ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಣ್ಣೂರು ಚಿಮೇನಿ ನಿತ್ಯಾನಂದ ಮಠದ ಅವಧೂತ ಶ್ರೀ ವಿನು ಸ್ವಾಮೀಜಿ ಭಕ್ತರೊಂದಿಗೆ ಸೋಮವಾರ ಧರ್ಮಸ್ಥಳ ಕ್ಷೇತ್ರಕ್ಕೆ ಕ್ಷೇತ್ರ ರಕ್ಷಾ ಯಾತ್ರೆ ಮೂಲಕ ಆಗಮಿಸಿ ಪ್ರವಚನ ಮಂಟಪದಲ್ಲಿ ಆಶೀರ್ವಚನ ನೀಡಿದರು.
ಬೆಳ್ತಂಗಡಿ: ಲಕ್ಷಾಂತರ ಮಂದಿ ಸರ್ವಧರ್ಮೀಯರ ಶ್ರದ್ಧಾ-ಭಕ್ತಿಯ ಕೇಂದ್ರ ಧರ್ಮಸ್ಥಳವು ಎಲ್ಲಾ ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ಮಾದರಿಯಾಗಿ ಪ್ರೇರಕ ಶಕ್ತಿಯಾಗಿದ್ದು, ಅತಿಶಯ ಕ್ಷೇತ್ರವಾಗಿ ಇನ್ನಷ್ಟು ಬೆಳೆಯಲಿ, ಬೆಳಗಲಿ ಎಂದು ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದ್ದಾರೆ.ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಣ್ಣೂರು ಚಿಮೇನಿ ನಿತ್ಯಾನಂದ ಮಠದ ಅವಧೂತ ಶ್ರೀ ವಿನು ಸ್ವಾಮೀಜಿ ಹಾಗೂ ತಮ್ಮ ಭಕ್ತರೊಂದಿಗೆ ಸೋಮವಾರ ಧರ್ಮಸ್ಥಳ ಕ್ಷೇತ್ರಕ್ಕೆ ಕ್ಷೇತ್ರ ರಕ್ಷಾ ಯಾತ್ರೆ ಮೂಲಕ ಆಗಮಿಸಿ ಪ್ರವಚನ ಮಂಟಪದಲ್ಲಿ ಅವರು ಆಶೀರ್ವಚನ ನೀಡಿದರು.
ಧಾರ್ಮಿಕ ಶ್ರದ್ಧಾಕೇಂದ್ರಗಳ ರಕ್ಷಣೆ ಭಕ್ತರ ಕರ್ತವ್ಯ ಹಾಗೂ ಹೊಣೆಗಾರಿಕೆ. ನಾವೆಲ್ಲರೂ ನ್ಯಾಯ, ನೀತಿ ಹಾಗೂ ಧರ್ಮಮಾರ್ಗದಲ್ಲಿ ನಡದಾಗ ಅನ್ಯಾಯ, ಅಧರ್ಮ, ಅಪಪ್ರಚಾರಕ್ಕೆ ಸೋಲು ಖಚಿತ. ಮಾಧ್ಯಮಗಳಲ್ಲಿ ಪ್ರಸಾರವಾಗುವ ಅಪಪ್ರಚಾರ ಹಾಗೂ ವದಂತಿಗಳು ಗ್ರಹಣದಂತೆ ಕ್ಷಣಿಕವಾಗಿದ್ದು ಅವುಗಳನ್ನು ಕಡೆಗಣಿಸಬೇಕು ಎಂದರು.ಎಂಟು ಶತಮಾನಗಳಿಂದ ಸರ್ವಧರ್ಮೀಯರ ಶ್ರದ್ಧಾ-ಭಕ್ತಿಯ ಕೇಂದ್ರವಾದ ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗೆ ನಾವೆಲ್ಲರೂ ಸಿದ್ಧರಾಗಿ, ಬುದ್ಧರಾಗಿ ಹೆಗ್ಗಡೆ ಅವರ ಜೊತೆಗಿದ್ದೇವೆ ಎಂದು ಸ್ವಾಮೀಜಿ ಭರವಸೆ ನೀಡಿದರು.ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ಧರ್ಮಸ್ಥಳ ಹಾಗೂ ಎಡನೀರು ಮಠಕ್ಕೆ ಅವಿನಾಭಾವ ಸಂಬಂಧವಿದೆ ಎಂದರು.ಕೊಂಡೆವೂರು ಮಠದ ಯೋಗಾನಂದ ಸರಸ್ವತಿ ಸ್ವಾಮೀಜಿ ಮತ್ತು ಕಣ್ಣೂರು ಚಿಮೇನಿ ನಿತ್ಯಾನಂದ ಮಠದ ಅವಧೂತ ವಿನು ಸ್ವಾಮೀಜಿ ಉಪಸ್ಥಿತರಿದ್ದರು.ಶ್ರೀನಿವಾಸ ರಾವ್ ಧರ್ಮಸ್ಥಳ ಸ್ವಾಗತಿಸಿ, ವಂದಿಸಿದರು. ಮೂವರು ಯತಿಗಳನ್ನು ಕ್ಷೇತ್ರಕ್ಕೆ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ದೇವರ ದರ್ಶನದ ಬಳಿಕ ಹೆಗ್ಗಡೆಯವರ ಬೀಡಿನಲ್ಲಿ ಅವರನ್ನು ಡಿ. ಹರ್ಷೇಂದ್ರ ಕುಮಾರ್ ಗೌರವಿಸಿದರು. ಹೇಮಾವತಿ ವೀ. ಹೆಗ್ಗಡೆ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.