ಡಿಜೆಗಾಗಿ ಭಕ್ತರು ಪೊಲೀಸರ ನಡುವೆ ವಾಗ್ವಾದ

KannadaprabhaNewsNetwork |  
Published : Sep 26, 2025, 01:00 AM IST
25ಎಚ್ಎಸ್ಎನ್3 : ಡಿ.ಜೆಗಾಗಿ ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವ ಕುಶಾಲನಗರ ಬಡಾವಣೆಯ ಜನರು. | Kannada Prabha

ಸಾರಾಂಶ

ಕುಶಾಲನಗರ ಬಡಾವಣೆಯ ಅಣ್ಣಪ್ಪವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ವಿಸರ್ಜನೆ ಕಾರ್ಯಕ್ರಮ ಬುಧವಾರ ಆಯೋಜಿಸಲಾಗಿತ್ತು. ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಡಿ.ಜೆ ಸದ್ದು,ಪಟಾಕಿಗಳ ಚಿತ್ತಾರದ ನಡುವೆ ಆದ್ಧೂರಿಯಾಗಿ ಮೆರವಣಿಗೆ ನಡೆಸಲಾಗಿತ್ತು. ಆದರೆ, ಸಕಲೇಶ್ವರಸ್ವಾಮಿ ದೇವಸ್ಥಾನ ಸಮೀಪ ಮೆರವಣಿಗೆ ಆಗಮಿಸಿದ ವೇಳೆ ರಾತ್ರಿ 10ಕ್ಕೆ ಪೊಲೀಸರು ಡಿ.ಜೆ ಬಂದ್ ಮಾಡಿಸಿದರು. ಇದರಿಂದ ಸಿಟ್ಟಾದ ಆಯೋಜಕರು 10.30ರವರೆಗೆ ಡಿ.ಜೆ ಬಳಸಲು ಅನುಮತಿ ಪಡೆಯಲಾಗಿದೆ. ಆದರೆ, 10 ಗಂಟೆಗೆ ಡಿ.ಜೆ ಬಂದ್ ಮಾಡಲಾಗಿದೆ ಎಂದು ಆರೋಪಿಸಿ ಮಹಿಳೆಯರು, ಮಕ್ಕಳು ಸೇರಿದಂತೆ ಆಯೋಜಕರು ಪ್ರತಿಭಟನೆ ನಡೆಸಿ, ಡಿ.ಜೆ ಬಳಸಲು ಅನುಮತಿ ನೀಡದ ಹೊರತು ಗಣೇಶಮೂರ್ತಿ ವಿಸರ್ಜಿಸುವುದಿಲ್ಲ ಎಂದು ಪಟ್ಟು ಹಿಡಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾ ಗಣಪತಿ ವಿಸರ್ಜನೆ ವೇಳೆ ಅನುಮತಿ ನೀಡಿದ್ದ ಅವಧಿಗಿಂತ ಅರ್ಧ ಗಂಟೆ ಮುನ್ನೇ ಡಿಜೆ ಬಂದ್‌ ಮಾಡಿಸಿದ ಪೊಲೀಸರ ಕ್ರಮ ಖಂಡಿಸಿ ಆಯೋಜಕರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು ಗಂಟೆಗಳ ಕಾಲ ಗಣಪತಿ ನಡುರಸ್ತೆಯಲ್ಲಿ ಏಕಾಂಗಿಯಾಗಿತ್ತು.

ಕುಶಾಲನಗರ ಬಡಾವಣೆಯ ಅಣ್ಣಪ್ಪವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ವಿಸರ್ಜನೆ ಕಾರ್ಯಕ್ರಮ ಬುಧವಾರ ಆಯೋಜಿಸಲಾಗಿತ್ತು. ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಡಿ.ಜೆ ಸದ್ದು,ಪಟಾಕಿಗಳ ಚಿತ್ತಾರದ ನಡುವೆ ಆದ್ಧೂರಿಯಾಗಿ ಮೆರವಣಿಗೆ ನಡೆಸಲಾಗಿತ್ತು. ಆದರೆ, ಸಕಲೇಶ್ವರಸ್ವಾಮಿ ದೇವಸ್ಥಾನ ಸಮೀಪ ಮೆರವಣಿಗೆ ಆಗಮಿಸಿದ ವೇಳೆ ರಾತ್ರಿ 10ಕ್ಕೆ ಪೊಲೀಸರು ಡಿ.ಜೆ ಬಂದ್ ಮಾಡಿಸಿದರು. ಇದರಿಂದ ಸಿಟ್ಟಾದ ಆಯೋಜಕರು 10.30ರವರೆಗೆ ಡಿ.ಜೆ ಬಳಸಲು ಅನುಮತಿ ಪಡೆಯಲಾಗಿದೆ. ಆದರೆ, 10 ಗಂಟೆಗೆ ಡಿ.ಜೆ ಬಂದ್ ಮಾಡಲಾಗಿದೆ ಎಂದು ಆರೋಪಿಸಿ ಮಹಿಳೆಯರು, ಮಕ್ಕಳು ಸೇರಿದಂತೆ ಆಯೋಜಕರು ಪ್ರತಿಭಟನೆ ನಡೆಸಿ, ಡಿ.ಜೆ ಬಳಸಲು ಅನುಮತಿ ನೀಡದ ಹೊರತು ಗಣೇಶಮೂರ್ತಿ ವಿಸರ್ಜಿಸುವುದಿಲ್ಲ ಎಂದು ಪಟ್ಟು ಹಿಡಿದರು.

ಪೊಲೀಸರು ಡಿ.ಜೆ ಬಳಸಲು ನ್ಯಾಯಾಲಯ ಅನುಮತಿ ನಿರಾಕರಿಸಿದೆ. ಮಾನವೀಯತೆ ಆಧಾರದ ಮೇಲೆ ಡಿ.ಜೆ ಬಳಕೆ ಅನುಮತಿ ನೀಡಲಾಗಿದೆ ಎಂದರು. ಇದರಿಂದ ಆಕ್ರೋಶಗೊಂಡ ಆಯೋಜಕರು ಗಣೇಶಮೂರ್ತಿಯಿಂದ ದೂರ ಸರಿದು ಪೊಲೀಸರೇ ವಿಸರ್ಜಿಸಲಿ ಎಂದು ಪಟ್ಟು ಹಿಡಿದರು. ರಾತ್ರಿ 10.30ರಿಂದ 12 ಗಂಟೆವರಗೆ ಆಯೋಜಕರು ಹಾಗೂ ಪೊಲೀಸರ ನಡುವೆ ವಾದವಿವಾದ ನಡೆದು ಅಂತಿಮವಾಗಿ ಆಯೋಜಕರ ಮನವೊಲಿಸುವ ಮೂಲಕ ಗಣೇಶನನ್ನು ಹೇಮಾವತಿ ನದಿಯಲ್ಲಿ ವಿಸರ್ಜಿಸಲಾಯಿತು. ಗಣೇಶ್ ವಿಸರ್ಜನೆ ಅಂಗವಾಗಿ ಪಟ್ಟಣದಲ್ಲಿ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ