ಉಡುಪಿ ಜಿಲ್ಲಾದ್ಯಂತ ಭಾರಿ ಮಳೆ: ಮನೆಗೆ ಹಾನಿ

KannadaprabhaNewsNetwork |  
Published : Oct 24, 2026, 02:45 AM IST
 | Kannada Prabha

ಸಾರಾಂಶ

ಗುರುವಾರ ಶುಕ್ರವಾರ ಸಂಜೆಯೂ ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದೆ. ಮಧ್ಯಾಹ್ನ 4 ಗಂಟೆ ಹೊತ್ತಿಗೆ ಆರಂಭವಾದ ಮಳೆ ತಡರಾತ್ರಿಯವರೆಗೂ ಸುರಿಯುತ್ತಿತ್ತು. ಹವಾಮಾನ ಇಲಾಖೆ ಇನ್ನೂ ಒಂದೆರಡು ದಿನ ಕರಾವಳಿ ಜಿಲ್ಲೆಗಳಲ್ಲಿ ಉತ್ತಮಯಾಗುವ ಬಗ್ಗೆ ಮುನ್ಸೂಚನೆ ನೀಡಿದೆ.

ಉಡುಪಿ ; ಗುರುವಾರ ಶುಕ್ರವಾರ ಸಂಜೆಯೂ ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದೆ. ಮಧ್ಯಾಹ್ನ 4 ಗಂಟೆ ಹೊತ್ತಿಗೆ ಆರಂಭವಾದ ಮಳೆ ತಡರಾತ್ರಿಯವರೆಗೂ ಸುರಿಯುತ್ತಿತ್ತು. ಹವಾಮಾನ ಇಲಾಖೆ ಇನ್ನೂ ಒಂದೆರಡು ದಿನ ಕರಾವಳಿ ಜಿಲ್ಲೆಗಳಲ್ಲಿ ಉತ್ತಮಯಾಗುವ ಬಗ್ಗೆ ಮುನ್ಸೂಚನೆ ನೀಡಿದೆ.

ಹಲವು ದಿನಗಳಿಂದ ಬಿಸಿಲಿಗೆ ಬಸವಳಿದ್ದ ಜನರು ಈ ಮಳೆಯಿಂದ ಸಮಾಧಾನಪಟ್ಟರೆ, ಜಿಲ್ಲೆಯಾದ್ಯಂತ ಭತ್ತದ ಬೆಳೆ ಮಾಗುತ್ತಿದ್ದು ಕೊಯಿಲಿಗೆ ಸಿದ್ದವಾಗುತ್ತಿದೆ, ಕೆಲವು ರೈತರ ಫಸಲು ಹಣ್ಣಾಗಿದ್ದು ಕಟಾವಿಗೆ ದಿನ ನಿಗದಿ ಮಾಡಿದ್ದಾರೆ, ಅವರೆಲ್ಲರೂ ಈ ಅಕಾಲಿಕ ಮಳ‍ೆಯಿಂದ ಆತಂಕಿತರಾಗಿದ್ದಾರೆ.

ಗುರುವಾರ ರಾತ್ರಿಯ ಮಳೆ ಸಿಡಿಲಿಗೆ ಕಾರ್ಕ‍‍ಳ ತಾಲೂಕಿನ ನಿಟ್ಟೆ ಗ್ರಾಮದ ಚಂದ್ರಯ್ಯ ಆತಾರಿ ಅವರ ಮನೆಗೆ ಭಾಗಶಃ ಹಾನಿಯಾಗಿದ್ದು, ಸುಮಾರು 30 ಸಾವಿರ ರು. ನಷ್ಟ ಅಂದಾಜಿಸಲಾಗಿದೆ.ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸರಾಸರಿ 23.60 ಮಿ.ಮೀ. ಮಳೆಯಾಗಿದೆ. ಉಳಿದಂತೆ ತಾಲೂಕುವಾರು ಕಾರ್ಕಳ 31.20, ಕುಂದಾಪುರ 22.50, ಉಡುಪಿ 19.40, ಬೈಂದೂರು 30.10, ಬ್ರಹ್ಮಾವರ 14.20, ಕಾಪು 31.40, ಹೆಬ್ರಿ 12.90 ಮಿ.ಮೀ. ಮಳೆ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಡಿ ಇಗ್ಗುತ್ತಪ್ಪ ಸನ್ನಿಧಿ: 27ರಂದು ‘ಪತ್ತಾಲೋಧಿ’ ಆರಾಧನೆ
ಡಾ.ಹೆಗ್ಗಡೆ ಪಟ್ಟಾಭಿಷೇಕ 59ನೇ ವರ್ಧಂತಿ ಇಂದು