ಧಾರವಾಡ: ನಗರದ ಕಲಾವಿದರೊಬ್ಬರು ನಾಯಕ ನಟರಾಗಿ, ಇಲ್ಲಿಯವರೇ ಆದ ಆನಿಸ್ ಬಾರದವಾಲೆ ಎಂಬುವರು ನಿರ್ದೇಶಿಸಿದ ಢಾಕ್ ಎಂಬ ಹಿಂದಿ ಚಿತ್ರ ಸೆ. 20ರಂದು ದೇಶಾದ್ಯಂತ ತೆರೆಗೆ ಬರಲಿದೆ.
ಮುಂಬೈನಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಬಹುತೇಕ ಮಹಾರಾಷ್ಟ್ರದ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಐದು ಹಾಡುಗಳಿದ್ದು ಚೆನ್ನಾಗಿ ಮೂಡಿ ಬಂದಿವೆ. ಆ್ಯಕ್ಷನ್ ಸಿನಿಮಾ ಇದಾಗಿದ್ದು ಕುಟುಂಬ ಸಮೇತ ಕುಳಿತು ನೋಡಬಹುದಾಗಿದೆ.
ಗಜನಿ ಚಿತ್ರದ ಖ್ಯಾತಿಯ ಪ್ರದೀಪ ಸಿಂಗ್ ರಾವುತ್, ಅವಿನಾಶ ಬಾದ್ವಾನ್, ಬಲ್ಮಾ ಅಂತಹ ಅನೇಕ ಹಿಂದಿ ಚಿತ್ರದ ಖ್ಯಾತನಾಮರು ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡದ ಖ್ಯಾತ ನಟ ಯಶ್ ನಟಿಸಿರುವ ರಾಜಧಾನಿ ಚಿತ್ರದಲ್ಲಿದ್ದ ಶೀನಾ ಶಾಬಾದಿ ಚಿತ್ರದ ನಾಯಕಿಯಾಗಿದ್ದಾರೆ. ಧಾರವಾಡದವರ ಈ ಚಿತ್ರವನ್ನು ಅವಳಿ ನಗರದ ಜನತೆ ಗೆಲ್ಲಿಸಿಕೊಡಬೇಕೆಂದು ಬಾರುದವಾಲೆ ಮನವಿ ಮಾಡಿದರು.ಚಿತ್ರದ ನಾಯಕ ನಟ ಸಲೀಂ ಮುಲ್ಲಾನವರ ಮಾತನಾಡಿ, ಪುನೀತ ರಾಜಕುಮಾರ ನನ್ನ ನೆಚ್ಚಿನ ನಟ. ಅವರ ಚಿತ್ರಗಳನ್ನು ನೋಡಿಯೇ ನಾನು ನಟನೆಯನ್ನು ಕಲಿತಿದ್ದು, ಬಾಲಿವುಡ್ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದು ಹೆಮ್ಮೆ ಎನಿಸುತ್ತಿದೆ. ಅವಳಿ ನಗರ ಜನತೆಯ ಪ್ರೀತಿ ವಿಶ್ವಾಸದಿಂದ ಈ ಸಾಧನೆ ಸಾಧ್ಯವಾಗಿದೆ. ಉತ್ತರ ಕರ್ನಾಟಕದ ಕಲಾವಿದರು ಮುಂಬೈನಲ್ಲಿ ಹೋಗಿ ಬಾಲಿವುಡ್ ಚಿತ್ರ ತೆಗೆದಿದ್ದು ಸಾಮಾನ್ಯ ಮಾತಲ್ಲ. ಧಾರವಾಡದ ಸಂಗಮ, ಐನಾಕ್ಸ್ ಸೇರಿದಂತೆ ಹುಬ್ಬಳ್ಳಿಯಲ್ಲೂ ಚಿತ್ರ ತೆರೆಗೆ ಬರಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಉಸ್ಮಾನ ಮುಲ್ಲಾ, ನಿಜಾಮುದ್ದೀನ ಮುಲ್ಲಾನವರ ಇದ್ದರು.