ಮಕರ ಸಂಕ್ರಾಂತಿ ನಿಮಿತ್ತ ಮಂತ್ರಾಲಯಕ್ಕೆ ಪಾದಯಾತ್ರೆ ಕೈಗೊಂಡ ಕನಕಗಿರಿ ಭಕ್ತರು

KannadaprabhaNewsNetwork |  
Published : Jan 11, 2024, 01:30 AM ISTUpdated : Jan 11, 2024, 03:20 PM IST
೧೦ಕೆಎನ್‌ಕೆ-೧                                                                       ಕನಕಗಿರಿ ಪಟ್ಟಣದ ಭಕ್ತರು ಮಂತ್ರಾಲಯ ಕ್ಷೇತ್ರಕ್ಕೆ ೨೩ನೇ ವರ್ಷದ ಪಾದಯಾತ್ರೆ ಕೈಗೊಂಡರು.  | Kannada Prabha

ಸಾರಾಂಶ

ಪಾದಯಾತ್ರೆಯ ಜೊತೆಗೆ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ, ಕರಪತ್ರ ಹಾಗೂ ಶ್ರೀರಾಮ ಮಂದಿರ ನಿರ್ಮಾಣವಾದ ಭವ್ಯ ಮಂದಿರ ಭಾವಚಿತ್ರವನ್ನು ಸಹ ಭಕ್ತರಿಗೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.

ಕನಕಗಿರಿ: ಕನಕಾಚಲ, ಪ್ರತಾಪರಾಯ, ಶ್ರೀಗುರು ರಾಘವೇಂದ್ರಸ್ವಾಮಿ ಭಜನಾ ಸಂಘಗಳ ಸಹಯೋಗದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ೨೩ನೇ ವರ್ಷದ ಮಂತ್ರಾಲಯ ಕ್ಷೇತ್ರದ ಬುಧವಾರ ಪಾದಯಾತ್ರೆ ತೆರಳಿದರು.

ಭಜನಾ ಕಲಾವಿದ ಸುರೇಶ ರೆಡ್ಡಿ ಮಹಲಿನಮನಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಮಕರ ಸಂಕ್ರಮಣ ಪ್ರಯುಕ್ತ ಶ್ರೀಕ್ಷೇತ್ರ ಮಂತ್ರಾಲಯಕ್ಕೆ ಪಾದಯಾತ್ರೆ ಕೈಗೊಂಡಿದ್ದೇವೆ. 

೨೩ನೇ ವರ್ಷದ ಮಂತ್ರಾಲಯ ಪಾದಯಾತ್ರೆ ಇದಾಗಿದೆ. ಕನಕಗಿರಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ೬೦ಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

ಗುರು ರಾಯರ ಸನ್ನಿಧಾನಕ್ಕೆ ತೆರಳುವವರೆಗೂ ರಾಘವೇಂದ್ರರ ಕುರಿತು ವಿವಿಧ ದಾಸರು ರಚಿಸಿ ಕಿರ್ತನೆ, ಹಾಡುಗಳನ್ನು ಪಾರಾಯಣ ಮಾಡಲಾಗುವುದು ಎಂದರು.ನಂತರ ಗಾಯಕ ಮೋಹನ ಅಚ್ಚಲಕರ ಮಾತನಾಡಿ, ಪಾದಯಾತ್ರೆಯ ಜೊತೆಗೆ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ, ಕರಪತ್ರ ಹಾಗೂ ಶ್ರೀರಾಮ ಮಂದಿರ ನಿರ್ಮಾಣವಾದ ಭವ್ಯ ಮಂದಿರ ಭಾವಚಿತ್ರವನ್ನು ಸಹ ಭಕ್ತರಿಗೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. 

ಇನ್ನೂ ಜ.೨೨ರಂದು ರಾಮಜನ್ಮಭೂಮಿಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪೂಜಾ ವಿಧಾನದ ಕುರಿತು ಮಾಹಿತಿ ನೀಡುವುದಾಗಿ ತಿಳಿಸಿದರು.

ಪಟ್ಟಣದ ತೇರಿನ ಹನುಮಂತರಾಯ ದೇವಸ್ಥಾನದಿಂದ ರಾಜಬೀದಿಯ ಮೂಲಕ ಸಾಗಿದ ಮೆರವಣಿಗೆ ಕನಕಾಚಲ, ಪ್ರತಾಪರಾಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ವಾಲ್ಮೀಕಿ ವೃತ್ತದ ಮಾರ್ಗವಾಗಿ ಸಿಂಧನೂರು ತಾಲೂಕಿನ ಜಾಲಿಹಾಳ ಕಡೆಗೆ ಭಕ್ತರು ಪಯಣ ಬೆಳೆಸಿದರು.

ಈ ವೇಳೆ ಪರಂಧಾಮರೆಡ್ಡಿ ಭೀರಳ್ಳಿ, ಶ್ರೀನಿವಾಸರೆಡ್ಡಿ ಓಣಿಮನಿ, ನಾಗೇಶ ವಾಲೇಕಾರ, ವಿಜಯಕುಮಾರ ಹೊಸಳ್ಳಿ, ರಾಘವೇಂದ್ರ ಚಿತ್ರಗಾರ, ವಿನೋದ ಪತ್ತಾರ, ಭೀಮಣ್ಣ ಮರಾಠಿ, ವಿರೇಶ ವಸ್ತçದ, ಅಂಬಣ್ಣ ಮಹಿಪತಿ, ಅಶೋಕ ನಾಯಕ, ಕೃಷ್ಣ ನಾಯಕ, ನಾಗರೆಡ್ಡಿ ಮಹಲಿನಮನಿ, ಜಯಪ್ರಕಾಶ ರೆಡ್ಡಿ, ಶರಣಪ್ಪ ಕೊರೆಡ್ಡಿ, ರಾಮಣ್ಣ ಚಿದಾನಂದಪ್ಪ, ರತ್ನಮ್ಮ ಮಾದಿನಾಳ, ಸಿಂಧು ಬಲ್ಲಾಳ, ರಾಮಣ್ಣ ಆಗೋಲಿ, ಪ್ರಜ್ವಲ್, ಹರೀಶ ಕೋರಿ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ