ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ತ್ರೈಮಾಸಿಕ ಸಭೆ

KannadaprabhaNewsNetwork |  
Published : Jul 29, 2026, 02:45 AM IST
ಎನ್ನುವ | Kannada Prabha

ಸಾರಾಂಶ

ಈ ಹಿಂದೆ ಬ್ಯಾಂಕ್‌ಗಳಲ್ಲಿ ಖಾತೆಯನ್ನು ಹೊಂದಬೇಕೆಂದರೆ ಸಾಕಷ್ಟು ಕಠಿಣ ನಿಯಮಗಳಿದ್ದವು ಎಂದು ಐಡಿಬಿಐ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಬಾಬುರಾವ್ ಮಾಹಿತಿ ನೀಡಿದರು.

ಸುಂಟಿಕೊಪ್ಪ: ಈ ಹಿಂದೆ ಬ್ಯಾಂಕ್‌ಗಳಲ್ಲಿ ಖಾತೆಯನ್ನು ಹೊಂದಬೇಕೆಂದರೆ ಸಾಕಷ್ಟು ಕಠಿಣ ನಿಯಮಗಳಿದ್ದವು ಎಂದು ಐಡಿಬಿಐ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಬಾಬುರಾವ್ ಮಾಹಿತಿ ನೀಡಿದರು. ಭಾನುವಾರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಒಕ್ಕೂಟದ ತ್ರೈಮಾಸಿಕ ಸಭೆಯು ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅಯೋಜಿಸಲಾದ ಸಮಾರಂಭದಲ್ಲಿ ಮಾತನಾಡಿದರು.

ಹಿಂದೆಲ್ಲ ಸಾಮಾನ್ಯ ಜನತೆಯು ಬ್ಯಾಂಕ್‌ಗಳ ಖಾತೆಯನ್ನು ತೆರೆಯಲು ಇನ್ನಿಲ್ಲದ ಹರಸಾಹಸ ಪಡಬೇಕಾಗಿತ್ತು. ಅವುಗಳಿಂದ ದೂರವೇ ಉಳಿದುಕೊಂಡಿರುವುದನ್ನು ಮನಗಂಡ ಸರ್ಕಾರಗಳು ಪ್ರತಿಯೊಬ್ಬರು ಬ್ಯಾಂಕ್ ಖಾತೆ ಹೊಂದಬೇಕು. ಇದಕ್ಕೆ ಬೇಕಾದ ಕಾನೂನು ನಿಯಮಗಳನ್ನು ಸಡಿಲೀಕರಣಕರಣಗೊಳಿಸುವ ಮೂಲಕ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿಕೊಳ್ಳುವುದರಿಂದ ಪ್ರತಿಯೊಬ್ಬ ಗ್ರಾಹಕನಿಗೂ ನಿರಖು ಠೇವಣಿ, ವಿಮೆ ಸೇರಿದಂತೆ ಸಾಕಷ್ಟು ಯೋಜನೆಗಳ ಸೌಲಭ್ಯವನ್ನು ಜಾರಿಗೆ ತಂದಿದೆ. ಅದರ ಸದುಪಯೋಗವನ್ನು ಪಡೆದು ಹಣ ಇನ್ನೊಬ್ಬರ ಪಾಲಾಗದಂತೆ ಸುರಕ್ಷತೆಯಿಂದ ಬ್ಯಾಂಕ್ ಖಾತೆ ಹೊಂದಿಕೊಳ್ಳುವಂತೆ ಕರೆ ನೀಡಿದರು.

ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧ.ಗ್ರಾ.ಯೋ. ಸುಂಟಿಕೊಪ್ಪ ವಲಯ ಮೇಲ್ವಿಚಾರಕರಾದ ಸಂತೋಷ್, ಐಡಿಬಿಐ ಬ್ಯಾಂಕಿನ ವ್ಯವಸ್ಥಾಪಕರಾದ ಮುತ್ತುರಾಜ್ ಮಾತನಾಡಿದರು.

ಮೊದಲಿಗೆ ಜವಬ್ಧಾರಿ ತಂಡದ ಪುಷ್ಪಲತಾ ಸ್ವಾಗತಿಸಿದರು. ಸೇವಾಪತ್ರಿನಿಧಿ ಯಶೋಧ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಕಿದಿಯೂರು ಕ್ರೆ.ಕೋ.ಆಪ್ ಸೊಸೈಟಿ ಕಿನ್ನಿಮುಲ್ಕಿ ಶಾಖೆ ಶುಭಾರಂಭ
ಹಾಸನ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂಲ್ಕಿಯ ಮಹಿಳೆ ಸಾವು