ಧಾರವಾಡ ಆಕಾಶವಾಣಿ ಕೇಂದ್ರ ಶೀಘ್ರ ಸ್ಥಳಾಂತರ?

KannadaprabhaNewsNetwork |  
Published : Apr 18, 2026, 02:15 AM IST
ಧಾರವಾಡ ಆಕಾಶವಾಣಿ ಕೇಂದ್ರ | Kannada Prabha

ಸಾರಾಂಶ

ಧಾರವಾಡ ಕೇಂದ್ರದಲ್ಲಿನ ಕೆಲಸದ ಹೊರೆ ಹೆಚ್ಚಾಗುತ್ತಿರುವುದರಿಂದ ಇಲ್ಲಿನ ನ್ಯೂಸ್‌ ಬುಲೆಟೆನ್‌ನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಸಕ್ಷಮ ಪ್ರಾಧಿಕಾರವೂ ತಿಳಿಸಿದೆ. ಈ ಮೂಲಕ ಈ ಕೇಂದ್ರಕ್ಕೆ ಮೊಳೆ ಹೊಡೆಯುವ ಸಿದ್ಧತೆ ಮಾಡಿಕೊಂಡಂತಾಗಿದೆ.

ಧಾರವಾಡ:

ಇಲ್ಲಿನ ಆಕಾಶವಾಣಿ ಪ್ರಾದೇಶಿಕ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ದೆಹಲಿಯಲ್ಲಿನ ಪ್ರಸಾರ ಭಾರತಿ ಸಕ್ಷಮ ಪ್ರಾಧಿಕಾರವೂ ಈ ನಿರ್ಧಾರ ಕೈಗೊಂಡಿದ್ದು, 2026ರ ಮೇ 15ರಿಂದ ಸ್ಥಳಾಂತರವಾಗಲಿದೆ ಎಂದು ತಿಳಿಸಿದೆ. ಇದು ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಧಾರವಾಡ ಕೇಂದ್ರದಲ್ಲಿನ ಕೆಲಸದ ಹೊರೆ ಹೆಚ್ಚಾಗುತ್ತಿರುವುದರಿಂದ ಇಲ್ಲಿನ ನ್ಯೂಸ್‌ ಬುಲೆಟೆನ್‌ನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಸಕ್ಷಮ ಪ್ರಾಧಿಕಾರವೂ ತಿಳಿಸಿದೆ. ಈ ಮೂಲಕ ಈ ಕೇಂದ್ರಕ್ಕೆ ಮೊಳೆ ಹೊಡೆಯುವ ಸಿದ್ಧತೆ ಮಾಡಿಕೊಂಡಂತಾಗಿದೆ. 2026ರ ಮೇ 15ರಿಂದಲೇ ಸ್ಥಳಾಂತರವಾಗಲಿದ್ದು, ಬೇಕಾದ ತಯಾರಿ ಮಾಡಿಕೊಳ್ಳಬೇಕು ಎಂದು ಧಾರವಾಡ ಪ್ರಾದೇಶಿಕ ಕೇಂದ್ರಕ್ಕೆ ಸೂಚಿಸಲಾಗಿದೆ. ತಾತ್ಕಾಲಿಕವಾಗಿ ಅಷ್ಟೇ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿಸಿದೆಯಾದರೂ ಒಮ್ಮೆ ಸ್ಥಳಾಂತರವಾದರೆ ಮತ್ತೆ ಪುನಾರಂಭಗೊಳ್ಳುತ್ತದೆ ಎಂಬ ಗ್ಯಾರಂಟಿ ಏನು ಎಂಬುದು ಆಕಾಶವಾಣಿ ಪ್ರಿಯರ ಪ್ರಶ್ನೆ.ಯಾವಾಗ ಪ್ರಾರಂಭ:

1981ರಲ್ಲಿ ಪ್ರಾರಂಭವಾಗಿದ್ದ ಧಾರವಾಡ ಆಕಾಶವಾಣಿ ಕೇಂದ್ರವೂ (ಪ್ರಸಾರ ಭಾರತಿಯ ಪ್ರಾದೇಶಿಕ ಕೇಂದ್ರ) ಅಲ್ಲಿಂದ ಜನ-ಮನ ಗೆದ್ದಿರುವ ಕೇಂದ್ರವಾಗಿದೆ. 1981ರಲ್ಲಿ ತನ್ನ ಮೊದಲು ನ್ಯೂಸ್‌ ಬ್ಯುಲೆಟೆನ್‌ ಪ್ರಸಾರ ಮಾಡಿತ್ತು. ಕೇಂದ್ರ ಆರಂಭವಾದಾಗಿನಿಂದಲೂ ನ್ಯೂಸ್‌ ಬುಲಿಟೆನ್‌ 10 ನಿಮಿಷ ಅವಧಿ ಹೊಂದಿತ್ತು. ಪ್ರತಿ ದಿನ ಬೆಳಿಗ್ಗೆ 7.05ಕ್ಕೆ ಪ್ರಸಾರವಾಗುತ್ತಿದೆ. ಬೆಳಗಿನ ಸುದ್ದಿಗಳಿಗೆ ಈಗಲೂ ಹೆಚ್ಚಿನ ಕೇಳುಗರು ಇದ್ದಾರೆ ಎಂಬುದು ಆಡಿಯನ್ಸ್‌ ರಿಸರ್ಚ್‌ ಯುನಿಟ್‌ ನಡೆಸಿದ ಸಮೀಕ್ಷೆ ತಿಳಿಸುತ್ತದೆ. ಪ್ರತಿ ಸೋಮವಾರ ಸಂಜೆ 6.30ರಿಂದ 5 ನಿಮಿಷ ಜಿಲ್ಲಾ ಸುದ್ದಿ ಪತ್ರ ಪ್ರಸಾರ ಮಾಡುತ್ತದೆ. ಧಾರವಾಡ, ಬೆಳಗಾವಿ, ಕೊಪ್ಪಳ, ಉತ್ತರ ಕನ್ನಡ, ಹಾವೇರಿ, ರಾಯಚೂರು, ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಬಳ್ಳಾರಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಬುಲಿಟೆನ್‌ ಮಾಡಲಾಗುತ್ತಿದೆ. ಆಯಾ ಜಿಲ್ಲೆಗಳ ಅರೆಕಾಲಿಕ ವರದಿಗಾರರು ವರದಿ ತಯಾರಿಸಿ ಮೇಲ್‌ ಮಾಡುತ್ತಾರೆ. 6 ನಿಮಿಷಗಳ (ಈ ಹಿಂದೆ 20 ನಿಮಿಷ ಇತ್ತು) ವ್ಯೂಸ್ ರೀಲ್ ಸಮಾಚಾರ ದರ್ಶನವು ಸಾಪ್ತಾಹಿಕ ಸುದ್ದಿ ನಿಯತಕಾಲಿಕೆಯಂತೆ ಪ್ರಸಾರ ವಾಗುತ್ತದೆ. ಈ ಕಾರ್ಯಕ್ರಮವನ್ನು ಧಾರವಾಡದ ಆಕಾಶವಾಣಿಯಿಂದ ಪ್ರತಿ ಶನಿವಾರ ಸಂಜೆ 6.20ಕ್ಕೆ ಪ್ರಸಾರ ಮಾಡುತ್ತದೆ. ಧಾರವಾಡದ ಕೇಂದ್ರವು ಪ್ರತಿದಿನ ಬೆಳಗ್ಗೆ 8.30, 9.30, 10.30, ಮತ್ತು ರಾತ್ರಿ 8.30ಕ್ಕೆ 2.50 ನಿಮಿಷ ಐದು ಎಫ್‌ಎಂ ಬುಲೆಟಿನ್ ಕೂಡ ಪ್ರಸಾರವಾಗುತ್ತವೆ. ನಿತ್ಯದ ಸ್ಥಳೀಯ ಸುದ್ದಿ ಮತ್ತು ಘಟನೆ ಒಳಗೊಂಡಿರುತ್ತವೆ. ಜತೆಗೆ ರಾಜ್ಯ/ರಾಷ್ಟ್ರ ಮಟ್ಟದ ಪ್ರಮುಖ ಘಟನಾವಳಿಗಳು ಇದರಲ್ಲಿ ಅಡಕವಾಗಿರುತ್ತಿದ್ದವು. ಆದರೆ, ಇದೀಗ ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರವೂ ಸ್ಥಳಾಂತರವಾಗುತ್ತಿದೆ. ಇವೆಲ್ಲವೂ ಇನ್ಮುಂದೆ ಬೆಂಗಳೂರು ಕೇಂದ್ರದಿಂದಲೇ ಪ್ರಸಾರವಾಗಲಿವೆ ಎಂದು ತಿಳಿಸಲಾಗುತ್ತಿದೆ. ಆದರೆ ಸ್ಥಳಾಂತರಗೊಂಡ ಬಳಿಕ ಈ ಬುಲೆಟೆನ್‌ಗಳಿಗೆ ಎಷ್ಟು ಪ್ರಾಮುಖ್ಯತೆ ದೊರೆಯುತ್ತದೆ ಎಂಬುದು ಪ್ರಶ್ನೆ.ಆಕ್ರೋಶ:

ಧಾರವಾಡ ಆಕಾಶವಾಣಿ ಕೇಂದ್ರಕ್ಕೆ ತನ್ನದೇ ಆದ ಛಾಪು, ಜನ ಬೆಂಬಲ ಇತ್ತು. ಇದೀಗ ಅದೇ ಇಲ್ಲಿಂದ ಸ್ಥಳಾಂತರವಾಗುತ್ತಿರುವುದು ಆಕಾಶವಾಣಿ ಕೇಂದ್ರದ ಪ್ರಿಯರಲ್ಲಿ ಬೇಸರವನ್ನುಂಟು ಮಾಡಿದೆ. ಯಾವುದೇ ಕಾರಣಕ್ಕೂ ಇಲ್ಲಿಂದ ನ್ಯೂಸ್‌ ಬುಲೆಟಿನ್‌ ಹೆಸರಲ್ಲಿ ಸ್ಥಳಾಂತರ ಮಾಡುತ್ತಿರುವುದನ್ನು ಕೈ ಬಿಡಬೇಕು. ವರ್ಕ್‌ ಲೋಡ್‌ ಜಾಸ್ತಿಯಾದರೆ ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹ ಕೇಳಿ ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಚ್ಚುವರಿ ಡಯಾಲಿಸಿಸ್ ಘಟಕ ಆರಂಭಿಸುವಂತೆ ಆಗ್ರಹ
ನರಗುಂದ ತಾಲೂಕಿನಲ್ಲಿ ಬಾರದ ಖಾಲಿ ಚೀಲ: ಕಡಲೆ ಖರೀದಿ ಕೇಂದ್ರಗಳೇ ಬಂದ್!