ಮಹಿಳೆಯರ ಸ್ವಾಲಂಬಿ ಬದುಕಿಗೆ ಧರ್ಮಸ್ಥಳ ಯೋಜನೆ ಶಕ್ತಿ: ಶಾಸಕ ಆನಂದ್

KannadaprabhaNewsNetwork |  
Published : Dec 19, 2023, 01:45 AM IST
ಕಡೂರು ತಾಲೂಕಿನ ಮಲ್ಲೇಶ್ವರದ ಬೆಂಕಿ ಲಕ್ಷ್ಮಯ್ಯ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳಾ ವಿಕಾಸ ಕಾರ್ಯಕ್ರಮದಡಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಶಾಸಕ ಕೆ ಎಸ್.ಆನಂದ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಲು, ಅವರಿಗೆ ಶಕ್ತಿ ತುಂಬುತ್ತಿದೆ ಎಂದು ಶಾಸಕ ಕೆ ಎಸ್ ಆನಂದ್ ಹೇಳಿದರು. ಕಡೂರು ಸಮೀಪ ಮಲ್ಲೇಶ್ವರದ ಶ್ರೀ ಬೆಂಕಿ ಲಕ್ಷ್ಮಯ್ಯ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಮಹಿಳಾ ವಿಕಾಸ ಕಾರ್ಯಕ್ರಮದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಪ್ರಭ ವಾರ್ತೆ ಕಡೂರು

ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಲು, ಅವರಿಗೆ ಶಕ್ತಿ ತುಂಬುತ್ತಿದೆ ಎಂದು ಶಾಸಕ ಕೆ ಎಸ್ ಆನಂದ್ ಹೇಳಿದರು. ಕಡೂರು ಸಮೀಪ ಮಲ್ಲೇಶ್ವರದ ಶ್ರೀ ಬೆಂಕಿ ಲಕ್ಷ್ಮಯ್ಯ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಮಹಿಳಾ ವಿಕಾಸ ಕಾರ್ಯಕ್ರಮದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕಡೂರು ತಾಲೂಕಿನಲ್ಲಿ ಶ್ರೀ ಕ್ಷೇತ್ರ ಯೋಜನೆಯು ಮಹಿಳೆಯರಿಗೆ ಶಕ್ತಿ ತುಂಬುತ್ತಾ ಅವರಲ್ಲಿ ಸಾಧನೆಯ ಛಲ ಮೂಡಿಸಿದೆ. ಶ್ರೀ ಕ್ಷೇತ್ರದ ಶ್ರೀ ಹೆಗ್ಗಡೆಯವರು ರಾಜ್ಯದಲ್ಲಿ ಈ ಯೋಜನೆ ಕಟ್ಟುವ ಮೂಲಕ ಜನರು ಆರ್ಥಿಕ, ಸಾಮಾಜಿಕವಾಗಿ, ಸಬಲೀಕರಣದ ಮೂಲಕ ಸ್ವಾವಲಂಬಿಗಳಾಗುವಂತೆ ಮಾಡುತ್ತಿದೆ. ಯೋಜನೆಯ ಸಂಘಗಳ ಮೂಲಕ ಮಹಿಳೆಯರು ಹಾಗೂ ವ್ಯಾಪಾರಿಗಳಿಗೆ ಸಣ್ಣ ಸಾಲದ ಮೂಲಕ ಅವರ ವ್ಯಾಪಾರ ಅಭಿವೃದ್ಧಿ ಹೊಂದಲು ಉತ್ತೇಜಿಸುತ್ತಿದೆ ಎಂದರು.

ಹಿಂದೆ ಗಂಡು ದುಡಿಯಬೇಕು ಹೆಣ್ಣು ಸಂಸಾರ ನೋಡಬೇಕೆಂಬ ಮಾತು ಇಂದು ಸುಳ್ಳಾಗಿದೆ. ಮಹಿಳೆಯು ಹೊರಗೆ ದುಡಿದು ಸಂಸಾರಕ್ಕೆ ತಮ್ಮ ಕಾಣಿಕೆ ನೀಡುತ್ತಿದ್ದು, ಇದು ಬದಲಾವಣೆಯ ಪಥ ಎಂದರೆ ತಪ್ಪಾಗಲಾರದು. ರಾಜ್ಯ ಸರ್ಕಾರವು ಕೂಡ ಮಹಿಳೆಯರ ಪರವಾಗಿದೆ. ನಮ್ಮ ನಾಯಕರು ಹಾಗು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಗೃಹಲಕ್ಷ್ಮಿ, ಶಕ್ತಿ ಯೋಜನೆಯಂತಹ ಕಾರ್ಯಗಳ ಮೂಲಕ ಮಹಿಳಾಶಕ್ತಿ ತುಂಬುತ್ತಿದೆ ಎಂದರು.

ಬಾಕ್ಸ್ ಸುದ್ದಿಗೆ-

ರಾಜ್ಯ ಸರ್ಕಾರವು ಜಾರಿ ಮಾಡಿರುವ ಗೃಹಲಕ್ಷ್ಮೀ, ಶಕ್ತಿ, ಅನ್ನಭಾಗ್ಯದಂತಹ ಯೋಜನೆಗಳು ಪ್ರಪಂಚದಲ್ಲಿಯೇ ಮಾದರಿಯಾಗಿವೆ. ಒಮ್ಮೆ ಬಟನ್ ಪ್ರೆಸ್ ಮಾಡಿದರೆ 36 ಸಾವಿರ ಕೋಟಿ ರು. ಏಕಕಾಲಕ್ಕೆ ಎಲ್ಲ ಮಹಿಳೆಯರ ಖಾತೆಗೆ ತಲುಪುತ್ತದೆ. ಖಾತೆ ಸಂಖ್ಯೆ, ತಾಂತ್ರಿಕ ಕಾರಣಗಳಿಂದ ಸಣ್ಣಪುಟ್ಟ ಲೋಪಗಳಿಂದ ಅವರ ಖಾತೆಗೆ ಹಣ ಬರದೇ ಇರಬಹುದು. ಸರಿಪಡಿಸಿದ ನಂತರ ಒಟ್ಟಿಗೆ ಬರುತ್ತದೆ ಆತಂಕ ಬೇಡ. ಸರ್ಕಾರವು ಹಸಿವು ಮುಕ್ತ ರಾಜ್ಯ ನಿರ್ಮಾಣಕ್ಕೆ ಹಾಗೂ ನೆಮ್ಮದಿ ಜೀವನ ನಡೆಸಲು ಅನುಕೂಲ ಮಾಡಿಕೊಟ್ಟಿದೆ. ಕಡೂರು ತಾಲೂಕಿನಲ್ಲೂ ಗೃಹಲಕ್ಷ್ಮಿ ಯೋಜನೆ ಖಾತೆಗಳಿಗೆ ಪ್ರತಿ ತಿಂಗಳು 12 ಕೋಟಿ ರು. ಪಾವತಿ ಆಗುತ್ತಿದೆ.- ಕೆ.ಎಸ್. ಆನಂದ್ ಶಾಸಕರುಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ವಿಜಯಾ ಗಿರೀಶ್ ಮಾತನಾಡಿ, ಇಂದು ಮಹಿಳೆ ಕೇವಲ ನಾಲ್ಕು ಗೋಡೆಗಳಿಗೆ ಸೀಮಿತವಾಗದೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುವ ಮೂಲಕ ಮಹಿಳೆಯರು ಇಂದು ಜಗತ್ತಿಗೆ ಮಾದರಿಯಾಗಿದ್ದಾರೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನೃತ್ಯ ಮತ್ತು ಸಂಗೀತ ಸಂಘದ ಮಾಜಿ ಸದಸ್ಯೆ ಶ್ರೀಮತಿ ರೇಖಾ ಪ್ರೇಮ ಕುಮಾರ್, ನೈತಿಕ ಶಿಕ್ಷ ಣದಲ್ಲಿ ತಂದೆ- ತಾಯಿ ಪಾತ್ರಗಳ ಕುರಿತು ಮಾತನಾಡಿ, ಉತ್ತಮ ಸಮಾಜ ನಿರ್ಮಾಣವು ಮಹಿಳೆಯರ ಕರ್ತವ್ಯ ಕೂಡ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರದ ಯೋಜನಾಧಿಕಾರಿ ಪ್ರಸಾದ್, ಮಲ್ಲೇಶ್ವರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಸಂತ್ ಕುಮಾರ್, ಯೋಜನೆಯ ಮೇಲ್ವಿಚಾರಕರಾದ ಸುಮಾ ಸೇರಿ ವಿವಿಧ ಮುಖಂಡರು, ಮಹಿಳೆಯರು ಹಾಜರಿದ್ದರು.

---18ಕೆಕೆಡಿಯು1.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ