ಲಕ್ಷ್ಮೇಶ್ವರ: ಪಟ್ಟಣದ ಪೊಲೀಸ್ ಠಾಣೆಯ ಪಿಎಸ್‌ಐ ಈರಪ್ಪ ರಿತ್ತಿ ಅವರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆ, ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಗೋಸಾವಿ ಸಮಾಜ ಬಾಂಧವರು ತಹಸೀಲ್ದಾರ ಕಚೇರಿ ಮುಂದೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂಗಳವಾರ 8 ನೇ ದಿನದಲ್ಲಿ ಮುಂದುವರೆದಿರುವ ದೃಶ್ಯ ಕಂಡು ಬಂದಿತು.
ಈ ವೇಳೆ ಸ್ಥಳಕ್ಕೆ ಪಟ್ಟಣದ ತಹಸೀಲ್ದಾರ ವಾಸುದೇವ ವಿ ಸ್ವಾಮಿ ಪ್ರತಿಭಟನಾ ನಿರತ ಗೋಸಾವಿ ಸಮಾಜದ ಜತೆಗೆ ಮಾತನಾಡಿ, ಇನ್ನೂ 5 ದಿನಗಳ ಸಮಯ ಕೊಡಿ, ವರದಿ ಕೊಡುತ್ತೇವೆ. ಅಲ್ಲಿಯವರೆಗೂ ಉಪವಾಸ ಸತ್ಯಾಗ್ರಹ ಮಾಡಬೇಡಿ ಎಂದು ಮನವಿ ಹಿನ್ನೆಲೆಯಲ್ಲಿ ಗೋಸಾವಿ ಸಮಾಜದವರು ಅಹೋರಾತ್ರಿ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿದಿದ್ದು, ನ್ಯಾಯ ಸಿಗುವರೆಗೂ ಧರಣಿ ಸತ್ಯಾಗ್ರಹ, ಮುಂದುವರೆಸುತ್ತೇವೆ. 5 ದಿನಗಳ ನಂತರ ಪಿಎಸ್ಐ ಈರಪ್ಪ ರಿತ್ತಿ ಮೇಲೆ ಕ್ರಮ ಕೈಗೊಳ್ಳದಿದ್ದರೆ ಧರಣಿ ಜತೆಗೆ ಉಪವಾಸ ಸತ್ಯಾಗ್ರಹ ಮುಂದುವರೆಸುವ ಕಾರ್ಯ ಮಾಡುತ್ತೆವೆ ಎಂದು ಗೋಸಾವಿ ಸಮಾಜದವರು ಎಚ್ಚರಿಕೆ ನೀಡಿದರು.
ಈ ವೇಳೆ ಶ್ರೀರಾಮ ಸೇನಾ ತಾಲೂಕಾಧ್ಯಕ್ಷ ಈರಣ್ಣ ಪೂಜಾರ, ಬಸವರಾಜ ಚಕ್ರಸಾಲಿ, ಬಾಳಪ್ಪ ಗೋಸಾವಿ, ಹನುಮಂತ ರಾಮಗೇರಿ, ಚಿನ್ನು ಹಾಳ ದೋಟದ, ಹರೀಶ ಗೋಸಾವಿ, ಗೋವಿಂದ ಗೋಸಾವಿ, ನಿಖಿಲ ಗೋಸಾವಿ, ರಾಮು ಗೋಸಾವಿ, ರಾಜು ಗೋಸಾವಿ, ಜ್ಯೋತಿ ಗೋಸಾವಿ ಸೇರಿದಂತೆ ಗೋಸಾವಿ ಸಮಾಜ ಹಾಗೂ ಶ್ರೀ ರಾಮ್ ಸೇನಾ ಕಾರ್ಯಕರ್ತರು ಹಾಜರಿದ್ದರು.