- ದೇಶ, ವಿದೇಶಗಳಲ್ಲಿರುವ ಹಳೆಯ ವಿದ್ಯಾರ್ಥಿಗಳ ಸಂಗಮ: ಎಂ.ಪಿ.ರೂಪಶ್ರೀ - - -
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9.30 ಗಂಟೆಗೆ ಅಲ್ಯುಮ್ನಿ ಅಸೋಸಿಯೇಷನ್ ಅಧ್ಯಕ್ಷ, ಹಿರಿಯ ಇಎನ್‌ಟಿ ತಜ್ಞ ಡಾ. ಎ.ಎಂ. ಶಿವಕುಮಾರ ಅಂದನೂರು ಅಧ್ಯಕ್ಷತೆಯಲ್ಲಿ ಕಾಲೇಜಿನ ನಿವೃತ್ತ ಪ್ರಾಚಾರ್ಯರು, ಹಳೆಯ ವಿದ್ಯಾರ್ಥಿನಿ ಪ್ರೊ.ಶಕುಂತಲಾ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ.ಪಿ.ರೂಪಶ್ರೀ, ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ.ವೃಷಭೇಂದ್ರಪ್ಪ, ನಿವೃತ್ತ ಪ್ರಾಚಾರ್ಯ ಮೇಜರ್ ಎನ್.ಶ್ರೀನಿವಾಸ, ಬಾಪೂಜಿ ಬಿ ಸ್ಕೂಲ್ಸ್‌ನ ನಿರ್ದೇಶಕ, ಅಲ್ಯುಮ್ನಿ ಅಸೋಸಿಯೇಷನ್ ಕಾರ್ಯದರ್ಶಿ ಡಾ.ಸ್ವಾಮಿ ತ್ರಿಭುವನಾನಂದ ಎಚ್.ವಿ., ಬಿಐಇಟಿ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಆರ್. ಜಗದೀಶ, ಐಕ್ಯೂಎಸಿ ಸಂಯೋಜಕ ಡಾ. ಟಿ.ಮಂಜುರಾಜ್, ಸಂಚಾಲಕ ಡಾ. ಡಿ.ಸಿ.ಹರೀಶ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಪ್ರತಿಷ್ಟಿತ ಧ.ರಾ.ಮ. ವಿಜ್ಞಾನ ಕಾಲೇಜಿನಲ್ಲಿ ಓದಿದ್ದ ಹಳೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇಂದು ದೇಶ, ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಕಾಲೇಜಿನಲ್ಲಿ ಓದಿ, ಇಲ್ಲಿಯೇ ಪ್ರಾಧ್ಯಾಪಕರು, ಪ್ರಾಚಾರ್ಯರಾದವರೂ ಇದ್ದಾರೆ. ಸಾವಿರಾರು ಹಳೆಯ ವಿದ್ಯಾರ್ಥಿಗಳ ಸಿಹಿ ನೆನಪುಗಳು, ಮರೆಯಲಾಗದ ಕ್ಷಣಿಗಳಿಗೆ ಧ.ರಾ.ಮ. ವಿಜ್ಞಾನ ಕಾಲೇಜು ಸಾಕ್ಷಿಯಾಗಿದೆ ಎಂದು ಹೇಳಿದರು.
ಧರ್ಮ ರತ್ನಾಕರ ಮದ್ದೂರಾಯಪ್ಪ ಅವರು ಕಾಲೇಜಿನ ಮುಂಭಾಗದ ಕಟ್ಟಡ ನಿರ್ಮಾಣಕ್ಕೆ ಧನಸಹಾಯ ಮಾಡಿದ್ದರು. ಅಂದಿನಿಂದಲೂ ಕಾಲೇಜು ಪ್ರತಿಷ್ಟಿತ ಕಾಲೇಜಾಗಿ ಸಾಧನೆ ಮಾಡುತ್ತಿದೆ. ಇಲ್ಲಿ ಓದಿದ ಅದೆಷ್ಟೋ ಮಂದಿ ವೈದ್ಯರಾಗಿ, ಎಂಜಿನಿಯರ್‌ಗಳಾಗಿ, ವಿಜ್ಞಾನಿ, ತಂತ್ರಜ್ಞಾನಿಗಳಾಗಿ, ಶಿಕ್ಷಣ, ಕೈಗಾರಿಕೆ, ವೈದ್ಯಕೀಯ, ವಿಜ್ಞಾನ- ತಂತ್ರಜ್ಞಾನ ಕ್ಷೇತ್ರ ಹೀಗೆ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೋನಾ ಹಾವಳಿ ನಂತರ ಅಲ್ಯುಮ್ನಿ ಅಸೋಸಿಯೇಷನ್ ಕಾಲೇಜಿನ ಅಭಿವೃದ್ಧಿ ಜೊತೆ ಬಡ ವಿದ್ಯಾರ್ಥಿಗಳಿಗೆ ನೆರವಿನ ಹಸ್ತವನ್ನೂ ಚಾಚುತ್ತಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಅಲ್ಯುಮ್ನಿ ಅಸೋಸಿಯೇಷನ್ ಅಧ್ಯಕ್ಷ, ಇಎನ್‌ಟಿ ತಜ್ಞ ಡಾ. ಎ.ಎಂ. ಶಿವಕುಮಾರ ಅಂದನೂರು, ಖಜಾಂಚಿ ಮೇಜರ್ ಎನ್.ಶ್ರೀನಿವಾಸ, ಕಾರ್ಯದರ್ಶಿ ಡಾ.ಸ್ವಾಮಿ ತ್ರಿಭುವನಾನಂದ ಎಚ್.ವಿ., ಕಾಲೇಜಿನ ಹಳೆಯ ವಿದ್ಯಾರ್ಥಿ, ನಗರವಾಣಿ ಸಹ ಸಂಪಾದಕ ಬಿ.ಎನ್.ಮಲ್ಲೇಶ, ಜಂಟಿ ಕಾರ್ಯದರ್ಶಿ ಡಾ. ಎಂ.ಆರ್. ಜಗದೀಶ ಇತರರು ಇದ್ದರು.
- - --12ಕೆಡಿವಿಜಿ3:
ದಾವಣಗೆರೆ ಧ.ರಾ.ಮ. ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಎಂ.ಪಿ.ರೂಪಶ್ರೀ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.