.ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಭಕ್ತರು