ನವಲಗುಂದ:

ರೈತರು ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬೆಳೆ ಬೆಳೆದಿದ್ದು, ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಪ್ರಾರಂಭಿಸಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಎನ್.ಎಚ್.‌ ಕೋನರಡ್ಡಿ ಹೇಳಿದರು.

ತಾಲೂಕಿನ ವಿವಿಧ ಗ್ರಾಮಗಳಾದ ಹಾಳಕುಸುಗಲ್ಳ, ಅಳಗವಾಡಿ, ಹೆಬ್ಬಾಳ, ಮೊರಬ, ಶಿರೂರ ಗ್ರಾಮಗಳಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಕಡಲೆ ಕಾಳು ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.

2025-26ನೇ ಸಾಲಿನಲ್ಲಿ ಅಂದಾಜು 9.24 ಹೆಕ್ಟೇರ್‌ ಪ್ರದೇಶದಲ್ಲಿ 6.27 ಲಕ್ಷ ಮೆಟ್ರಿಕ್‌ ಟನ್‌ ಕಡಲೆ ಬೆಳೆ ಉತ್ಪಾದನೆ ನಿರೀಕ್ಷಿಸಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಕಡಲೆ ಕಾಳಿಗೆ ಪ್ರತಿ ಕ್ವಿಂಟಲ್‌ಗೆ ₹ 5875ರಂತೆ ಗರಿಷ್ಠ 1,01,342 ಮೆಟ್ರಿಕ್‌ ಟನ್‌ ಗುಣಮಟ್ಟದ ಕಡಲೆ ಕಾಳು 90 ದಿನಗಳ ಕಾಲಾವಧಿಯಲ್ಲಿ ಖರೀದಿಸಲು ಸರ್ಕಾರದ ಅನುಮತಿ ನೀಡಿದೆ. ಸ್ಥಳೀಯ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಎಫ್‌.ಪಿ.ಒ, ಟಿಎಪಿಸಿಎಂಎಸ್‌ಗಳ ಮೂಲಕ ಖರೀದಿ ಪ್ರಕ್ರಿಯೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದೆ ಎಂದರು.

ಈ ವೇಳೆ ನಾಗಪ್ಪ ಯಾವಗಲ್, ಪಾಂಡು ಮೇಟಿ, ಶಂಕ್ರಣ್ಣ ಗಾಣಗೇರ, ಬಿ.ಎಲ್. ಜೈನರ, ತಿಪ್ಪಣ್ಣ ಹೊಸಕೇರಿ, ಎನ್.ಎಚ್. ದೇವರಡ್ಡಿ, ಪಾಂಡಪ್ಪ ಮದ್ನೂರ, ಎಸ್.ವಿ. ಯಲ್ಲರಡ್ಡಿ, ಸಂಗಪ್ಪ ಉದಪುಡಿ, ಮುರುಗಯ್ಯಜ್ಜನವರು ವಿರಕ್ತಮಠ, ಮಾಂತೇಶ ಹಂಚಿನಾಳ, ಮಲ್ಲಿಕಾರ್ಜುನ ಕಾಲವಾಡ, ಉಮೇಶ ಮೆಣಸಿನಕಾಯಿ, ಲಕ್ಷ್ಮಣ ನಿಡವಣಿ, ದಾವಲಸಾಬ ಖುದ್ದಣ್ಣವರ, ಫಲಹಾರೇಶ್ವರ ಶ್ರೀ, ಪ್ರಕಾಶ ಬಾಳನಗೌಡ್ರ, ಈರನಗೌಡ ರಾಯನಗೌಡ್ರ, ಮಾಂತೇಶ ಬಾಳನಗೌಡ್ರ ಸೇರಿದಂತೆ ಹಲವರಿದ್ದರು.