ಧಾರವಾಡ ಐಡಲ್‌ ಆದ ಹುಬ್ಬಳ್ಳಿಯ ರೇಣುಶ್ರೀ ಕೊಡ್ಲಿ

KannadaprabhaNewsNetwork |  
Published : Nov 05, 2025, 02:30 AM IST
4ಡಿಡಬ್ಲೂಡಿ3 ಸೃಜನಾ ರಂಗಮಂದಿರದಲ್ಲಿ ಮಕ್ಕಳ ಅಕಾಡೆಮಿಯು ರಜತ ಮಹೋತ್ಸವದ ನಿಮಿತ್ತ ಗುಜ್ಜಾಡಿ ಸ್ವರ್ಣ ಜುವೆಲರ್ಸ್‌ ಹಾಗೂ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಹಯೋಗದಲ್ಲಿ ಏರ್ಪಡಿಸಿದ್ದ ಧಾರವಾಡ ಐಡಲ್–2025 ಗ್ರ್ಯಾಂಡ್‌ ಪಿನಾಲೆ | Kannada Prabha

ಸಾರಾಂಶ

ಮಕ್ಕಳ ಅಕಾಡೆಮಿಯು ರಜತ ಮಹೋತ್ಸವದ ನಿಮಿತ್ತ ಗುಜ್ಜಾಡಿ ಸ್ವರ್ಣ ಜುವೆಲರ್ಸ್‌ ಹಾಗೂ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಹಯೋಗದಲ್ಲಿ ಏರ್ಪಡಿಸಿದ್ದ ಧಾರವಾಡ ಐಡಲ್–2025 ಗ್ರ್ಯಾಂಡ್‌ ಪಿನಾಲೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಧಾರವಾಡ:

ಮಕ್ಕಳ ಅಕಾಡೆಮಿ ಆಯೋಜಿಸಿದ್ದ ಸಮಾರಂಭದಲ್ಲಿ ಹುಬ್ಬಳ್ಳಿಯ ರೇಣುಶ್ರೀ ಮಂಜುನಾಥ ಕೊಡ್ಲಿಗೆ ಧಾರವಾಡ ಐಡಲ್ ಗುಜ್ಜಾಡಿ ಸ್ವರ್ಣ ಟ್ರೋಫಿ ಹಾಗೂ ₹ 20 ಸಾವಿರ ನಗದು ಪುರಸ್ಕಾರ ಲಭಿಸಿದೆ.

ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ಮಕ್ಕಳ ಅಕಾಡೆಮಿಯು ರಜತ ಮಹೋತ್ಸವದ ನಿಮಿತ್ತ ಗುಜ್ಜಾಡಿ ಸ್ವರ್ಣ ಜುವೆಲರ್ಸ್‌ ಹಾಗೂ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಹಯೋಗದಲ್ಲಿ ಏರ್ಪಡಿಸಿದ್ದ ಧಾರವಾಡ ಐಡಲ್–2025 ಗ್ರ್ಯಾಂಡ್‌ ಪಿನಾಲೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೊದಲ ರನ್ನರ್ ಅಪ್ ಧಾರವಾಡ ಸೃಜನಾ ದೇಸಾಯಿಗೆ ಟ್ರೋಫಿ ಮತ್ತು ₹ 15 ಸಾವಿರ ನಗದು ಪುರಸ್ಕಾರ, ಎರಡನೇ ರನ್ನರ ಅಪ್ ಕಲಕೇರಿಯ ಕಾವೇರಿ ಕರಿಗಾರಗೆ ಟ್ರೋಫಿ ಮತ್ತು ₹10 ಸಾವಿರ ನಗದು ಹಾಗೂ ಹುಬ್ಬಳ್ಳಿಯ ದೀಪಿಕಾ ಎಸ್. ಗೆ ಸಮಾಧಾನಕರ ಬಹುಮಾನದ ಟ್ರೋಫಿ ಮತ್ತು ₹ 2500 ನಗದು ಪುರಸ್ಕಾರ ಪ್ರದಾನ ಮಾಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಕ್ಕಳ ವೈದ್ಯರಾದ ಡಾ. ರಾಜನ್ ದೇಶಪಾಂಡೆ ಅವರು ಇಡೀ ತಮ್ಮ ಜೀವನದ ಐದು ದಶಕಕ್ಕೂ ಹೆಚ್ಚು ಕಾಲ ಮಕ್ಕಳ ಏಳಿಗೆಗಾಗಿ ಸಮರ್ಪಣೆ ಮಾಡಿದ್ದಾರೆ. ಅವರು ಮಕ್ಕಳ ಅಕಾಡೆಮಿ ಸ್ಥಾಪನೆ ಮಾಡಿ ಮಕ್ಕಳಿಗಾಗಿ ವೈದ್ಯಕೀಯ ತಪಾಸಣೆ ಶಿಬಿರ, ಶಿಕ್ಷಣ, ವೈಜ್ಞಾನಿಕ ಕಾರ್ಯಾಗಾರ, ಗ್ರಾಮಗಳ ದತ್ತು ಯೋಜನೆ, ನಾಟಕೋತ್ಸವ ಹಾಗೂ ಸಂಗೀತೋತ್ಸವದಂತಹ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ರಚನಾತ್ಮಕ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

ಡಾ. ರಾಜನ್ ದೇಶಪಾಂಡೆ ಮಾತನಾಡಿ, 25 ವರ್ಷಗಳ ನಿರಂತರ ಸೇವೆಯಲ್ಲಿ ಮಕ್ಕಳ ಅಕಾಡೆಮಿ ಮಾಡಿದ ಕಾರ್ಯಚಟುವಟಿಕೆಗಳು ಬಹಳಷ್ಟಿವೆ. ಬರುವ ದಿನಗಳಲ್ಲಿ ಹೆಚ್ಚಿನ ಯೋಜನೆಗಳಿವೆ ಎಂದರು.

ಹಿಂದೂಸ್ಥಾನಿ ಗಾಯಕಿ ವಿದುಷಿ ಸಂಗೀತಾ ಕಟ್ಟಿ ಮಾತನಾಡಿ, ಮಕ್ಕಳು ಒಳ್ಳೆಯ ಸಂಗೀತಗಾರರಾಗಲು ಶಾಸ್ತ್ರೋಕ್ತ ಸಂಗೀತವನ್ನು ಗುರುಮುಖೇನ ಕಲಿಯುವುದು ಅಗತ್ಯವಿದೆ. ನಾದ, ರಾಗ, ತಾಳ, ಲಯಗಳ ಝೇಂಕಾರವನ್ನು ಧಾರವಾಡ ಐಡಲ್ ಮೂಡಿಸಿದೆ ಎಂದು ಹೇಳಿದರು.

ಗುರುದತ್ತ ನಾಯಕ, ಮಲ್ಲಿಕಾರ್ಜುನ ಚಿಕ್ಕಮಠ, ಡಾ. ಎಂ.ವೈ. ಸಾವತ, ಡಾ. ಪಲ್ಲವಿ ದೇಶಪಾಂಡೆ, ಡಾ. ವಿಜಯ ತ್ರಾಸದ ವೇದಿಕೆಯಲ್ಲಿದ್ದರು. ವಿದುಷಿ ಸುಜಾತಾ ಗುರವ, ಡಾ. ಶ್ರೀಧರ ಕುಲಕರ್ಣಿ ಮತ್ತು ಖ್ಯಾತ ಸಿತಾರವಾದಕ ಉಸ್ತಾದ್ ಶಫಿಕಖಾನ್ ನಿರ್ಣಾಯಕರಾಗಿದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ