ಕನ್ನಡಪ್ರಭ ವಾರ್ತೆ ಹೊಸದುರ್ಗ
ಡಾ. ವೀರೇಂದ್ರ ಹೆಗಡೆ ಅವರ ತಮ್ಮ ಸಮಾಜಮುಖಿ ಸೇವಾ ಬದುಕಿನಲ್ಲಿ ಸಮಸ್ಯೆಗಳು ಬಂದಾಗ ಕುಗ್ಗದೇ ದೃಢನಂಬಿಕೆ, ಆತ್ಮವಿಶ್ವಾಸದೊಂದಿಗೆ ಮುನ್ನಡೆದಾಗ ಸಮಸ್ಯೆಗಳು ಮಂಜಿನ ತರಹ ಮಾಯವಾಗುತ್ತವೆ ಎಂಬ ಅವರ ಮಾತುಗಳು ಸರ್ವಕಾಲಕ್ಕೂ ಸತ್ಯ. ನಾವು ಎಷ್ಟೇ ಒಳ್ಳೆಯ ಕಾರ್ಯಗಳನ್ನು ಮಾಡಿದರೂ ಟೀಕಾಕಾರರು ಇದ್ದೇ ಇರುತ್ತಾರೆ ಎಂದರು.
ನಮ್ಮ ಗುರಿಯ ಕಡೆಗೆ ನಮ್ಮ ಗಮನವಿರಬೇಕು. ಬೆರಳೆಣಿಕೆಯ ಕೆಲವರು ಧರ್ಮಸ್ಥಳ ಸಂಸ್ಥೆಯ ಹೆಸರು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅದು ಅವರಿಗೆ ಫಲಪ್ರದವಾಗುವುದಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಯಾವುದೇ ಸ್ವಾರ್ಥವಿಲ್ಲದೆ, ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.ಸಮಾಜ ಸೇವಕ ಕೆಪಿಸಿಸಿ ಸದಸ್ಯ ಅಲ್ತಾಪ್ ಪಾಷಾ ಮಾತನಾಡಿ, ಧರ್ಮಸ್ಥಳ ಸಂಘ ಜನರಲ್ಲಿ ನಿರಂತರವಾಗಿ ಸದ್ವಿಚಾರ- ಸದ್ಭಾವನೆಗಳನ್ನು ಬೆಳೆಸುತ್ತಿದೆ. ದುಶ್ಚಟಗಳಿಗೆ ಬಲಿಯಾಗಿರುವ ಜನರನ್ನು ಬದಲಾಯಿಸಿ ಒಳ್ಳೆಯ ಜೀವನಕ್ಕೆ ಕರೆತರುತ್ತಿದೆ ಎಂದರು.
ಸಂಘದ ಜಿಲ್ಲಾ ಕಚೇರಿ ಹಿರಿಯೂರು ವಿಭಾಗದ ಹಿರಿಯ ನಿರ್ದೇಶಕ ವಿನಯ್ ಕುಮಾರ್ ಸುವರ್ಣ, ಹೊಸದುರ್ಗ ತಾಲೂಕು ವಿಭಾಗದ ಯೋಜನಾಧಿಕಾರಿ ಶಿವಣ್ಣ ಮತ್ತು ಹಾಲು ರಾಮೇಶ್ವರ ವಿಭಾಗದ ಯೋಜನಾಧಿಕಾರಿ ಚಂದ್ರಶೇಖರ್ ಸೇರಿದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.