ಹೊಸಕೋಟೆ: ನಗರದಲ್ಲಿ ಗುರುವಾರ ರಾತ್ರಿ ಧರ್ಮರಾಯಸ್ವಾಮಿ ದ್ರೌಪದಮ್ಮನವರ ಕರಗ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿಸಲಾಯಿತು.
ಕರಗ ವೀಕ್ಷಿಸಲು ನಗರವಷ್ಟೇ ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ಆಗಮಿಸಿದ್ದರು.
ಶಾಸಕ ಶರತ್ ಬಚ್ಚೇಗೌಡ ಪಾಲ್ಗೊಂಡು ಮಾತನಾಡಿ, ಹೊಸಕೋಟೆಯಲ್ಲಿ ನಡೆಯುವ ಕರಗ ಮಹೋತ್ಸವ ತನ್ನದೇ ಆದ ಇತಿಹಾಸ ಹೊಂದಿದ್ದು, ಬೆಂಗಳೂರಿನ ಕರಗ ಮಹೋತ್ಸವದ ಬಳಿಕ ಹೊಸಕೋಟೆ ಕರಗ ಮಹೋತ್ಸವ ಸಾಕಷ್ಟು ಮನ್ನಣೆ ಪಡೆದಿದೆ. ಇಂತಹ ಮಹತ್ವದ ಧಾರ್ಮಿಕ ಕಾರ್ಯಗಳಿಗೆ ನಮ್ಮ ಬೆಂಬಲ ಸದಾಕಾಲ ಇರುತ್ತದೆ ಎಂದರು.ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ವಿಜಯ್ ಕುಮಾರ್, ದೇವಾಲಯ ಸಮಿತಿ ಅಧ್ಯಕ್ಷ ಎಚ್.ಜೆ.ಶ್ರೀನಿವಾಸ್, ಉಪಾಧ್ಯಕ್ಷ ಉಪಾಧ್ಯಕ್ಷ ಯಜಮಾನ್ ರಾಜಣ್ಣ, ಕಾರ್ಯದರ್ಶಿ ಎಚ್.ಎ.ಕೃಷ್ಣಪ್ಪ, ಸಹಕಾರ್ಯದರ್ಶಿ ಗಣಚಾರಿ ಮುನಿಶ್ಯಾಮಣ್ಣ, ಖಜಾಂಚಿ ಎಚ್.ಕೆ.ಮೋಹನ್, ಧರ್ಮದರ್ಶಿಗಳು ಭಾಗವಹಿಸಿದ್ದರು. ಫೋಟೋ: 24 ಹೆಚ್ ಎಸ್‌ಕೆ 1 ಮತ್ತು 2
1: ಹೊಸಕೋಟೆಯಲ್ಲಿ ಇತಿಹಾಸ ಪ್ರಸಿದ್ಧ ದ್ರೌಪದಾಂಭ ದೇವಿ ಕರಗ ಮಹೋತ್ಸವದಲ್ಲಿ ಶಾಸಕ ಶರತ್ ಬಚ್ಚೇಗೌಡ ಭಾಗವಹಿಸಿ ಪೂಜೆ ಸಲ್ಲಿಸಿದರು. ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಇತರರಿದ್ದರು.2: ಹೊಸಕೋಟೆಯ ಕರಗ ಮಹೋತ್ಸವದಲ್ಲಿ ಎರಡನೇ ಬಾರಿಗೆ ಕರಗ ಹೊತ್ತ ಶೈಲೇಂದ್ರ ಪೂಜಾರಿ ಅವರೊಂದಿಗೆ ನೂರಾರು ವೀರಗಾರರು, ಭಕ್ತರು ಮೆರವಣಿಗೆಯಲ್ಲಿ ಸಾಗಿದರು.