ಲೋಕಾಪುರ ಪಟ್ಟಣದಲ್ಲಿ ಡಯಾಬಿಟ್ ಆಸ್ಪತ್ರೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಲೋಕಾಪುರಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಡಯಾಬಿಟಿಸ್ ಆಸ್ಪತ್ರೆ ಲೋಕಾಪುರ ಪಟ್ಟಣದಲ್ಲಿ ಉದ್ಘಾಟನೆಗೊಂಡಿರುವುದು ಸಂತಸ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಿಸಿದ ರಾಮದುರ್ಗ ಪಟ್ಟಣದ ವೈದ್ಯ ಡಾ. ಸೈಯದಲಿ ಅಲ್ಲಿಸಾಹೇಬನವರ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಬಡಜನರಿಗೆ, ಕೂಲಿಕಾರರಿಗೆ, ಮಧ್ಯಮವರ್ಗದ ಜನರಿಗೆ ಲೋಕಾಪುರ ಪಟ್ಟಣದಲ್ಲಿ ಇಂತಹ ಆಸ್ಪತ್ರೆ ಅವಶ್ಯವಿತ್ತು. ಎಲ್ಲರೂ ಈ ಆಸ್ಪತ್ರೆಯಲ್ಲಿರುವ ವಿವಿಧ ಚಿಕಿತ್ಸೆ ಪಡೆದುಕೊಂಡು ಆರೋಗ್ಯವಾಗಿರಲು ಸಲಹೆ ನೀಡಿದರು.
ಖ್ಯಾತ ವೈದ್ಯ ಡಾ.ಗಿರೀಶ ಸೋನವಾಲಕರ ಮಾತನಾಡಿ, ಆರೋಗ್ಯವೇ ಭಾಗ್ಯ ಎನ್ನುವರ ನಾಣ್ನುಡಿಯಿದೆ. ಆರೋಗ್ಯವೊಂದಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಅನಾರೋಗ್ಯ ಕಾಡುತ್ತಲಿದ್ದರೆ, ಯಾವ ಕೆಲಸ ಮಾಡಲೂ ಮನಸ್ಆ ಕೊಡಲಾಗದು. ಹೀಗಾಗಿ ಆರೋಗ್ಯಕ್ಕೆ ನಾವೆಲ್ಲರೂ ಮೊದಲ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.
ಡಾ.ಸೈಯದಲಿ ಅಲ್ಲಿಸಾಹೇಬನವರ ಮಾತನಾಡಿ, ಲೋಕಾಪುರ ಪಟ್ಟಣದಲ್ಲಿ ಕಡಿಮೆ ದರದಲ್ಲಿ ೨೪ ಗಂಟೆಗಳ ಕಾಲ ಬಡವರ, ಮಹಿಳೆಯರ, ಅನುಕೂಲಕ್ಕಾಗಿ ಈ ಅಸ್ಪತ್ರೆ ಲೋಕಾರ್ಪಣೆ ಮಾಡಲಾಗಿದೆ. ಎಲ್ಲರ ಸಹಕಾರ ನೀಡಿ ಅತಿ ಕಡಿಮೆ ದರದಲ್ಲಿ ಸೇವೆ ನೀಡಲಾಗುತ್ತದೆ. ಗ್ರಾಮಾಂತರ ಭಾಗದ ಜನರ ಆಶೋತ್ತರಗಳಿಗೆ ಸ್ಪಂದನೆ ನೀಡಿ ಚಿಕಿತ್ಸೆ ನೀಡಲಾಗುವುದು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.