ಹುಟ್ಟುಹಬ್ಬ ವಿಭಿನ್ನ ಆಚರಣೆ: ಚಂದ್ರಶೇಖರ ಸ್ವಾಮೀಜಿ ಸಂಕಲ್ಪ

KannadaprabhaNewsNetwork |  
Published : Oct 24, 2026, 02:45 AM IST
ಹುಟ್ಟು ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಿರುವ ಆಧ್ಯಾತ್ಮಿಕ ಗುರು ಶ್ರೀ ಚಂದ್ರಶೇಖರ ಸ್ವಾಮೀಜಿ  | Kannada Prabha

ಸಾರಾಂಶ

ಅಂತಾರಾಷ್ಟ್ರೀಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಹಾಗೂ ಆಧ್ಯಾತ್ಮಿಕ ಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಹುಟ್ಟುಹಬ್ಬ ಭಾನುವಾರ ನಡೆಯಲಿದ್ದು ಅಂದು ಅವರ ಹುಟ್ಟೂರು ಮೂಲ್ಕಿ ಸಹಿತ ಬೆಂಗಳೂರಿನಲ್ಲಿ ಸ್ವಾಮೀಜಿಯವರ ಸೇವಾಶ್ರಮದ ಮೂಲಕ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೇವಾಶ್ರಮದ ಗೌರವಾಧ್ಯಕ್ಷ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.

ಮೂಲ್ಕಿ: ಅಂತಾರಾಷ್ಟ್ರೀಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಹಾಗೂ ಆಧ್ಯಾತ್ಮಿಕ ಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಹುಟ್ಟುಹಬ್ಬ ಭಾನುವಾರ ನಡೆಯಲಿದ್ದು ಅಂದು ಅವರ ಹುಟ್ಟೂರು ಮೂಲ್ಕಿ ಸಹಿತ ಬೆಂಗಳೂರಿನಲ್ಲಿ ಸ್ವಾಮೀಜಿಯವರ ಸೇವಾಶ್ರಮದ ಮೂಲಕ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೇವಾಶ್ರಮದ ಗೌರವಾಧ್ಯಕ್ಷ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು 25ರಂದು ಶ್ರೀ ಚಂದ್ರಶೇಖರ ಸ್ವಾಮೀಜಿ ಸಕುಟುಂಬಿಕರಾಗಿ ತಮ್ಮ ಆರಾಧ್ಯ ಕ್ಷೇತ್ರವಾಗಿರುವ ತಿರುಪತಿ ತಿಮ್ಮಪ್ಪ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಯುಎಇ ಅರಬ್ ದೇಶದಲ್ಲಿ ನಡೆಯುವ ವಿಶೇಷ ಧಾರ್ಮಿಕತೆಯ ಚಿಂತನಾ-ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರು ವಿದೇಶ ಪ್ರವಾಸದಲ್ಲಿದ್ದರೂ ಸಹ ಬೆಂಗಳೂರು ಮತ್ತು ಮೂಲ್ಕಿಯ ಅವರ ಆಶ್ರಮದ ಮೂಲಕ ವಿವಿಧ ಸಾಮಾಜಿಕ ಕಾರ್ಯವನ್ನು ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದರು.

ವಿವಿಧ ಸೇವಾ ಕಾರ್ಯಕ್ರಮ: ಹುಟ್ಟು ಹಬ್ಬವನ್ನು ವಿವಿಧ ಸಾಮಾಜಿಕ ಚಟುವಟಿಕೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಹುಟ್ಟೂರಿನ ಅಭಿಮಾನದಿಂದ ಅವರ ಭಕ್ತರು ಹಾಗೂ ಅಭಿಮಾನಿಗಳು ಸೇರಿಕೊಂಡು ಮೂಲ್ಕಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿರುವ ಎಲ್ಲ ರೋಗಿಗಳಿಗೆ ವಿಶೇಷವಾಗಿ ಹಣ್ಣು ಹಂಪಲು ವಿತರಣೆ, ಬೆಂಗಳೂರಿನ ವಿಶೇಷ ವಿಕಲಚೇತನ ಮಕ್ಕಳ ಶಾಲೆಗೆ ಹಾಗೂ ವೃದ್ಧಾಶ್ರಮಕ್ಕೆ ಊಟೋಪಚಾರ ಹಾಗೂ ಉಡುಗೊರೆ ಕೊಡುಗೆ, ಶ್ರಮಿಕರಿಗೆ, ದುರ್ಬಲ ವರ್ಗದವರ ಸಹಿತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ನೆರವು, ಬೆಂಗಳೂರಿನ ಸೇವಾಶ್ರಮದಲ್ಲಿ ನಿರಂತರ ಧಾರ್ಮಿಕ ಕಾರ್ಯಕ್ರಮದೊಂದಿಗೆ ಬಡವರ್ಗದವರಿಗೆ ಉಚಿತ ಕೊಡುಗೆಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಸಿದ್ಧತೆಯೂ ಸಂಪೂರ್ಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಹುಟ್ಟೂರಿನಲ್ಲಿ ನಿರಂತರ ಸೇವಾ ಚಟುವಟಕೆ: ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಸೇವಾಶ್ರಮದ ಮೂಲಕ ನಿರಂತರ ಸಾಮಾಜಿಕ ಚಟುವಟಿಕೆಗೆ ವಿಶೇಷ ಆದ್ಯತೆ ನೀಡಿದ್ದಾರೆ. ಶೈಕ್ಷಣಿಕ ನೆರವು, ಸಾಧಕ ಕ್ರೀಡಾಳುಗಳಿಗೆ ಗೌರವ, ಮಹಿಳೆಯರಿಗೆ ಶುಭದಿನದ ಉಡುಗೊರೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹ, ಸರಕಾರಿ ಹಾಗೂ ಖಾಸಗಿ ಸಂಸ್ಥೆಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಸಂಘ ಸಂಸ್ಥೆಗಳ ಪ್ರಮುಖರಿಗೆ ಗೌರವ ಸನ್ಮಾನದ ಜೊತೆಗೆ ಬೆಂಗಳೂರಿನಂತಹ ನಗರ ಪ್ರದೇಶದಲ್ಲಿರುವ ಹೈಟೆಕ್ ಬಸ್ ನಿಲ್ದಾಣವನ್ನು ಲಕ್ಷಾಂತರ ರು. ವೆಚ್ಚದಲ್ಲಿ ತಮ್ಮ ಹುಟ್ಟೂರಿನ(ಮೂಲ್ಕಿ-ಕಿಲ್ಪಾಡಿಯ ರಾಜ್ಯ ಹೆದ್ದಾರಿಯ)ಲ್ಲಿಯೇ ತೀರ್ಥರೂಪರಾದ ಕೀರ್ತಿಶೇಷ ಗೋವಿಂದ ಭಟ್ ಅವರ ಸ್ಮರಣಾರ್ಥವಾಗಿ ನಿರ್ಮಿಸಿ ಅದರ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದು, ಇದು ಜನಾಕರ್ಷಣೆಯ ಬಸ್‌ನಿಲ್ದಾಣವಾಗಿದೆ. ತಮ್ಮ ಜನ್ಮದಿನಾಚರಣೆಯನ್ನು ಆಶ್ರಮದ ಅಭಿಮಾನಿಗಳ ಮೂಲಕ ಮೂಲ್ಕಿಯ ಸಿಎಸ್‌ಐ ಬಾಲಿಕಾಶ್ರಮದಲ್ಲಿ ಮಕ್ಕಳೊಂದಿಗೆ ಸಂಭ್ರಮಿಸುವ ಕಾರ್ಯಕ್ರಮವೂ ಹಲವಾರು ವರ್ಷಗಳಿಂದ ಹಮ್ಮಿಕೊಳ್ಳಲಾಗಿದೆ ಎಂದು ಸೇವಾಶ್ರಮದ ವಕ್ತಾರ ನರೇಂದ್ರ ಕೆರೆಕಾಡು ತಿಳಿಸಿದ್ದಾರೆ. ಆಡಂಬರ ಇಲ್ಲ: ಹುಟ್ಟು ಹಬ್ಬದ ಬಗ್ಗೆ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಪ್ರತಿಕ್ರಿಯಿಸಿ, ಪ್ರತೀ ವರ್ಷವು ತಮ್ಮ ಹುಟ್ಟು ಹಬ್ಬವನ್ನು ವಿವಿಧ ಅನಾಥಶ್ರಮ ಹಾಗೂ ಬಡವರ್ಗದವರಿಗೆ ವಿವಿಧ ರೀತಿಯಲ್ಲಿ ನೆರವು ನೀಡುವ ಕಾರ್ಯಕ್ರಮ ಹಾಗೂ ದೀಪಾವಳಿ ಸಂಭ್ರಮವನ್ನು ಶ್ರಮಿಕರೊಂದಿಗೆ ಆಚರಿಸುವ ಪರಿಪಾಠವಿದೆ.ಹಲವು ವರ್ಷಗಳಿಂದಲೂ ನಮ್ಮ ಆಶ್ರಮದ ಭಕ್ತಾದಿಗಳು, ಅಭಿಮಾನಿಗಳು ಕುಟುಂಬಿಕರೊಂದಿಗೆ ನಡೆಸುತ್ತಾ ಬಂದಿದ್ದೇವೆ. ಶೋಷಿತ ಹಾಗೂ ಶ್ರಮಿಕರ ಏಳಿಗೆಗೆ ಸದಾ ಸ್ಪಂದಿಸುವ ಮನೋಭಾವನೆ ವರ್ಷಂಪ್ರತಿ ಹೆಚ್ಚಾಗುತ್ತಿದೆ. ಸಮಾಜದಿಂದ ಪಡೆಯುವ ನಾವು ಮರಳಿ ಸಮಾಜಕ್ಕೆ ಅರ್ಪಿಸುವ ಕೈಂಕರ್ಯಕ್ಕೆ ಹಿರಿಯರ ಆದರ್ಶವೇ ಕಾರಣ, ಆಡಂಬರ ಇಲ್ಲದೇ ಸರಳವಾಗಿ ಕಾರ್ಯಕ್ರಮ ರೂಪಿಸುವ ಕೆಲಸ ನಮ್ಮ ಸೇವಾಶ್ರಮದ ಭಕ್ತಾದಿಗಳು ನಡೆಸುತ್ತಿದ್ದಾರೆ. ಇದಕ್ಕೆ ನಮ್ಮ ಮಾರ್ಗದರ್ಶನ ನೀಡುತ್ತಿದ್ದೇವೆ. ಸಮಾಜವು ಸಹ ನಮ್ಮಿಂದ ಬಹಳಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದೆ, ನವೆಂಬರ್ ಎರಡನೇ ವಾರದಲ್ಲಿ ನನ್ನ ಉಪಸ್ಥಿತಿಯಲ್ಲಿ ದೀಪಾವಳಿಯ ಸಂಭ್ರಮಕ್ಕೆ ತಯಾರಿ ನಡೆದಿದ್ದು, ವಿದೇಶದಿಂದ ಆಗಮನದ ತಕ್ಷಣ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಆಶ್ರಮದ ಸಂಚಾಲಕ ಪುನೀತ್ ಕೃಷ್ಣ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಡಿ ಇಗ್ಗುತ್ತಪ್ಪ ಸನ್ನಿಧಿ: 27ರಂದು ‘ಪತ್ತಾಲೋಧಿ’ ಆರಾಧನೆ
ಡಾ.ಹೆಗ್ಗಡೆ ಪಟ್ಟಾಭಿಷೇಕ 59ನೇ ವರ್ಧಂತಿ ಇಂದು