;Resize=(412,232))
ಧಾರವಾಡ : ಮಗ ಐಎಎಸ್ ಆಗಬೇಕೆಂದು ಕನಸು ಕಂಡಿದ್ದೆ. ಆದರೆ, ಕೊಲೆಗಾರನಾಗಿದ್ದು ತುಂಬ ಸಂಕಟವಾಗುತ್ತಿದೆ. ತಪ್ಪು ಮಾಡಿದವನಿಗೆ ಶಿಕ್ಷೆಯಾಗಬೇಕು ಎಂದು ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್ ತಾಯಿ ಮುಮ್ತಾಜ್ ಕಣ್ಣೀರು ಹಾಕಿದರು.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೇಹಾ ಕೊಲೆ ಮಾಡಿದ ಪುತ್ರನ ಕಾರ್ಯಕ್ಕೆ ಮುಮ್ತಾಜ್ ರಾಜ್ಯದ ಜನರ ಬಳಿ ಕ್ಷಮೆ ಕೇಳಿದರು.
ಪುತ್ರ ಫಯಾಜ್ ತಾನು ಲವ್ ಮಾಡುತ್ತಿರುವ ವಿಷ ತಿಳಿಸಿದ್ದನು. ನಾನು ಬೇಡ ಎಂದು ನಿರಾಕರಿಸಿದ್ದೇನು. ಅಷ್ಟರಲ್ಲಿ ಇಂತಹ ಕೆಲಸ ಮಾಡಿದ್ದಾನೆ. ಆತನಿಗೆ ತಕ್ಕ ಶಿಕ್ಷೆಯಾಗಬೇಕು. ನೇಹಾ ತುಂಬ ಒಳ್ಳೆಯ ಹುಡುಗಿ ಎಂದು ಹೇಳಿದರು.