ಕನ್ನಡಪ್ರಭ ವಾರ್ತೆ ರಾಮದುರ್ಗ
ಬುಧವಾರ ಖಾನಪೇಠದಲ್ಲಿರುವ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸುಮಾರು ₹1 ಕೋಟಿ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಭವನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಯನ್ನು ಲೀಜ್ ಗೆ ನೀಡದ ನಂತರ ಆಡಳಿತ ಮಂಡಳಿ ಕಾರ್ಯನಿರ್ವಹಿಸಲು ಸೂಕ್ತ ಕಟ್ಟಡವಿಲ್ಲದೆ ನಿತ್ಯದ ಕೆಲಸಗಳ ನಿರ್ವಹಣೆಗೆ ತೊಂದರೆಯಾಗಿತ್ತು. ಸಾಲಮುಕ್ತವಾದ ಮೇಲೆ ಸರ್ಕಾರದ ಅನುಮತಿ ಪಡೆದು ಸ್ವಂತ ಕಟ್ಟಡ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ಕಾರ್ಖಾನೆಯ ಸಂಸ್ಥಾಪಕ ಅಧ್ಯಕ್ಷ ದಿ.ಬಿ.ಬಿ. ಹಿರೇರಡ್ಡಿ ಮತ್ತು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಆಡಳಿತ ಮಂಡಳಿಯ ವಿಶ್ವಾಸದಿಂದ ಮಾಡಿರುವ ಕಾರ್ಯಗಳ ಫಲದಿಂದ ಇಂದು ಸಾಲಮುಕ್ತ ಕಾರ್ಖಾನೆಯಾಗಿದೆ. ಈಗಿನ ಆಡಳಿತ ಮಂಡಳಿಯ ಸದಸ್ಯರು ಸಹಕಾರದಿಂದ ರಾಜ್ಯದಲ್ಲಿ ಉತ್ತಮ ಸಕ್ಕರೆ ಕಾರ್ಖಾನೆಯಾಗಿದೆ ಎಂದು ಹೇಳಿದರು.ಆಡಳಿತ ಮಂಡಳಿ ಸದಸ್ಯರು ಹಾಗೂ ರೈತರು ಕಾರ್ಖಾನೆಗೆ ಕೆಲಸದ ನಿಮಿತ್ತ ಬಂದರೆ ಅವರಿಗೆ ಸೂಕ್ತವಾದ ಸ್ಥಳ ಇರಲಿಲ್ಲ. ಈ ಗ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ರೈತರು ತಮ್ಮ ಯಾವುದೇ ಕಾರ್ಯವಿದ್ದರೂ ಬಂದು ಸಲಹೆ ಸೂಚನೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಖಾನೆಯ ಉಪಾಧ್ಯಕ್ಷ ಬಸನಗೌಡ ಪಾಟೀಲ, ನಿರ್ದೇಶಕರಾದ ಬಿ.ಎಂ. ತುಪ್ಪದ, ಎಂ.ಎಂ. ಆತಾರ, ಅಡಿವೆಪ್ಪ ಸುರಗ, ದುಂಡಪ್ಪ ದೇವರಡ್ಡಿ, ನೀಲಪ್ಪ ಚಾಕಲಬ್ಬಿ, ಐ.ಎಸ್. ಹರನಟ್ಟಿ, ಚಂದು ಲಮಾಣಿ, ಶಶಿಕಲಾ ಸೋಮಗೊಂಡ, ಶಂಕರಗೌಡ ಪಾಟೀಲ ಸೇರಿದಂತೆ ಹಲವರಿದ್ದರು.