ಲಟ್ಟಣಿಕೆ ಹಿಡಿದು ಪ್ರತಿಭಟಿಸಿದ ಅತಿಥಿ ಉಪನ್ಯಾಸಕರು

KannadaprabhaNewsNetwork |  
Published : Dec 19, 2023, 01:45 AM IST
ವಿಜಯಪುರದಲ್ಲಿ ಉಪನ್ಯಾಸಕಿಯರು ಲಟ್ಟಣಿಗೆ ಹಿಡಿದು ಚಳವಳಿ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. | Kannada Prabha

ಸಾರಾಂಶ

ವಿಜಯಪುರ ಸೇವೆ ಕಾಯಂಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿ ಸೋಮವಾರ 26ನೇ ದಿನಕ್ಕೆ ಕಾಲಿಟ್ಟಿದ್ದು, ಉಪನ್ಯಾಸಕಿಯರು ಲಟ್ಟಣಿಗೆ ಚಳವಳಿ ಮಾಡುವ ಮೂಲಕ ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸೇವೆ ಕಾಯಂಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿ ಸೋಮವಾರ 26ನೇ ದಿನಕ್ಕೆ ಕಾಲಿಟ್ಟಿದ್ದು, ಉಪನ್ಯಾಸಕಿಯರು ಲಟ್ಟಣಿಗೆ ಹಿಡಿದು ಚಳವಳಿ ಮಾಡುವ ಮೂಲಕ ಆಕ್ರೋಶ ಹೊರಹಾಕಿದರು.

ಅತಿಥಿ ಉಪನ್ಯಾಸಕರು ಕಳೆದ 15-20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಸರ್ಕಾರ ಸೇವೆ ಕಾಯಂಗೊಳಿಸಿ ಸೇವಾ ಭದ್ರತೆ ನೀಡಬೇಕು ಎಂದು ಆಗ್ರಹಿಸಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಬೇಡಿಕೆ ಸ್ಪಂದಿಸದ ಹಿನ್ನೆಲೆ ಅನಿರ್ದಿಷ್ಟ ಕಾಲದವರೆಗೆ ಮುಷ್ಕರ ನಡೆಸಲು ರಾಜ್ಯ ಸಂಘಟನೆ ನಿರ್ಧರಿಸಿದೆ. ಬೇಡಿಕೆ ಈಡೇರುವ ತನಕ ಮುಷ್ಕರ ಬಿಡಲ್ಲ ಎಂದು ಹಠ ಹಿಡಿದಿದ್ದಾರೆ.

ಸೋಮವಾರ ಅತಿಥಿ ಉಪನ್ಯಾಸಕಿಯರು ಲಟ್ಟಣಿಕೆ ಹಿಡಿದು ಧರಣಿಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆಯುವ ಪ್ರಯತ್ನ ನಡೆಸಿದರು. ಧರಣಿಯಲ್ಲಿ ಡಾ.ಆನಂದ ಕುಲಕರ್ಣಿ, ಸುರೇಶ ಡಬ್ಬಿ, ಆರ್.ಎಲ್. ಕಡೇಮನಿ, ಡಾ.ರೇಣುಕಾ ಹೆಬ್ಬಾಳ, ಡಾ.ಡಿ.ಬಿ. ಕುಲಕರ್ಣಿ, ಶ್ರೀಶೈಲ ಹೆಬ್ಬಿ, ಡಾ. ಆರ್.ಕೆ. ತೇಲಿ, ಮಹೇಶ ಕಲ್ಲೂರ, ಶಿವಾನಂದ ಸಿಂಹಾಸನಮಠ, ಲೀಲಾ ಲಕ್ಕಣ್ಣವರ, ಡಾ.ಅಶೋಕ ಬಿರಾದಾರ, ಡಾ.ಸುರೇಶ ಬಿರಾದಾರ, ಡಾ.ಎ.ಬಿ. ಬಬಲಿ, ಜಿ.ಆರ್. ರಾಠೋಡ, ಜಯಶ್ರೀ ಸಾಲಿಮಠ, ಆರ್.ಬಿ. ನಾಗರಡ್ಡಿ, ಎಸ್.ಐ. ಯಂಭತ್ತನಾಳ, ಎಸ್.ಬಿ. ಪೂಜಾರಿ. ಆರ್.ಜಿ. ಕಳ್ಳಿ, ವಿಜಯಲಕ್ಷ್ಮಿ ಪಾಟೀಲ, ಮಹಾನಂದ ಎಸ್.ಎಚ್., ತೇಜಸ್ವೀನಿ ಕೊರೆಗೊಳ, ಮಂಜುಳಾ ಭಾವಿಕಟ್ಟಿ, ಎಸ್.ಎಂ. ಹಡಪದ, ಆರ್.ಸಿ. ದೈಗೊಂಡ, ರಮೇಶ ಬಗಲಿ, ಕಾಶಿನಾಥ ಜಾಧವ, ಶಿಲ್ಪಾ ಉಕ್ಕಲಿ, ಆರ್.ಬಿ. ಮುದ್ದೇಬಿಹಾಳ, ರೂಪಾ ರುದ್ರಾಕ್ಷಿ, ಎಸ್.ಬಿ. ಬಿರಾದಾರ, ಬನದೇವಿ ಮಮದಾಪೂರ, ಸುರೇಶ ಕರಿಕಲ, ಎಂ.ಆರ್. ಪಾಟೀಲ, ಎಂ.ಎಸ್. ಖಾಕಂಡಕಿ, ಅರುಣ ರಾಠೋಡ, ಕವಿತಾ ಪಾಟೀಲ ಶೋಭಾ ತುಳಜಣ್ಣವರ, ರೂಪಾ ಕಮದಾಳ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ