ಮರಿಯಮ್ಮನಹಳ್ಳಿ: ಗರಗ-ನಾಗಲಾಪುರ ಗ್ರಾಮದಲ್ಲಿ ಶ್ರೀಗುರು ಒಪ್ಪತ್ತೇಶ್ವರಸ್ವಾಮಿಯ ರಥೋತ್ಸವವು ಮಂಗಳವಾರ ಸಂಜೆ ಅತ್ಯಂತ ಶ್ರದ್ದಾ ಭಕ್ತಿಯಿಂದ ಮತ್ತು ಸಡಗರ ಸಂಭ್ರಮದೊಂದಿಗೆ ನಡೆಯಿತು.
ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ತಮ್ಮ ಕುಟುಂಬದ ಸದಸ್ಯರೊಂದಿಗೆ ದೇವರ ದರ್ಶನ ಪಡೆದುಕೊಳ್ಳಲು ದೇವಸ್ಥಾನದ ಮುಂದೆ ಸಾಲುಗಟ್ಟಿನಿಂತು ದೇವರ ದರ್ಶನ ಪಡೆದುಕೊಂಡರು. ಇದೇ ರೀತಿಯಲ್ಲಿ ಶ್ರೀಗುರು ಒಪ್ಪತ್ತೇಶ್ವರಸ್ವಾಮಿ ಮಠದ ನಿರಂಜನಪ್ರಭು ಸ್ವಾಮೀಜಿಗಳ ದರ್ಶನ ಪಡೆದುಕೊಂಡರು.
ಸಂಜೆ ಸಾರ್ವಜನಿಕರೆಲ್ಲರೂ ಸೇರಿ ರಥೋತ್ಸವನ್ನು ಶ್ರೀಗುರು ಒಪ್ಪತ್ತೇಶ್ವರಸ್ವಾಮಿ ಮಠದ ನಿರಂಜನಪ್ರಭು ಸ್ವಾಮೀಜಿಗಳ ನೇತೃತ್ವದಲ್ಲಿ ಅತ್ಯಂತ ವೈಭವಿಂದ ಮತ್ತು ಭಕ್ತಿಯಿಂದ ರಥೋತ್ಸವನ್ನು ಸುಮಾರು ಒಂದು ಕಿ. ಮೀ. ದೂರದವರೆಗೆ ದೊಡ್ಡ ಹಳ್ಳದಲ್ಲಿ ಎಳೆದುಕೊಂಡು ಹೋಗಿ ಮತ್ತೆ ಹಳ್ಳದ ಮೂಲಕವೇ ರಥೋತ್ಸವನ್ನು ಎಳೆದು ಮತ್ತೆ ವಾಪಸ್ ರಥೋತ್ಸವ ಮೊದಲಿದ್ದ ಸ್ಥಳಕ್ಕೆ ಎಳೆದು ತಂದು ನಿಲ್ಲಿಸಲಾಯಿತು.ರಥೋತ್ಸವದ ಗಾಲಿ ಮುಂದಕ್ಕೆ ಸಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಶ್ರೀಗುರು ಒಪ್ಪತ್ತೇಶ್ವರ ಸ್ವಾಮಿಯ ರಥೋತ್ಸವಕ್ಕೆ ಸರವೇಗದಲ್ಲಿ ಹೂವು, ಬಾಳೆಹಣ್ಣು ಎಸೆದು ದೇವರಿಗೆ ಕೈ ಮುಗಿದರು.
ರಥದ ಗಾಲಿಗಳು ಮುಂದಕ್ಕೆ ಹೋಗಲು ಕೇಕೆ ಹಾಕುತ್ತಾ ರಥೋತ್ಸವನ್ನು ಸೆನ್ನೆ ಹಾಕಿ ರಥೋತ್ಸವನ್ನು ಮುಂದಕ್ಕೆ ಸಾಗುವಂತೆ ಕಾರ್ಯನಿರ್ವಹಿಸಿದರು.
ಶ್ರೀಗುರು ಒಪ್ಪತ್ತೇಶ್ವರಸ್ವಾಮಿ ರಥದ ಪಟದ ಹಾರಜನ್ನು ಜಿ. ನಾಗಲಾಪುರದ ಶಿವಾನಂದಯ್ಯಸ್ವಾಮಿ ₹1,15,000ಕ್ಕೆ ಪಟ ಹರಾಜು ಮಾಡಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ರಥೋತ್ಸವಕ್ಕೆ ಬಂದ ಭಕ್ತರು ಜಾತ್ರೆಯಲ್ಲಿ ವಸ್ತುಗಳ ಕರೀದಿ ಮತ್ತು ತಂಪು-ಪಾನೀಯಗಳನ್ನು ತನ್ನ ಸ್ನೇಹಿತರೊಂದಿಗೆ ಹಾಗೂ ಬಂಧುಗಳೊಂದಿಗೆ ಸಡಗರ ಸಂಭ್ರಮದೊಂದಿಗೆ ಆಚರಿಸಿದರು.ರಥೋತ್ಸವಕ್ಕೆ ಬಂದವರಿಗೆ ಮಧ್ಯಾಹ್ನದಿಂದಲೇ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಜೊತೆಗೆ ಸ್ಥಳೀಯ ಸಂಘ-ಸಂಸ್ಥೆಗಳವರು ಶರಬತ್ತು ಮತ್ತು ಮಜ್ಜಿಗೆ ವಿತರಿಸಿ ಜಾತ್ರೆಗೆ ಬಂದ ಭಕ್ತರಿಗೆ ದಾಹ ತೀರಿಸಿದರು.