ಮಾಲೆ ವಿಸರ್ಜನೆ ನಂತರವೂ ಭಕ್ತಿ ನಿರಂತರವಾಗಿರಬೇಕು

KannadaprabhaNewsNetwork |  
Published : Feb 14, 2026, 03:30 AM IST
ಸೇವಾಲಾಲರ ಮಾಲೆ ವಿಸರ್ಜನೆಯೂ ನಂತರವೂ ಭಕ್ತಿ ಮುಂದುವರಿಯಲಿ: ಡಾ.ಬಾಬುರಾಜೇಂದ್ರ ನಾಯಿಕ ಅಭಿಮತ | Kannada Prabha

ಸಾರಾಂಶ

ಡಾ.ಬಾಬುರಾಜೇಂದ್ರ ನಾಯಿಕ ನೇತೃತ್ವದಲ್ಲಿ ನಡೆಯುತ್ತಿರುವ ಈ ಮಾಲಾ ಅಭಿಯಾನ ವರ್ಷದಿಂದ ವರ್ಷಕ್ಕೆ ವೈಭವಯುತವಾಗಿ ನಡೆಯುತ್ತಿದೆ. ಈ ಮೂಲಕ ಬಂಜಾರ ಸಮಾಜದ ಕುಲಗುರುಗಳಾದ ಸೇವಾಲಾಲರ ಚಿಂತನೆಗಳು ಹೆಚ್ಚಿನ ಜನರಿಗೆ ತಲುಪುತ್ತಿವೆ ಹಾಗೂ ಧರ್ಮ ಜಾಗೃತಿ ಮಾಡುತಿದ್ದಾರೆ ಎಂದು ಲಿಂಗಸೂರಿನ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸತತವಾಗಿ ಆರು ವರ್ಷಗಳಿಂದ ನಡೆಯುತ್ತಿರುವ ವಿಜಯಪುರ ಜಿಲ್ಲೆ ಮಾಲಾ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ ಸಿಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಾಲಾಧಾರಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಕೇವಲ 30 ಜನರಿಂದ ಆರಂಭವಾದ ಈ ಮಾಲಾ ಅಭಿಯಾನ ಈ ವರ್ಷ ಸಾವಿರಾರು ಜನ ಸೇವಾಲಾಲರ ಮಾಲೆ ಧರಿಸಿ ಪೂಜಾ ವಿಧಿ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ಸಂತಸದ ಸಂಗತಿ ಎಂದು ಮುಖಂಡ ಡಾ.ಬಾಬುರಾಜೇಂದ್ರ ನಾಯಿಕ ಹೇಳಿದರು.

ನಗರದ ಆದರ್ಶನಗರದಲ್ಲಿರುವ ಸೇವಾಲಾಲ ದೇವಸ್ಥಾನದಲ್ಲಿ ಸಂತ ಶ್ರೀ ಸೇವಾಲಾಲ ಮಾಲಾಧಾರಿಗಳ ವತಿಯಿಂದ ಸೇವಾಲಾಲರ 287ನೇ ಜಯಂತಿ ಅಂಗವಾಗಿ ನಡೆದ ಮಹಾಭೋಗ ಮತ್ತು ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಬಾರಿ ಸೇವಾ ಧ್ವಜಯಾತ್ರೆ ಎಂಬ ಕಲ್ಪನೆಯಲ್ಲಿ ಐವತ್ತಕ್ಕೂ ಹೆಚ್ಚು ತಾಂಡಾಗಳಲ್ಲಿ ಮಾಲಾಧಾರಿಗಳು ಸಂಚರಿಸಿ ಧರ್ಮಜಾಗೃತಿ ಕಾರ್ಯವನ್ನು ಮಾಡಿದ್ದಾರೆ. ಸೇವಾಲಾಲರ ಜಯಂತಿಯಂದು ಧರಿಸಿರುವ ಮಾಲೆಯನ್ನು ವಿಸರ್ಜಿಸಿದ ನಂತರವೂ ವಿಧಿ ವಿಧಾನಗಳನ್ನು ಪಾಲಿಸಿಕೊಂಡು ಜೀವನವನ್ನು ಸನ್ಮಾರ್ಗದಲ್ಲಿ ನಡೆಸಬೇಕು ಎಂದರು. ಲಿಂಗಸೂರಿನ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಮಾತನಾಡಿದರು.

ಕೆಸರಟ್ಟಿಯ ಶ್ರೀ ಸೋಮಲಿಂಗ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣಕ್ಕಾಗಿ ಇಂತಹ ಮಾಲಾಧಾರಣೆ ಕಾರ್ಯಕ್ರಮಗಳು ಪೂರಕವಾಗಿವೆ. ಆರು ವರ್ಷದಿಂದ ಡಾ.ಬಾಬುರಾಜೇಂದ್ರ ನಾಯಿಕ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು. ಕಾರ್ಯಕ್ರಮದ ಪೂರ್ವದಲ್ಲಿ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಸೇವಾ ಸಂಚಲನದಲ್ಲಿ ಐನೂರಕ್ಕಿಂತ ಹೆಚ್ಚು ಜನ ಮಾಲಾಧಾರಿಗಳು ಭವ್ಯ ಸೇವಾ ಸಂಚಲನ (ಶೋಭಾಯಾತ್ರೆಯ) ಮೂಲಕ ಆದರ್ಶನಗರದ ಸೇವಾಲಾಲ ದೇವಸ್ಥಾನವನ್ನು ತಲುಪಿದರು.

ಧನಸಿಂಗ ಮಹಾರಾಜ, ಆಹೇರಿ ಮುಗಳಖೋಡ ಶಾಖಾದ ಸಂಜು ಮಹಾರಾಜ, ಪ್ರಕಾಶ ಮಹಾರಾಜ, ಭೀಮು ಮಹಾರಾಜ, ಹಲವು ಪೂಜಾರಿಗಳು, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ವಿಡಿಎ ಸದಸ್ಯ ಮಹಾದೇವ ರಾಠೋಡ, ಮಾಜಿ ಜಿ.ಪಂ ಸದಸ್ಯ ರಾಜಪಾಲ ಚವ್ಹಾಣ, ಬಿ.ಬಿ.ಲಮಾಣಿ, ರವಿ ರಾಠೋಡ ,ರಾಕೇಶ ರಜಪೂತ, ಮೋಹನ ಚವ್ಹಾಣ, ಜಯರಾಮ ಪೂಜಾರಿ, ರಾಜು ರಾಠೋಡ ಹಾಗೂ ಹಲವಾರು ತಾಂಡಗಳ ಹಿರಿಯರು ಉಪಸ್ಥಿತರಿದ್ದರು. ಸುರೇಶ ಬಿಜಾಪುರ ನಿರೂಪಿಸಿದರು.

ಡಾ.ಬಾಬುರಾಜೇಂದ್ರ ನಾಯಿಕ ನೇತೃತ್ವದಲ್ಲಿ ನಡೆಯುತ್ತಿರುವ ಈ ಮಾಲಾ ಅಭಿಯಾನ ವರ್ಷದಿಂದ ವರ್ಷಕ್ಕೆ ವೈಭವಯುತವಾಗಿ ನಡೆಯುತ್ತಿದೆ. ಈ ಮೂಲಕ ಬಂಜಾರ ಸಮಾಜದ ಕುಲಗುರುಗಳಾದ ಸೇವಾಲಾಲರ ಚಿಂತನೆಗಳು ಹೆಚ್ಚಿನ ಜನರಿಗೆ ತಲುಪುತ್ತಿವೆ ಹಾಗೂ ಧರ್ಮ ಜಾಗೃತಿ ಮಾಡುತಿದ್ದಾರೆ ಎಂದು ಲಿಂಗಸೂರಿನ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾತಿಗಳಲ್ಲಿ ಮೇಲು ಕೀಳು ಎಂಬುವುದಿಲ್ಲ
ಗೃಹ ರಕ್ಷಕರಿಗೆ ಪೂರ್ಣಾವಧಿ ಕರ್ತವ್ಯ ನೀಡಿ