ಗಣೇಶ ಚತುರ್ಥಿಗೆ ಪರಿಸರ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಕುಣಿಗಲ್ ಪುರಸಭೆಯ ಮುಖ್ಯ ಅಧಿಕಾರಿ ರವಿಕುಮಾರ್ ನೇತೃತ್ವದಲ್ಲಿ ನೂರಾರು ಮಕ್ಕಳು ಪುರಸಭೆ ಆವರಣದಲ್ಲಿ ಮಣ್ಣಿನ ಗಣಪತಿಗಳನ್ನು ನಿರ್ಮಿಸುವ ಮೂಲಕ ಜಾಗೃತಿ ಮೂಡಿಸಿದರು.

ಕನ್ನಡಪ್ರಭ ವಾರ್ತೆ ಕುಣಿಗಲ್ ಗಣೇಶ ಚತುರ್ಥಿಗೆ ಪರಿಸರ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಕುಣಿಗಲ್ ಪುರಸಭೆಯ ಮುಖ್ಯ ಅಧಿಕಾರಿ ರವಿಕುಮಾರ್ ನೇತೃತ್ವದಲ್ಲಿ ನೂರಾರು ಮಕ್ಕಳು ಪುರಸಭೆ ಆವರಣದಲ್ಲಿ ಮಣ್ಣಿನ ಗಣಪತಿಗಳನ್ನು ನಿರ್ಮಿಸುವ ಮೂಲಕ ಜಾಗೃತಿ ಮೂಡಿಸಿದರು. ರಂಗನಾಥ ಕ್ರಿಕೆಟ್ ಕ್ಲಬ್ ನ ಹಲವಾರು ವಿದ್ಯಾರ್ಥಿಗಳು ಕುಣಿಗಲ್ ಪಟ್ಟಣದ ಪುರಸಭಾ ಆವರಣದಲ್ಲಿ ಇರಿಸಲಾಗಿದ್ದ ಜೇಡಿ ಮಣ್ಣಿನಿಂದ ತಮಗೆ ಇಷ್ಟವಾದ ಗಣೇಶನ ಮೂರ್ತಿಗಳನ್ನು ರಚಿಸಿ ಸಾರ್ವಜನಿಕರಿಗೆ ಮಣ್ಣಿನ ಗಣೇಶಗಳನ್ನು ಪೂಜಿಸುವಂತೆ ಪಿಒಪಿ ಗಣೇಶಗಳನ್ನು ತ್ಯಜಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅಧಿಕಾರಿ ರವಿಕುಮಾರ್ ಪರಿಸರ ಸ್ನೇಹಿ ಗಣೇಶಗಳನ್ನು ಮಣ್ಣಿನಿಂದ ತಯಾರಿಸಿ ಪೂಜಿಸಿ ನಂತರ ವೈಜ್ಞಾನಿಕವಾಗಿ ನಿಮ್ಮ ಮನೆಗಳಲ್ಲಿ ಅಕ್ಕಪಕ್ಕ ಒಂದು ಬಕೆಟ್ ಅಲ್ಲಿ ನೀರಿಟ್ಟು ಅದರಲ್ಲಿ ಅದನ್ನು ಕರಗಿಸಿ ಪುನಃ ಮರುಬಳಕೆ ಮಾಡಿ ಗಿಡ ಬೆಳೆಸುವ ಮೂಲಕ ಪರಿಸರ ಜಾಗೃತಿ ಮಾಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ರಂಗನಾಥ್ ನ ಕ್ರಿಕೆಟ್ ಕ್ಲಬ್ ನ ಅಧ್ಯಕ್ಷ ರಂಗನಾಥ್ , ಟೀಮ್ ನಕ್ಷತ್ರದ ಅಧ್ಯಕ್ಷ ವಿಜಯ ಕೃಷ್ಣ, ಪರಿಸರ ಅಧಿಕಾರಿಗಳು ಶ್ರೀಕಾಂತ್, ಇಂಜಿನಿಯರ್ ಬಿಂದು, ಸೇರಿದಂತೆ ಇಲಾಖಾ ಅಧಿಕಾರಿಗಳು ಇದ್ದರು.