ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರ

KannadaprabhaNewsNetwork |  
Published : Sep 06, 2024, 01:05 AM IST
52 | Kannada Prabha

ಸಾರಾಂಶ

ನಾನು ಪಡೆದ ಶಿಕ್ಷಣ, ಅಳವಡಿಸಿಕೊಂಡ ಜೀವನ ಮೌಲ್ಯಗಳಿಗೆ ಶಿಕ್ಷಕರು ಕಾರಣರಾಗಿದ್ದಾರೆ,

ಕನ್ನಡಪ್ರಭ ವಾರ್ತೆ ನಂಜನಗೂಡು

ವಿದ್ಯಾರ್ಥಿಗಳ ಜೀವನ ರೂಪಿಸುವ ಮೂಲಕ ದೇಶದ ಅಭಿವೃದ್ಧಿಗಾಗಿ ಶಿಕ್ಷಕರು ನೀಡಿರುವ ಕೊಡುಗೆ ಅಪಾರ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ಪಟ್ಟಣದ ಕಮಲಮ್ಮ ಗುರುಮಲ್ಲಣ್ಣ ಕಲ್ಯಾಣ ಮಂಟಪದಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯುವ ಶಿಕ್ಷಕರು, ವಿದ್ಯಾರ್ಥಿಗಳಿಗೆ ಉಚಿತವಾಗಿ ಮನೆ ಪಾಠ ಮಾಡಿ, ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದ್ದನ್ನು ಕಂಡಿದ್ದೇನೆ, ವಯಕ್ತಿಕವಾಗಿ ನಾನು ವಕೀಲ ಹಾಗೂ ಶಾಸಕನಾಗಲು ಹಲವು ಶಿಕ್ಷಕರು ಕಾರಣರಾಗಿದ್ದಾರೆ, ನಾನು ಪಡೆದ ಶಿಕ್ಷಣ, ಅಳವಡಿಸಿಕೊಂಡ ಜೀವನ ಮೌಲ್ಯಗಳಿಗೆ ಶಿಕ್ಷಕರು ಕಾರಣರಾಗಿದ್ದಾರೆ, ದೇಶದ ಅಭ್ಯುದಯಕ್ಕಾಗಿ ಸದಾ ದುಡಿಯುವ ಶಿಕ್ಷಕರಿಗೆ ಸಮಾಜದ ಗೌರವ ಸಲ್ಲುತ್ತದೆ. ಶಿಕ್ಷಕರ ಬೇಡಿಕೆಯಂತೆ ಪಟ್ಟಣದಲ್ಲಿ ಎರಡು ಕೋಟಿ ವೆಚ್ಚದ ಗುರುಭವನ ನಿರ್ಮಾಣ ಕಾಮಗಾರಿಯನ್ನು ಮುಖ್ಯಮಂತ್ರಿಗಳ ಮನವೊಲಿಸಿ ಇನ್ನೂ ಹೆಚ್ಚಿನ ಅನುದಾನ ಪಡೆದು ಸುಸಜ್ಜಿತ ಗುರುಭವನ ನಿರ್ಮಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಶಿಕ್ಷಕ ರಾಮಮೋಹನ ಮಾತನಾಡಿ, ಶಿಕ್ಷಕರ ದಿನದಂದು ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ಮಾಜಿ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ಅವರ ಸ್ಮರಿಸಬೇಕಾಗಿದೆ, ಸಂವಿಧಾನ ರಚನಾ ಸಮಿತಿ ಸದಸ್ಯರಾಗಿ ಅವರ ಸೇವೆ ಸ್ಮರಣೀಯ, ಶಿಕ್ಷಕರ ಬಗ್ಗೆ ಈಗಿನ ಕಾಲದ ಪೋಷಕರು ಅಂತಹ ಗೌರವ ಭಾವನೆ ಹೊಂದಿರುವುದಿಲ್ಲ, ನಿಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವವರು ಶಿಕ್ಷಕರು, ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಯಾಗಿ ರೂಪಿಸುವಲ್ಲಿ ಶಿಕ್ಷಕರ ಶ್ರಮವಿದೆ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಸಂದರ್ಭಗಳಲ್ಲಿ ಶಿಕ್ಷಕರು ಸೇನಾನಿಗಳಂತೆ ದುಡಿದು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ, ಉಪಾಧ್ಯಕ್ಷೆ ರೆಹನಾ ಬಾಬು, ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮ ರತ್ನಾಕರ, ಬಿಇಒ ಮಹೇಶ್‌, ರಮೇಶ್, ಮುದ್ದು ಮಾದೇಗೌಡ,

ಸೋಮಶೇಖರ್, ಬಾಲರಾಜು, ರಾಜೇಂದ್ರ, ಗಿರೀಶ್‌, ಸನ್ಮತಿ, ರಾಜುಸ್ವಾಮಿ, ಸತೀಶ್ ದಳವಾಯಿ, ಕುಮಾರಸ್ವಾಮಿ ಇದ್ದರು.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ