ಅಗಲಿದ ಶೌರ್ಯ ಸದಸ್ಯನ ಮನೆಗೆ ಧರ್ಮಸ್ಥಳದ ಆರ್ಥಿಕ ನೆರವು

KannadaprabhaNewsNetwork |  
Published : Sep 11, 2026, 02:00 AM IST
ಅಗಲಿದ ಶೌರ್ಯ ಸದಸ್ಯನ ಮನೆಗೆ ಧರ್ಮಸ್ಥಳದ ಆರ್ಥಿಕ ನೆರವು.. | Kannada Prabha

ಸಾರಾಂಶ

Dharmasthala's financial assistance to the home of a departed Shaurya member

ಕಳಸ: ತಾಲೂಕಿನ ಸಂಸೆಯಲ್ಲಿ ಜೂನ್ ತಿಂಗಳಲ್ಲಿ ಮರದ ಕೊಂಬೆ ಬಿದ್ದು ಅಕಾಲಿಕವಾಗಿ ಮೃತಪಟ್ಟ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಕ್ರಿಯ ಸದಸ್ಯರಾಗಿದ್ದ ರಘುನಾಥ್ ಹೆಚ್.ಕೆ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹50,000 ಆರ್ಥಿಕ ನೆರವು ಮಂಜೂರಾಗಿದ್ದು, ಮಂಜೂರಾತಿ ಪತ್ರವನ್ನು ಅವರ ತಾಯಿ ಕಮಲಮ್ಮ ಅವರಿಗೆ ವಿತರಿಸಲಾಯಿತು. ಕಳೆದ ಎರಡು ತಿಂಗಳ ಹಿಂದೆ ಮರದ ಕೊಂಬೆ ಬಿದ್ದು ರಘುನಾಥ್ ಅವರು ಅಕಾಲಿಕವಾಗಿ ಮೃತಪಟ್ಟಿದ್ದರು. ಕುಟುಂಬದ ಆಧಾರ ಸ್ತಂಭವನ್ನು ಕಳೆದುಕೊಂಡ ಸಂದರ್ಭದಲ್ಲಿ ಅವರ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದ ಯೋಜನೆಯು ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ.

ಈ ಸಂದರ್ಭದಲ್ಲಿ ಯೋಜನಾಧಿಕಾರಿ ಸುರೇಶ್, ಶೃಂಗೇರಿ–ಕಳಸ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಮಹೇಶ್ ಬಿ.ಕೆ., ಕಳಸ ವಲಯ ಮೇಲ್ವಿಚಾರಕ ಮಂಜುನಾಥ್, ಸೇವಾಪ್ರತಿನಿಧಿ ಅರುಣ್ ಹಾಗೂ ರಾಮ್ ಪ್ರಕಾಶ್ ಸೇರಿದಂತೆ ಶೌರ್ಯ ಘಟಕದ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಕೈಯಲ್ಲಿ ಮೂಡಿ ಬಂದ ಮಣ್ಣಿನ ಗಣೇಶ
ಹನೂರಿನಲ್ಲಿ ರೈತ ಸಂಘದಿಂದ ಬೃಹತ್ ಪ್ರತಿಭಟನೆ: ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ