ಧರ್ಮಸ್ಥಳ ಬಿಜೆಪಿಯ ಆಸ್ತಿಯಲ್ಲ ; ನಾವು ಸಹ ಭಕ್ತರು

KannadaprabhaNewsNetwork |  
Published : Sep 07, 2025, 01:00 AM IST
ಫೋಟೋ ಇದೆ :- 6 ಕೆಜಿಎಲ್ 1 :  ಕುಣಿಗಲ್ ಪಟ್ಟಣದ ಜಿಕೆ ಬಿಎಂಎಸ್  ಆವರಣದಲ್ಲಿ  ಧರ್ಮಸ್ಥಳ ಯಾತ್ರೆಗೆ ಚಾಲನೆ ನೀಡಿದ ಡಾ.ರಂಗನಾಥ್ | Kannada Prabha

ಸಾರಾಂಶ

ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ತಮ್ಮ ಬೆಂಬಲಿಗರ ಜೊತೆ ಸುಮಾರು 300ಕ್ಕಿಂತ ಹೆಚ್ಚು ವಾಹನಗಳಲ್ಲಿ ಧರ್ಮಸ್ಥಳ ಚಲೋ ನಡೆಸಿದರು.

 ಕುಣಿಗಲ್   : ಧರ್ಮಸ್ಥಳದ ಬುರುಡೆ ಪ್ರಕರಣ ಹುಸಿ ಆಗುತ್ತಿದ್ದಂತೆ ತಾಲೂಕಿನಲ್ಲಿ ಬಿಜೆಪಿ-ಜೆಡಿಎಸ್ ನವರು ಧರ್ಮಸ್ಥಳ ಪ್ರವಾಸ ಕೈಗೊಂಡಿದ್ದರು. ಹಲವಾರು ಕಾರುಗಳಲ್ಲಿ ಧರ್ಮಸ್ಥಳಕ್ಕೆ ತೆರಳಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ತಮ್ಮ ಬೆಂಬಲವನ್ನ ಸೂಚಿಸಿ ಬಂದಿದ್ದರು.  

ಈಗ ಮುಂದುವರಿದು ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ತಮ್ಮ ಬೆಂಬಲಿಗರ ಜೊತೆ ಸುಮಾರು 300ಕ್ಕಿಂತ ಹೆಚ್ಚು ವಾಹನಗಳಲ್ಲಿ ಧರ್ಮಸ್ಥಳ ಚಲೋ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ.ರಂಗನಾಥ್ ಹಿಂದೂ ಧರ್ಮ ಅಥವಾ ಧರ್ಮಸ್ಥಳದ ಮಂಜುನಾಥ ಕೇವಲ ಬಿಜೆಪಿಯವರ ಆಸ್ತಿಯಲ್ಲ. 

ನಾವು ಕೂಡ ಹಿಂದೂಗಳೇ ನಾವು ಧರ್ಮಸ್ಥಳದ ಭಕ್ತರು ಧರ್ಮದ ಉಳಿವಿಗಾಗಿ ನಾವು ಕೂಡ ಕ್ಷೇತ್ರಕ್ಕೆ ನಡೆದುಕೊಳ್ಳುತ್ತಿದ್ದೇವೆ. ಕರ್ನಾಟಕದಲ್ಲಿರುವ ಪೊಲೀಸರು ತುಂಬಾ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಕಾರ್ಯದಕ್ಷತೆ ಮುಂದಿನ ದಿನಗಳಲ್ಲಿ ಬಹಿರಂಗವಾಗಿ ಜನರಿಗೆ ಸತ್ಯದ ದರ್ಶನವಾಗಲಿದೆ ಎಂದರು. 

ಕುಣಿಗಲ್ ಪಟ್ಟಣದ ಜಿಕೆಬಿಎಮ್ಎಸ್ ಮೈದಾನದಲ್ಲಿ ಜಮಾವಣೆಗೊಂಡ ಸುಮಾರು 300ಕ್ಕೂ ಹೆಚ್ಚು ವಾಹನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ವಾಹನಗಳಿಗೆ ಕಾಂಗ್ರೆಸ್‌ ಬಾವುಟ ಕಟ್ಟಿ ಡಿಕೆ ಶಿವಕುಮಾರ್ , ಡಿ ಕೆ ಸುರೇಶ್ ಹಾಗೂ ಡಾ. ರಂಗನಾಥ್ ಪರ ಘೋಷಣೆಗಳನ್ನು ಕೂಗುತ್ತಾ ಧರ್ಮಸ್ಥಳ ಯಾತ್ರೆಗೆ ತೆರಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ