ರಟ್ಟೀಹಳ್ಳಿ ತಾಲೂಕಿನ ಮಳಗಿ ಗ್ರಾಮದ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಸ್ವ ಸಹಾಯ ಸಂಘದಿಂದ ನೀಡಲಾದ 1.5 ಲಕ್ಷ ಹಣದ ಡಿಡಿಯನ್ನು ಟ್ರಸ್ಟ್ ಕಮಿಟಿಗೆ ತಾಲೂಕು ಯೋಜಾನಾಧಿಕಾರಿ ಸುನೀತಾ ಗುರುವಾರ ಹಸ್ತಾಂತರಿಸಿದರು.
ರಟ್ಟೀಹಳ್ಳಿ:ತಾಲೂಕಿನ ಮಳಗಿ ಗ್ರಾಮದ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಸ್ವ ಸಹಾಯ ಸಂಘದಿಂದ ನೀಡಲಾದ 1.5 ಲಕ್ಷ ಹಣದ ಡಿಡಿಯನ್ನು ಟ್ರಸ್ಟ್ ಕಮಿಟಿಗೆ ತಾಲೂಕು ಯೋಜಾನಾಧಿಕಾರಿ ಸುನೀತಾ ಗುರುವಾರ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ದೇವಸ್ಥಾನ ಟ್ರಸ್ಟ ಕಮಿಟಿ ಅಧ್ಯಕ್ಷ ವೀರನಗೌಡ ಮರದ ಕಳೆದ ಜನವರಿ 2026ರಲ್ಲಿ ಡಾ. ಪೂಜ್ಯ ವೀರೇಂದ್ರ ಹೆಗ್ಗಡೆಯವರನ್ನು ಕಮಿಟಿ ಎಲ್ಲ ಸದಸ್ಯರು ಭೇಟಿ ಮಾಡಿ ಗ್ರಾಮದ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧನಸಹಾಯಕ್ಕೆ ಮನವಿ ಮಾಡಿದ ಸಂದರ್ಭದಲ್ಲಿ ಭರವಸೆಯನ್ನು ನೀಡಿದ್ದರು, ಅದರ ಪ್ರಕಾರ ಒಂದು ತಿಂಗಳಲ್ಲಿ ನಮ್ಮ ಮನವಿಗೆ ಸ್ಪಂದಿಸಿ ದೇವಸ್ಥಾನದ ಅಭಿವೃದ್ಧಿಗಾಗಿ 1.50 ಲಕ್ಷ ಹಣದ ಡಿಡಿಯನ್ನು ನೀಡಿರುವುದು ನಮ್ಮೇಲ್ಲರಿಗೂ ಹರ್ಷ ತಂದಿದೆ. ಅವರ ಈ ಸೇವಾ ಮನೋಭಾವನೆ ನಮಗೆಲ್ಲ ಸ್ಫೂರ್ತಿ. ಅವರು ನೀಡಿದ ಹಣವನ್ನು ನ್ಯಾಯಸಮ್ಮತವಾಗಿ ಬಳಕೆ ಮಾಡಿಕೊಂಡು ದೇವಸ್ಥಾನವನ್ನು ಸಂಪೂರ್ಣ ಅಭಿವೃದ್ಧಿಗೊಳಿಸಲಾಗುವುದು ಎಂದರು.
ಹಿರೇಕೆರೂರ ತಾಲೂಕು ಯೋಜಾನಾಧಿಕಾರಿ ಸುನೀತಾ, ಹಿರೇಮೊರಬ ವಲಯ ಮೇಲ್ವೀಚಾರಕ ಕೃಷ್ಣಮೂರ್ತಿ, ಸೇವಾ ಪ್ರತಿನಿಧಿ ಅಕ್ಷತಾ, ಒಕ್ಕೂಟದ ಕೋಶಾಧಿಕಾರಿ ಶಕುಂತಲಾ ಗೌಡರ, ದೇಸ್ಥಾನ ಟ್ರಸ್ಟ ಕಮಿಟಿ ಕಾರ್ಯದರ್ಶಿ ಮಂಜು ಗೌಡರ, ಸಿದ್ದನಗೌಡ ಗೌಡರ ಹಾಗೂ ಸದಸ್ಯರು ಗ್ರಾಮಸ್ಥರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.