ಮನುಷ್ಯ ಕಾಯಿಲೆಗಳಿಗೆ ಆಹಾರ ಪದ್ಧತಿಯೇ ಕಾರಣ

KannadaprabhaNewsNetwork |  
Published : Jan 13, 2026, 02:30 AM IST
ಫೋಟೋ: 9 ಹೆಚ್‌ಎಸ್‌ಕೆ 1ಹೊಸಕೋಟೆ ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಆದಿತ್ಯ ಬಿರ್ಲಾ ಪ್ಯಾಷನ್ ಅಂಡ್ ರಿಟೇಲ್ ಜನ ಕಲ್ಯಾಣ ಟ್ರಸ್ಟ್ನ ಸಿಎಸ್‌ಆರ್ ಅನುಧಾನದಡಿ ನೇತ್ರ ತಪಾಸಣಾಧಾರಿಗಳಿಗೆ ಕನ್ನಡಕಗಳನ್ನು ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ವಿತರಿಸಿದರು. | Kannada Prabha

ಸಾರಾಂಶ

ಹೊಸಕೋಟೆ: ಇತ್ತೀಚಿನ ದಿನಗಳಲ್ಲಿ ಪೌಷ್ಟಿಕ ರಹಿತ ಆಹಾರ ಮತ್ತು ಒತ್ತಡದ ಜೀವನ ಶೈಲಿಯಿಂದ ಸಾಕಷ್ಟು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಭಕ್ತರಹಳ್ಳಿ ರಾಮಚಂದ್ರ ತಿಳಿಸಿದರು

ಹೊಸಕೋಟೆ: ಇತ್ತೀಚಿನ ದಿನಗಳಲ್ಲಿ ಪೌಷ್ಟಿಕ ರಹಿತ ಆಹಾರ ಮತ್ತು ಒತ್ತಡದ ಜೀವನ ಶೈಲಿಯಿಂದ ಸಾಕಷ್ಟು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಭಕ್ತರಹಳ್ಳಿ ರಾಮಚಂದ್ರ ತಿಳಿಸಿದರು.

ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಆದಿತ್ಯ ಬಿರ್ಲಾ ಪ್ಯಾಷನ್ ಆ್ಯಂಡ್ ರಿಟೇಲ್ ಜನ ಕಲ್ಯಾಣ ಟ್ರಸ್ಟ್ ನ ಸಿಎಸ್‌ಆರ್ ಅನುದಾನದಡಿ ನೇತ್ರ ತಪಾಸಣೆ ಮಾಡಿಸಿ ಅಗತ್ಯವುಳ್ಳವರಿಗೆ ಕನ್ನಡಕ ವಿತರಿಸಿ ಮಾತನಾಡಿದ ಅವರು, ಪ್ರಸ್ತುತ ಮನುಷ್ಯ ಮಧುಮೇಹ, ರಕ್ತದೊತ್ತಡ, ಕಣ್ಣಿನ ಸಮಸ್ಯೆ, ಹಲ್ಲಿನ ಸಮಸ್ಯೆ ಸೇರಿ ಮೂಳೆ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಆದ್ದರಿಂದ ಸ್ವಯಂ ಸೇವಾ ಸಂಸ್ಥೆಗಳು, ವಿವಿಧ ಖಾಸಗಿ ಆಸ್ಪತ್ರೆಗಳು ಗ್ರಾಮೀಣ ಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಆದಿತ್ಯ ಬಿರ್ಲಾ ಪ್ಯಾಷನ್ ಆ್ಯಂಡ್ ರಿಟೇಲ್ ಜನ ಕಲ್ಯಾಣ ಟ್ರಸ್ಟ್ನ ಸಿಎಸ್‌ಆರ್ ವ್ಯವಸ್ಥಾಪಕ ಮುನಿರಾಜು ಮಾತನಾಡಿ, ತಾಲೂಕಿನ ಪ್ರತಿ ಗ್ರಾಮವನ್ನು ಅಂಧತ್ವ ರಹಿತವನ್ನಾಗಿಸುವ ಆಶಯದಿಂದ ಪ್ರತಿ ಹಳ್ಳಿಯಲ್ಲೂ ಮನೆ ಬಾಗಿಲಿಗೆ ತೆರಳಿ ಕಣ್ಣಿನ ತಪಾಸಣೆ ಮಾಡುವ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ. ಗ್ರಾಮಸ್ಥರು ಕೀಳರಿಮೆ ತೊರೆದು ತಪಾಸಣೆ ಮಾಡಿಸಿಕೊಂಡು ಅಗತ್ಯವಿದ್ದರೆ ಚಿಕಿತ್ಸೆಗೂ ಸಹಕರಿಸಬೇಕು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ