ಧಾರವಾಡ:
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಅಂದು ಬೆಳಗ್ಗೆ 8.30ಕ್ಕೆ ಧ್ವಜಾರೋಹಣ, ನಂತರ ಸರ್ವಾಧ್ಯಕ್ಷರ ಮೆರವಣಿಗೆ, ಕನ್ನಡಕ್ಕಾಗಿ ನಡಿಗೆ ಇರಲಿದೆ. 10ಕ್ಕೆ ಹಿರಿಯ ಸಾಹಿತಿ ಪ್ರೊ. ಶಾಂತಿನಾಥ ದಿಬ್ಬದ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು, ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಅಧ್ಯಕ್ಷತೆ ವಹಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ನಿತಿನ್ ಚಂದ್ರ ಹತ್ತಿಕಾಳ ಉಪಸ್ಥಿತರಿರಲಿದ್ದು ರಾಮಚಂದ್ರ ಕುಲಕರ್ಣಿ ಅವರ ಅನುಭೂತ ಅನವರತ ಕೃತಿ ಬಿಡುಗಡೆಯನ್ನು ಮೇಯರ್ ಜ್ಯೋತಿ ಪಾಟೀಲ ನೆರವೇರಿಸುವರು ಎಂದರು.
ಮಧ್ಯಾಹ್ನ 12ಕ್ಕೆ ಕವಿವಿ ಜಾನಪದ ವಿಭಾಗದ ಡಾ. ವಿ.ಎಲ್. ಪಾಟೀಲ ಅಧ್ಯಕ್ಷತೆಯಲ್ಲಿ ಸಾಹಿತ್ಯ ಮತ್ತು ಆರೋಗ್ಯ ಗೋಷ್ಠಿ, ಡಾ. ವೈ.ಎಂ. ಭಜಂತ್ರಿ ಅಧ್ಯಕ್ಷತೆಯಲ್ಲಿ 14 ಕವಿಗಳ ಕವಿಗೋಷ್ಠಿ ನಡೆಯಲಿದೆ. ಸಂಜೆ 4.15ಕ್ಕೆ ಸರ್ವಾಧ್ಯಕ್ಷರೊಂದಿಗೆ ಸಂವಾದ ಹಾಗೂ ತದನಂತರ ಸಮಾರೋಪ ನಡೆಯಲಿದೆ. ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಸಮಾರೋಪ ನುಡಿ ಹೇಳಲಿದ್ದಾರೆ. ಡಾ. ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದ ಅವರು, ಮಾ. 13ರಂದು ಹುಬ್ಬಳ್ಳಿ ತಾಲೂಕು ಸಮ್ಮೇಳನ ಹಾಗೂ ಮಾ. 30,31ರಂದು ಧಾರವಾಡ ಜಿಲ್ಲಾ ಸಮ್ಮೇಳನ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಹಾಂತೇಶ ನರೇಗಲ್, ಪ್ರೊ. ಕೆ.ಎಸ್. ಕೌಜಲಗಿ, ಡಾ. ಎನ್.ಬಿ. ನಾಲತವಾಡ, ಡಾ. ಸರಸ್ವತಿ ಭಗವತಿ, ಮನೋಹರ ನ್ಯಾಮತಿ, ಮಾರ್ತಾಂಡಪ್ಪ ಕತ್ತಿ, ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ ಇದ್ದರು.