ಗೋಲಬಾವಿ ಭಕ್ತರಿಂದ ೫ ಕ್ವಿಂಟಲ್ ಜಿಲೇಬಿ ಸಮರ್ಪಣೆ

KannadaprabhaNewsNetwork |  
Published : Nov 01, 2024, 12:12 AM IST
ಗೋಲಬಾವಿ ಭಕ್ತರಿಂದ ಅನ್ನಪ್ರಸಾದಕ್ಕೆ ೫ ಕ್ವಿಂಟಲ್ ಜಿಲೇಬಿ ಸಮರ್ಪಣೆ. | Kannada Prabha

ಸಾರಾಂಶ

ತೇರದಾಳದ ಅಲ್ಲಮಪ್ರಭು ದೇವಸ್ಥಾನ ಕಾರ್ಯಕ್ರಮದ ಅನ್ನಪ್ರಸಾದಕ್ಕೆ ಸಲ್ಲಿಸಲು ತಾಲೂಕಿನ ಗೋಲಬಾವಿ ಗ್ರಾಮದ ಭಕ್ತರು ೫ ಕ್ವಿಂಟಲ್ ಜಿಲೇಬಿ ಹಾಗೂ ರೊಟ್ಟಿ ಸಮರ್ಪಿಸಿದರು.

ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)

ತಾಲೂಕಿನ ಗೋಲಬಾವಿ ಗ್ರಾಮದ ಭಕ್ತರು ಅನ್ನಪ್ರಸಾದ ವಿತರಣೆಗೆ ೫ ಕ್ವಿಂಟಲ್ ಜಿಲೇಬಿ ನೀಡುವ ಮೂಲಕ ತಮ್ಮ ಭಕ್ತಿ ಮೆರೆದರು

ಪಟ್ಟಣದ ಆರಾಧ್ಯ ದೈವ ಅಲ್ಲಮಪ್ರಭು ದೇವರ ನೂತನ ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಜರುಗುತ್ತಿರುವ ಬಸವ ಪುರಾಣ ಮಂಗಲದ ಬಳಿಕ ಭಕ್ತರಿಗೆ ವಿತರಣೆಯಾಗುವ ಅನ್ನಪ್ರಸಾದಕ್ಕೆ ದಿನಕ್ಕೊಂದು ಭಕ್ಷ್ಯವನ್ನು ಭಕ್ತರು ತಯಾರಿಸಿ ನೀಡುತ್ತಾರೆ. ದವಸ-ದಾನ್ಯ ಅಥವಾ ಹಣದ ರೂಪದಲ್ಲಿ ದೇಣಿಗೆ ನೀಡುತ್ತಾ ಬಂದಿದ್ದು ೧೬ನೇ ದಿನವಾದ ಮಂಗಳವಾರ ಗೋಲಬಾವಿ ಭಕ್ತರು ದೇಣಿಗೆ ಸಂಗ್ರಹಿಸಿ ೫ ಕ್ವಿಂಟಲ್ ಜಿಲೇಬಿ ಹಾಗೂ ರೊಟ್ಟಿ ಸಂಗ್ರಹಿಸಿ ₹೩ ಲಕ್ಷ ಹಣವನ್ನು ದೇವಸ್ಥಾನ ಲೋಕಾರ್ಪಣೆ ಸಮಿತಿಗೆ ಸಮರ್ಪಿಸಿ ಭಕ್ತಿ ಮೆರೆದರು. ಜಿಲೇಬಿ ಬುತ್ತಿಯನ್ನು ಭಕ್ತರು ತಮ್ಮ ತಲೆ ಮೇಲೆ ಹೊತ್ತು ಅಂದಾಜು ಆರು ಕಿ.ಮೀ ದೂರ ಕಾಲ್ನಡಿಗೆಯಲ್ಲಿಯೇ ಬಂದು ದೇವಸ್ಥಾನ ತಲುಪಿದರು. ಗ್ರಾಮದ ಮುಖಂಡರು, ಮಾತೆಯರು, ಯುವಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!