ಈ ಪುಣ್ಯ ಕಾರ್ಯಕ್ಕೆ ಕೈಜೋಡಿಸಿರುವ ವಸಂತ ಪಡಗದ, ಶುಕ್ರವಾರದಿಂದ ನಿರಂತರವಾಗಿ ಏಳು ದಿನಗಳ ಕಾಲ ಮಹಾ ಅನ್ನಪ್ರಸಾದಕ್ಕೆ ಅಗತ್ಯವಿರುವ ಸಂಪೂರ್ಣ ಅಕ್ಕಿಯನ್ನು ಭಕ್ತಿಸೇವೆಯಾಗಿ ಒದಗಿಸುತ್ತಿದ್ದಾರೆ.
ಗದಗ: ಅವಳಿ ನಗರದ ಒಕ್ಕಲಗೇರಿ ಓಣಿಯ ಗ್ರಾಮದೇವಿಯರಾದ ದ್ಯಾಮವ್ವ ಮತ್ತು ದುರ್ಗಮ್ಮ ದೇವಿಯರ ಐತಿಹಾಸಿಕ ಹರಿ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರಿಗೆ ಏರ್ಪಡಿಸಲಾಗಿರುವ ಮಹಾ ಅನ್ನಪ್ರಸಾದ ಸೇವೆಗೆ ಬಿಜೆಪಿ ಯುವ ಮುಖಂಡ ವಸಂತ ಪಡಗದ ಅವರು ಭಕ್ತಿಸೇವೆಯಾಗಿ ಅಕ್ಕಿಯನ್ನು ಸಮರ್ಪಿಸಿದ್ದಾರೆ.
ಪ್ರತಿ 12 ವರ್ಷಗಳಿಗೊಮ್ಮೆ ಜರುಗುವ ಈ ಸುಪ್ರಸಿದ್ಧ ಹರಿ ಜಾತ್ರೆಯು ಈ ಬಾರಿ ಬರೋಬ್ಬರಿ 18 ವರ್ಷಗಳ ಸುದೀರ್ಘ ಅಂತರದ ಬಳಿಕ ವಿಜೃಂಭಣೆಯಿಂದ ನಡೆಯುತ್ತಿದೆ. ಆ. 18ರಿಂದ 28ರ ವರೆಗೆ ಒಟ್ಟು 10 ದಿನಗಳ ಕಾಲ ವೈವಿಧ್ಯಮಯ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜಾತ್ರಾ ಮಹೋತ್ಸವವು ಜರುಗುತ್ತಿದ್ದು, ಆಗಮಿಸುವ ಸಾವಿರಾರು ಭಕ್ತರಿಗೆ ಪ್ರತಿದಿನ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ.ಈ ಪುಣ್ಯ ಕಾರ್ಯಕ್ಕೆ ಕೈಜೋಡಿಸಿರುವ ವಸಂತ ಪಡಗದ, ಶುಕ್ರವಾರದಿಂದ ನಿರಂತರವಾಗಿ ಏಳು ದಿನಗಳ ಕಾಲ ಮಹಾ ಅನ್ನಪ್ರಸಾದಕ್ಕೆ ಅಗತ್ಯವಿರುವ ಸಂಪೂರ್ಣ ಅಕ್ಕಿಯನ್ನು ಭಕ್ತಿಸೇವೆಯಾಗಿ ಒದಗಿಸುತ್ತಿದ್ದಾರೆ. ಇದರ ಮೊದಲ ಹಂತವಾಗಿ ಗುರುವಾರ ಒಂದೇ ದಿನ 50ಕ್ಕೂ ಹೆಚ್ಚು ಅಕ್ಕಿ ಚೀಲಗಳನ್ನು(ಪ್ಯಾಕೆಟ್) ಜಾತ್ರಾ ಸಮಿತಿಯ ಪ್ರಮುಖರಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ವಿನೋದ ಮೊರಬದ, ಪ್ರವೀಣ ಕರಿಬಿಷ್ಟಿ, ಮೋಹನ ವರವಿ, ಸುನೀಲ ಮುದೇನಗುಡಿ, ಸೋಮು ಮುಳಗುಂದ, ಬಸವರಾಜ ತುಪ್ಪದ, ಕುಮಾರ ಮಾರನಬಸರಿ, ಶ್ರೀಕಾಂತ ರಾಮಗಿರಿ, ಪ್ರವೀಣ ಹಂದೇಲಿ, ವಿನಾಯಕ ಹೊರಕೇರಿ, ಮಂಜು ಬೆಳವಡಿ, ಮಂಜು ವರವಿ, ಪರಶು ವರವಿ, ರಾಜೇಶ ಪಡಗದ, ಅವಿನಾಶ ಗವಳಿ, ರಜತ್ ಭೀಮಕರ್, ದೇವು ಮೇದಾರ್, ಬಸು ಪೊಲೀಸಪಾಟೀಲ, ಲಕ್ಷ್ಮಣ ಮುರಗೋಡ, ಪ್ರದೀಪ ಭೋಸ್ಲೆ, ವಿರುಪಾಕ್ಷಿ ಸಹಿತ ಇತರರು ಉಪಸ್ಥಿತರಿದ್ದರು.18 ವರ್ಷಗಳ ನಂತರ ನಡೆಯುತ್ತಿರುವ ಗ್ರಾಮ ದೇವಿಯರ ಹರಿ ಜಾತ್ರೋತ್ಸವದ ಭಕ್ತಿಸೇವೆಯಾಗಿ ವಸಂತ ಪಡಗದ ಹಾಗೂ ಗೆಳೆಯರು, ಮಹಾಪ್ರಸಾದಕ್ಕೆ ಬೇಕಾಗುವ ಅಕ್ಕಿಯನ್ನು ನೀಡಲಾಗುತ್ತಿದೆ. ಊರಿನ ಗುರು ಹಿರಿಯರು ಹಾಗೂ ಜಾತ್ರಾ ಕಮಿಟಿ ಸಹಕಾರದಿಂದ ಭಕ್ತಿಸೇವೆ ನಡೆಯುತ್ತಿದೆ ಎಂದು ವಿನೋದ ಮೊರಬದ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.