ಡಂಬಳ: ಯುವಕರು ದುಶ್ಚಟಗಳಿಗೆ ದಾಸರಾಗದೇ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಡಾ. ತೋಂಟದಾರ್ಯ ಸಿದ್ದರಾಮ ಸ್ವಾಮಿಗಳು ತಿಳಿಸಿದರು.
ಯುವಕರು ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡಬೇಕು. ಮನೆಯಲ್ಲಿ ಇರುವ ಆಹಾರಕ್ಕೆ ಪ್ರಾಧಾನ್ಯತೆ ನೀಡಬೇಕು. ಡಂಬಳ ಐತಿಹಾಸಿಕ ಹಿನ್ನೆಲೆಯ ಗ್ರಾಮವಾಗಿದೆ. ಇಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡುತ್ತಾ ಬರುತ್ತಿರುವುದು ಪ್ರಶಂಸನೀಯ ಎಂದರು.
ಮುತ್ತಪ್ಪ ಭೋವಿ ದೊಡ್ಡಗಾತ್ರದ ಮರಳು ತುಂಬಿದ ಹಿತ್ತಾಳಿ ಕೊಡವನ್ನು ಎತ್ತಿದರೆ ಇನ್ನೂ ಕೆಲ ಯುವಕರು 65, 35, 30 ತೂಕದ ಕಲ್ಲುಗಳನ್ನು ಎತ್ತುವುದರ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.ಈ ಸಂದರ್ಭದಲ್ಲಿ ಮರಿತೇಮಪ್ಪ ಆದಮ್ಮನವರ, ಮುಖಂಡ ಮಲ್ಲಪ್ಪ ಮಠದ, ಜಿ.ವಿ. ಹಿರೇಮಠ, ಯುವ ಮುಖಂಡ ಶರಣು ಬಂಡಿಹಾಳ, ಮಳ್ಳಪ್ಪ ಮಠದ, ವಿರುಪಾಕ್ಷಪ್ಪ ಲಕ್ಕುಂಡಿ, ಭೀಮಪ್ಪ ಗದಗಿನ, ಯಲ್ಲಪ್ಪ ದಂಡಿನ, ಯಂಕಣ್ಣ ಗಡಗಿ, ಮಂಜುನಾಥ ಸಂಜೀವಣ್ಣವರ, ಗೌಸಿದ್ದಪ್ಪ ಹಳ್ಳಾಕಾರ, ಗ್ರಾಮದ ಹಿರಿಯರು, ಯುವಕರು ಇದ್ದರು. ಆರ್.ಜಿ. ಕೊರ್ಲಹಳ್ಳಿ ನಿರೂಪಿಸಿ, ವಂದಿಸಿದರು.
ಆಸೆಯಿಂದ ದೂರವಿದ್ದರೆ ಸುಖ, ಶಾಂತಿಡಂಬಳ: ಮನುಷ್ಯನು ಸುಖ, ಶಾಂತಿ, ನೆಮ್ಮದಿ ಆರೋಗ್ಯದಿಂದ ಬದುಕಬೇಕಾದರೆ ಆಸೆಯಿಂದ ದೂರ ಇದ್ದಾಗ ಮಾತ್ರ ಸಾಧ್ಯ ಎಂದು ಡಾ. ತೋಂಟದಾರ್ಯ ಸಿದ್ದರಾಮ ಸ್ವಾಮಿಗಳು ತಿಳಿಸಿದರು.ಗ್ರಾಮದ ಆರಾಧ್ಯ ದೇವರಾದ ತೋಂಟದಾರ್ಯ ಮದರ್ಧನಾರೀಶ್ವರರ 286ನೇ ಜಾತ್ರಾ ಮಹೋತ್ಸವದ ನಿಮಿತ್ತ ಲಘು ರಥೋತ್ಸವ, ರೊಟ್ಟಿ ಜಾತ್ರೆಯ ದಾಸೋಹಕ್ಕೆ ಚಾಲನೆ ನೀಡಿ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಕಾಯಕದಿಂದ ಮಾತ್ರ ಪ್ರತಿಫಲದ ಸಂಪತ್ತು ಬರಲಿದೆ. ಕಾಯಕದಿಂದ ಬಂದ ಸಂಪತ್ತಿನಲ್ಲಿ ಕಡುಬಡವರಿಗೆ ಮತ್ತು ಜಾತ್ರಾ ಮಹೋತ್ಸವಗಳಲ್ಲಿ ದಾಸೋಹದ ರೂಪದಲ್ಲಿ ಹಂಚಿ ತಿನ್ನಬೇಕು ಎಂದರು.ಮಹಿಳೆಯರು ಆಯ್ದಕ್ಕಿ ಲಕ್ಕಮ್ಮನ ವಿಚಾರದಂತೆ ನಡೆದುಕೊಳ್ಳಬೇಕು. ಜಾತ್ರೆಯಲ್ಲಿ ವಿದ್ಯಾರ್ಥಿಗಳು ಸಂಘಟನಾತ್ಮಕವಾಗಿ ಕಾಯಕದ ಜತೆಗೆ ಅನ್ನದಾಸೋಹಕ್ಕೆ ಸಹಕಾರ ನೀಡಲು ಮುಂದಾಗುತ್ತಿರುವುದು ಪ್ರಶಂಸನೀಯ ಎಂದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಶಿವಪ್ಪ ಪ್ಯಾಟಿ, ಯಲ್ಲಪ್ಪ ದಂಡಿನ, ಯಂಕಣ್ಣ ಗಡಗಿ, ಬುಡ್ನೆಸಾಬ ಅತ್ತಾರ, ತಿಮ್ಮಪ್ಪ ವಡ್ಡರ, ಜಿ.ವಿ. ಹಿರೇಮಠ, ಸಿ.ಆರ್. ಹಿರೇಮಠ, ಮುದಿಯಪ್ಪ ಗದಗಿನ, ಗವಿಸಿದ್ದಪ್ಪ ಹಳ್ಳಾಕಾರ, ಮಲ್ಲಿಕಾರ್ಜುನ ಪ್ಯಾಟಿ, ರಾಘು ಹಡಪದ, ದುರಗಪ್ಪ ಹರಿಜನ, ರೇವಣಸಿದ್ದಪ್ಪ ಕರಿಗಾರ, ಬಸವರಾಜ ಹಮ್ಮಗಿ, ಮುದಕಪ್ಪ ಮೇವುಂಡಿ, ಗೌಸುಸಾಬ ಆಲೂರ, ನಾಗರಾಜ ಗಡಗಿ, ಕುಮಾರ ರಸಾಳಕರ, ಭೀಮಪ್ಪ ಪೂಜಾರ, ಮುತ್ತಣ್ಣ ಕೊಂತಿಕಲ್ಲ ಸೇರಿದಂತೆ ಅಪಾರ ಭಕ್ತರು ಭಾಗವಹಿಸಿದ್ದರು.