ಕನ್ನಡಪ್ರಭ ವಾರ್ತೆ ಮೈಸೂರು
ಟ್ರಸ್ಟ್ ನ ಯೋಜನಾಧಿಕಾರಿ ಪಿ. ಶಶಿರೇಖಾ ಅವರು ಗಿಡ ನೆಟ್ಟು ಮಾತನಾಡಿ, ಪರಿಸರ ಸಂರಕ್ಷಿಸುವುದರ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಗಾಳಿ ಮತ್ತು ಆರೋಗ್ಯ ವೃದ್ಧಿಗೆ ಸಹಕಾರಿ ಎನ್ನುವುದು ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಕನಸಾಗಿದ್ದು, ಅವರ ಕನಸನ್ನು ನನಸು ಮಾಡಲು ರಾಜ್ಯಾದ್ಯಂತ ಗಿಡ ಮರಗಳನ್ನು ಬೆಳಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು.
ಕೃಷಿ ಮೇಲ್ವಿಚಾರಕ ರಾಕೇಶ್, ಮೇಲ್ವಿಚಾರಕಿ ಕುಸುಮಾ, ಸೇವಾ ಪ್ರತಿನಿಧಿ ವಿಜಯ, ಒಕ್ಕೂಟದ ಅಧ್ಯಕ್ಷ ಯಶೋದಾ ಮತ್ತು ಸಂಘದ ಸದಸ್ಯರು ಭಾಗವಹಿಸಿದ್ದರು.